ಬೆಳಗಾವಿ ಪಾಲಿಕೆ ಎದುರಿನ ಕನ್ನಡ ಧ್ವಜ ತೆರವಿಗೆ ಡಿ. 31ರ ಗಡು ನೀಡಿದ ಎಮ್ ಇಎಸ್ ಮುಖಂಡರು
ಬೆಳಗಾವಿ, ಡಿ, 29: ಬರುವ ಡಿಸೆಂಬರ್ 31ರ ಒಳಗಾಗಿ ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಕನ್ನಡ ಹೋರಾಟಗಾರರು ಹಾಕಿರುವ ಕನ್ನಡ ಧ್ವಜವನ್ನು ತೆರವು ಮಾಡಬೇಕು ಇಲ್ಲವಾದಲ್ಲಿ ನಾವು ಅದೇ ಸ್ಥಳದಲ್ಲಿ ಭಗ್ವಾ ಧ್ವಜವನ್ನು ಹಾರಿಸುವದಾಗಿ ಎಮ್ ಇಎಸ್ ಮುಖಂಡರು ಹೇಳಿದ್ದಾರೆ.
ನಗರದ ಪೊಲೀಸ ಆಯುಕ್ತರಿಗೆ ಮನವಿಯೊಂದನ್ನು ಅರ್ಪಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಎಮ್ ಇ ಎಸ್ ಮುಖಂಡ ಶಿವಂ ಈ ಕುರಿತು ನಾವು ಪೊಲೀಸ ಆಯುಕ್ತರಿಗೆ ಮನವಿಯಲ್ಲಿ ಈ ಬಗ್ಗೆ ತಿಳಿಸಲಾಗಿದೆ. ಸೋಮವಾರ ಬೆಳಿಗ್ಗೆ ಕನ್ನಡ ಹೋರಾಟಗಾರರು ಪಾಲಿಕೆ ಮುಂದೆ ಅನಧಿಕೃತ ಧ್ವಜ ಹಾಕಿದ್ದಾರೆ. ಅಲ್ಲದೆ ಈ ಧ್ವಜದಿಂದ ರಾಷ್ಟ್ರದ ಧ್ವಜಕ್ಕೆ ಅವಮಾನ ಮಾಡಲಾಗಿದೆ ಅಂತೆ ಈ ಬಗ್ಗೆ ಸ್ಥಳದಲ್ಲಿ ಪೊಲೀರು ಇದ್ದರು ಯಾವ ಕ್ರಮಕೈಗೊಂಡಿಲ್ಲ ಎಂದು ದೂರಿದರು. ಹೀಗಾಗಿ ಬರುವ ಡಿಸೆಂಬರ್ 31ರ ಒಳಗಾಗಿ ಕನ್ನಡ ಧ್ವಜ ತೆರವು ಮಾಡದಿದ್ದಲ್ಲಿ ನಾವು ಅಲ್ಲಿ ಭಗ್ವಾ ಧ್ವಜವನ್ನು ಹಾಕುತ್ತೇವೆ ಎಂದು ಬೇದರಿಯನ್ನು ಎಮ್ ಇ ಎಸ್ ಮುಖಂಡರು ಹಾಕಿದ್ದಾರೆ.