ಮನರಂಜನೆ

ಫಾರ್ಮ್‌ಹೌಸ್‌ನಲ್ಲಿ ಸಲ್ಮಾನ್ ಖಾನ್​​ಗೆ ಕಚ್ಚಿದ ಹಾವು: ಚಿಕಿತ್ಸೆ ಬಳಿಕ ಡಿಸ್ಚಾರ್ಜ್

ಫಾರ್ಮ್‌ಹೌಸ್‌ನಲ್ಲಿ ಸಲ್ಮಾನ್ ಖಾನ್​​ಗೆ ಕಚ್ಚಿದ ಹಾವು: ಚಿಕಿತ್ಸೆ ಬಳಿಕ ಡಿಸ್ಚಾರ್ಜ್

ಮುಂಬೈ: ಡಿ, 26:  ಬಾಲಿವುಡ್​ ನಟ ಸಲ್ಮಾನ್ ಖಾನ್​ಗೆ ಡಿ. 26 ರ ಭಾನುವಾರ ಮುಂಜಾನೆ ಪನ್ವೆಲ್‌ನಲ್ಲಿರುವ ಅವರ ಫಾರ್ಮ್‌ಹೌಸ್‌ನಲ್ಲಿ ಹಾವು ಕಚ್ಚಿದೆ.

ತಕ್ಷಣ ಅವರನ್ನು ಮುಂಬೈನ ಕಾಮೋಥೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರಿಗೆ ವಿಷವಿಲ್ಲದ ಹಾವು ಕಚ್ಚಿದೆ ಎಂದು ವರದಿಯಾಗಿದೆ. ಚಿಕಿತ್ಸೆ ಪಡೆದ ನಂತರ ಸಲ್ಮಾನ್ ಖಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ದಬಾಂಗ್ ನಟ ಈಗ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.

ಅವರು ಫಾರ್ಮ್​ಹೌಸ್​ನಲ್ಲಿ ವಾಯುವಿಹಾರ ಮಾಡುತ್ತಿದ್ದಾಗ ಹಾವು ಕಚ್ಚಿದೆ. ಸಲ್ಮಾನ್ ಅವರ ಫಾರ್ಮ್‌ಹೌಸ್ ದೊಡ್ಡದಾಗಿದ್ದು, ಸಾಕಷ್ಟು ಅರಣ್ಯ ಪ್ರದೇಶವನ್ನು ಹೊಂದಿದೆ. ಅಲ್ಲಿ ಹಲವಾರು ಪಕ್ಷಿಗಳು ಮತ್ತು ಪ್ರಾಣಿಗಳು ಸಹ ಇವೆ.

ಸುದ್ದಿ ಓದಿ