ನಾಡು ಕಂಡ ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳು ಇನ್ನಿಲ್ಲ : ದೇಶ ವಿದೇಶಗಳಲ್ಲೂ ಪ್ರವಚನ ನೀಡಿ ಜನಮೆಚ್ವುಗೆ ಪಡೆದಿದ್ದ ಸ್ವಾಮೀಜಿ
ಬೆಳಗಾವಿ, ಜ, 2 : ನಾಡು ಕಂಡ ನಡೆದಾಡು ದೇವರು ಹಾಗೂ ರಾಜ್ಯದ ಮೂಲೆ ಸೇರಿದಂತೆ ದೇಶ ವಿದೇಶದಲ್ಲೂ ಪ್ರವಚನದ ಮೂಲಕ ಜನಮನ್ನಣೆ ಪಡೆದು ಸಾರ್ಥಕ ಬದುಕು ಸಾಗಿಸಿದ್ದ ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರಿ ಸಿದ್ದೇಶ್ವರ ಶ್ರೀಗಳು ಸೋಮವಾರ ರಾತ್ರಿ 7 ಗಂಟೆಗೆ ಲಿಂಗೈಕ್ಯವಾಗಿದ್ದಾರೆ.

ಶ್ರೀಗಳ ನಿಧನದ ಸುದ್ದಿ ತಿಳಿದ ರಾಜ್ಯದ ಅನೇಕ ಮಠಾಧೀಶರು ಹಾಗೂ ಜನಪ್ರತಿನಿಧಿಗಳು ಮತ್ತು ಮಠದ ಭಕ್ತರು ದೌಡಾಯಿಸಿದ್ದಾರೆ. ಸೋಮವಾರ ಸಂಜೆ 7ಕ್ಕೆ ಲಿಂಗಕ್ಯರಾದರು. ಶ್ರೀಗಳ ಅಗಲಿಕೆಯ ಸುದ್ದಿ ಕೇಳಿ ಭಕ್ತ ಜನ ಸಾಗರ ದುಃಖದಲ್ಲಿ ಮುಳುಗಿದೆ.

ನಡೆದಾಡುವ ದೇವರು, ಪವಾಡ ಪುರುಷರು, ಆಡಂಬರವನ್ನು ಬದಿಗಿಟ್ಟು ತಮ್ಮ ಪ್ರವಚನ ಜೊತೆಗೆ ರಾಜ್ಯದ ಹಾಗೂ ದೇಶದ ಮೂಲೆಯಲ್ಲೂ ಭಕ್ತರನ್ನು ಹೊಂದಿದ್ದ ಸಿದ್ದೇಶ್ವರ ಶ್ರೀಗಳು

ಅಪ್ಪಟ ಚಿನ್ನದಂತೆ ತಮ್ಮ ಬದುಕನ್ನು ನಡೆಸುವ ಜೊತೆಗೆ ಭಕ್ತರಿಗೂ ಮನುಷ್ಯ ಜೀವನ ಹೇಗೆ ಇರಬೇಕು ಎಂದು ದಾರಿ ದೀಪವಾಗಿದ್ದರು. ಅವರು ತಮ್ಮ ಅಂತ್ಯದ ಬಗ್ಗೆ 2014ರಲ್ಲೇ ಹೀಗೆ ಆಗಬೇಕೆಂದು ಬರೆದಿಟ್ಟಿ ದ್ದರು.