ಸೋಷಿಯಲ್ ಮೀಡಿಯಾದಿಂದ ಮಕ್ಕಳ ಮೇಲೆ ಪರಿಣಾಮ ಬೀರದಿರಲಿ : ಕಲ್ಲಿನಾಥ ಸ್ವಾಮೀಜಿ

ಸೋಷಿಯಲ್ ಮೀಡಿಯಾದಿಂದ ಮಕ್ಕಳ ಮೇಲೆ ಪರಿಣಾಮ ಬೀರದಿರಲಿ : ಕಲ್ಲಿನಾಥ ಸ್ವಾಮೀಜಿ



ಕೊಲ್ಹಾರ 13: ಈ ಜಗತ್ತಿನಲ್ಲಿ ಶಿಕ್ಷಣ ಕಲಿತವರು ಹಾಳಾಗಿದ್ದಾರೆ ಸಂಸ್ಕಾರ ಕಲಿತವರು ಎಂದು ಹಾಳಾಗಿಲ್ಲಾ ಎಂದು ದಿಗಂಬರೇಶ್ವರ ಸಂಸ್ಥಾನ ಮಠದ ಪರಮ ಪೂಜ್ಯ ಕಲ್ಲಿನಾಥ ಸ್ವಾಮೀಜಿ ಹೇಳಿದರು. ಪಟ್ಟಣದಲ್ಲಿ ಗುರುವಾರ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಪಟ್ಟಣದ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಪ್ರಾರಂಭವಾಗಿ ಒಂದೆ ವರ್ಷದಲ್ಲಿ 24 ವಿದ್ಯಾರ್ಥಿಗಳು ವಿವಿಧ ವಸತಿ ಶಾಲೆಗಳಿಗೆ  ಆಯ್ಕೆಯಾಗಿದ್ದು ನೋಡಿದರೆ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕಲಿಸುವ ಈ ಶಾಲೆ ಮುಂದಿನ ದಿನಮಾನಗಳಲ್ಲಿ ಅತ್ಯಂತ ಪ್ರತಿಷ್ಟಿತ ಶಾಲೆಯಾಗಿ ಹೊರಹೊಮ್ಮಲಿದೆ  ಎಲ್ಲಿ ನಿಸ್ವಾರ್ಥ ಸೇವೆ ಇರುತ್ತದೆಯೋ ಅಲ್ಲಿ ಅವರು ಬಹಳ ಬೇಗ ಬೆಳವಣಿಗೆ ಆಗುತ್ತಾರೆ  ಎಂದರು. ಕೊಲ್ಹಾರ ಪೋಲಿಸ ಠಾಣೆಯ ಪಿಎಸ್‌ಐ ಅಶೋಕ ನಾಯಕ ಮಾತನಾಡಿ ತಂದೆ ತಾಯಿಗಳು ಮಕ್ಕಳಿಗೆ ಏನನ್ನು ಕಲಿಸುತ್ತಾರೆ. ಅದನ್ನೆ ಮಕ್ಕಳು ಕಲಿಯುತ್ತಾರೆ ಪಾಲಕರು ಮಕ್ಕಳಿಗೆ ಓದುವ ಸಂದರ್ಭದಲ್ಲಿ ಮೊಬೈಲ್, ಟಿವಿ ಇಂದ ದೂರ ಇಡಬೇಕು ಇರದೆ ಹೋದರೆ ಮುಂದೆ ಅವು ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ ಇಂದಿನ ಸೋಷಿಯಲ್ ಮೀಡಿಯಾ ಒಳ್ಳೆಯದು ಹಾಗೂ ಕೆಟ್ಟದು ಕೂಡಾ ಇದೆ  ಅದನ್ನು ನಾವು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಅಧ್ಯಕ್ಷ ವಿವೇಕಾನಂದ ಹರನಟ್ಟಿ, ಶರಣಯ್ಯ ಭಂಡಾರಿಮಠ, ಸಿದ್ದಪ್ಪ ಬಾಲಗೊಂಡ, ಬಿ ಎಸ್ ಹಂಗರಗಿ, ಇತರರು ಇದ್ದರು. 


ಸುದ್ದಿ ಓದಿ