ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ
ಮಹಾಲಿಂಗಪುರ 09: ಸ್ಥಳೀಯ ಕೆಂಗೇರಿಮಡ್ಡಿ ನಿವಾಸಿ ಹವ್ಯಾಸಿ ಚಿತ್ರಕಲಾ ಶಿಕ್ಷಕ ರಾಘವೇಂದ್ರ ಆರಿ ಅವರು ಮಹಿಳಾ ದಿನಾಚರಣೆ ನಿಮಿತ್ತ ತಾವು ಬಿಡಿಸಿದ ಮಹಿಳೆಯ ನಾನಾ ಭಾವ, ಭಂಗಿಯ, ನಾನಾ ಸಂದೇಶ ಸಾರುವ 300ಕ್ಕೂ ಹೆಚ್ಚು ವೈವಿಧ್ಯಮಯ ಚಿತ್ರಕಲೆಗಳನ್ನು ಸಂಗ್ರಹಿಸಿ ಇಲ್ಲಿನ ಕೆಎಲ್ಇ ಪಾಲಿಟೆಕ್ನಿಕ್ನ ಗ್ರಂಥಾಲಯದಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಿ ಗಮನ ಸೆಳೆದರು. ನೂರಾರು ವಿದ್ಯಾರ್ಥಿಗಳು ಹಾಗೂ ಮಹಿಳೆಯರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.