ಪುನೀತ್ ತಂದೆಯನ್ನು ಮೀರಿದ ಮಗ : ಸಾ ರಾ ಗೋವಿಂದು
ಬೆಂಗಳೂರು, ನ. 16 ಅದ್ಭುತ ಕಲಾವಿದ ಪುನೀತ್ ರಾಜ್ ಕುಮಾರ್ ತಂದೆಯನ್ನು ಮೀರಿದ ಮಗ ಎಂದು ನಿರ್ಮಾಪಕ ಸಾ ರಾ ಗೋವಿಂದು ಬಣ್ಣಿಸಿದ್ದಾರೆ.
ಪುನೀತ್ ನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಪುನೀತ್ ಅಗಲಿಕೆಯ ನೋವು ಶಾಶ್ವತ. ಅವರ ಅಕಾಲಿಕ ಸಾವಿನ ಬಳಿಕ ಸತತ 11 ದಿನಗಳ ಕಾಲ ರಾಜ್ಯದ ಮುಖ್ಯಮಂತ್ರಿ, ವಿಪಕ್ಷಗಳು ನೀಡಿದ ಸಹಕಾರ ಅಪಾರ ಎಂದರು.
ಅಪ್ಪು ಸಣ್ಣ ವಯಸ್ಸಿನಲ್ಲೇ ರಾಷ್ಟ್ರಪ್ರಶಸ್ತಿಗೆ ಭಾಜನರಾರದರು. ಮನೆಯವರ ಅರಿವಿಗೇ ಬಾರದಂತೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಗುಣಗಳ ಗಣಿಯಾಗಿದ್ದರು. ನಿಜಕ್ಕೂ ಪುನೀತ್ ತಂದೆಯನ್ನು ಮೀರಿದ ಮಗ ಎಂದು ಹೇಳಿದರು.