ಸ್ವಾರ್ಥಕ್ಕಾಗಿದೇವರ ಪೂಜೆ ಮಾಡಿದ್ರೆ ದೇವರುಒಲಿಯಲ್ಲ ನಮಗೆ ಮಾತ್ರ ಒಳ್ಳೆಯದಾಗ್ಲಿ ಎಮದು ಕೇಳಿದ್ರೆ ದೇವರು ನಿಮ್ಮಪ್ಪನಾಣೆಗೂ ಒಳ್ಳೆಯದು ಮಾಡಲ:ಸಿದ್ದರಾಮಯ್ಯ
ಸ್ವಾರ್ಥಕ್ಕಾಗಿದೇವರ ಪೂಜೆ ಮಾಡಿದ್ರೆ ದೇವರುಒಲಿಯಲ್ಲ ನಮಗೆ ಮಾತ್ರ ಒಳ್ಳೆಯದಾಗ್ಲಿ ಎಮದು ಕೇಳಿದ್ರೆ ದೇವರು ನಿಮ್ಮಪ್ಪನಾಣೆಗೂ ಒಳ್ಳೆಯದು ಮಾಡಲ:ಸಿದ್ದರಾಮಯ್ಯ
ಯಲಬುರ್ಗಾ: ‘ನನ್ನತಂದೆ-ತಾಯಿಕುರುಬರಾಗಿದ್ರು, ನಾನು ಕುರುಬನಾಗಿ ಹುಟ್ಟಿದ್ದೀನಿ. ಸ್ವಾರ್ಥಕ್ಕಾಗಿದೇವರ ಪೂಜೆ ಮಾಡಿದ್ರೆದೇವರುಒಲಿಯಲ್ಲ. ದೇವರ ಬಳಿ ನನಗೆ ಒಳ್ಳೆಯದಾಗಲಿ ಎಂದು ಕೇಳಿದ್ರೆ, ದೇವರು ನಿಮ್ಮಪ್ಪನಾಣೆಗೂ ಒಳ್ಳೆಯದು ಮಾಡಲ್ಲ. ನಾವು ಸಮಾಜದಲ್ಲಿ ಬೇರೆಯವರಿಗೆಕೆಡಕನ್ನು ಬಯಸಬಾರದು, ಒಳ್ಳೆಯದನ್ನೆ ಬಯಸಬೇಕು. ಇನ್ನೊಬ್ಬರನ್ನು ಮನುಷ್ಯರಾಗಿಕಂಡ್ರೆಅದೇದೇವ್ರು. ಅವನ್ಯಾರೋಟಿಪ್ಪುರೀತಿ ನನ್ನನ್ನ ಮುಗಿಸಿ ಅಂತಾನೆ, ನಿಮಗೆ ಒಪ್ಪಿಗೆಇದ್ರೆ ನನಗೂ ಒಪ್ಪಿಗೆನಪ್ಪಾಎಂದುಜನರ ಬಳಿ ಕೇಳಿದ ಸಿದ್ದರಾಮಯ್ಯ, ಕಾನೂನು ಪಾಲನೆ ಮಾಡಬೇಕಾದ ಸಚಿವರೆ ಹೀಗೆ ಹೇಳ್ತಾರೆ. ಇದು ಸಂಸ್ಕೃತಿಏನ್ರೀಎಂದು ಸಚಿವಡಾ.ಅಶ್ವತ್ಥ್ನಾರಾಯಣ್ವಿರುದ್ಧಸಿದ್ದರಾಮಯ್ಯಮತ್ತೆಕಿಡಿಕಾರಿದ್ದಾರೆ.
