ಸಿದ್ದರಾಮೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ
ಲೋಕದರ್ಶನ ವರದಿ
ಯಲಬುರ್ಗಾ 20: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಟ್ಟಣದ ಸಿದ್ದರಾಮೇಶ್ವರ ಪ್ರೌಡಶಾಲೆ ವಿದ್ಯಾರ್ಥಿಗಳು ಶೇ.100ಕ್ಕೆ 100ರಷ್ಟು ಫಲಿತಾಂಶವನ್ನು ಪಡೆಯುವ ಮೂಲಕ ಶಾಲೆಗೆ ಉತ್ತಮ ಸಾಧನೆ ಗೈದಿದ್ದಾರೆ. ಒಟ್ಟು ಪರೀಕ್ಷೆಗೆ ಕುಳಿತ 45 ವಿದ್ಯಾರ್ಥಿಗಳಲ್ಲಿ 45 ವಿದ್ಯಾರ್ಥಿಗಳು ಎ+10, ಎ13, ಬಿ+16, ಬಿ06 ವಿದ್ಯಾರ್ಥಿಗಳು ಪಡೆಯುವ ಮೂಲಕ ಉತ್ತಮ ಸಾಧನೆಯನ್ನು ಮಾಡಿ ಶಾಲೆಯ ಕೀರ್ತಿಯನ್ನು ಶೇ.100ಕ್ಕೆ 100ಅ ರಷ್ಟ ತಂದಿದ್ದಾರೆ. ಪ್ರಿಯಾಂಕ ವೀರಯ್ಯ ಜಡಿಮಠ ಪ್ರಥಮ ಸ್ಥಾನ 625ಕ್ಕೆ 607 (ಶೇ.97.12ಅ), ಐಶ್ವರ್ಯ ಬಸವರಾಜ ನವಲಗುಂದ ದ್ವಿತೀಯ ಸ್ಥಾನ 625ಕ್ಕೆ 604 (ಶೇ.96.64ಅ), ರೇಣುಕಾ ಬಸವರಾಜ ಕುಂಬಾರ ತೃತೀಯ ಸ್ಥಾನ 625ಕ್ಕೆ 598 (ಶೇ.95.68ಅ) ಅಂಕವನ್ನು ಪಡೆದುಕೊಳುವುದರ ಮೂಲಕ ಶಾಲೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಂಸ್ಥಾನ ಹಿರೇಮಠ ಯಲಬುರ್ಗಾ ಹಾಗೂ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಶ್ರೀ ಸಿದ್ಧರಾಮ ಸ್ವಾಮಿಗಳು ಹಿರೇಮಠ (ಸಿಹಿ) ಯಲಬುರ್ಗಾ ಹಾಗೂ ಸಂಸ್ಥೆಯ ಕಾರ್ಯದರ್ಶಿ ಅಮರ್ಪ ಕಲಬುರ್ಗಿ ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು, ಸರ್ವ ಶಿಕ್ಷಕ ವೃಂದದವರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆಂದು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಸ್.ಡಿ.ಅಪ್ಪಾಜಿ ಗುರುಗಳು ತಿಳಿಸಿದರು.