ಪಟ್ಟಣದಲ್ಲಿ ಶನಿವಾರ ಹಾಲುಮತ ಸಮಾಜದ ವತಿಯಿಂದ ಹಮ್ಮಿಕೊಂಡ ಸಂಗೋಳಿ ರಾಯಣ್ಣ ಪ್ರತಿಮೆಅನಾವರಣ ಹಾಗೂ ಬೀರಲಿಂಗೇಶ್ವರಜಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
‘ರಾಯಣ್ಣನ ಸಾಹಸಮಯಇತಿಹಾಸವನ್ನು ಸ್ಮರಿಸಿದ ಸಿದ್ದರಾಮಯ್ಯ’
ಎಲ್ಲಾಕಾಲದಲ್ಲೂ ಕುತಂತ್ರಿಗಳು ಇದ್ದಾರೆ ಎಂದ ಸಿದ್ದರಾಮಯ್ಯ. ಮೋಸ ಮಾಡಿ ಸಂಗೊಳ್ಳಿ ರಾಯಣ್ಣನನ್ನು ಹಿಡಿದುಕೊಟ್ಟರು, ನಾನು ಮುಖ್ಯಮಂತ್ರಿಆಗಿದ್ದಾಗ ಸಾಕಷ್ಟುಅನುದಾನಕೊಟ್ಟಿದ್ದೇನೆ. ಸಂಗೊಳ್ಳಿ ಗ್ರಾಮಅಭಿವೃದ್ಧಿ ಹಾಗೂ ರಾಕ್ಗಾರ್ಡನ್ ನಿರ್ಮಾಣ, 282 ಕೋಟಿ ಹಣಕೊಟ್ಟು ಸೈನಿಕ ಶಾಲೆ ಪ್ರಾರಂಭ ಮಾಡಿದ್ದೇವೆ. ರಾಯಣ್ಣಯುವಕರಿಗೆಲ್ಲ ಸ್ಪೂರ್ತಿಯಾಗಲಿ ಎಂದುಇದನ್ನ ಮಾಡಲಾಗಿದೆ. ನಾನು ಯಾವಾಗಲೂ ಸತ್ಯವನ್ನೇ ಹೇಳ್ತೀನಿ ಎಂದಿದ್ದಾರೆ.
ದೇವನೊಬ್ಬ ನಾಮ ಹಲವು, ಎಲ್ಲದೇವರುಒಂದೇ ಎಂದ ಸಿದ್ದರಾಮಯ್ಯ
ಸತ್ಯವೇದೇವರು, ಸತ್ಯ ಹೇಳೊದನ್ನ ಅಳವಡಿಸಿಕೊಂಡ್ರೆ ಅದೆದೇವರು, ಆಚಾರವೇ ಸ್ವರ್ಗಅನಾಚಾರವೇ ನರಕಅಂತ ಬಸವಾದಿ ಶರಣರು ಹೇಳಿದ್ದಾರೆ. ಇದೆಲ್ಲವನ್ನಅರ್ಥ ಮಾಡ್ಕೊಂಡ್ರೆ ನಾವು ಒಂದೆತಾಯಿಯ ಮಕ್ಕಳು ಇದ್ದಂತೆ. ಸರ್ಕಾರರಾಜ್ಯದಜನರಅಭಿವೃದ್ಧಿಗೆಇರತ್ತೆ, ಇದನ್ನ ಪ್ರತಿಯೊಬ್ಬರುಅರ್ಥ ಮಾಡ್ಕೊಳ್ಳಬೇಕಾಗತ್ತೆ. ಸಮಾಜಕ್ಕೆಯಾರು ಒಳ್ಳೆಯದನ್ನ ಮಾಡ್ತಾರೆಅವರಜೊತೆಇರಿ, ಕೆಟ್ಟದ್ದನ್ನ ಮಾಡೋರಜೊತೆಇರಬೇಡಿ, ನಾನು ಸಮಾಜಕ್ಕೆ ಒಳ್ಳೆಯದ ಮಾಡಿದ್ರೆ ನನ್ನಜೊತೆಇರಿ, ನಾನು ಕೆಟ್ಟದನ್ನ ಮಾಡಿದ್ರೆಇರಬೇಡಿಎಂದು ಹೇಳಿದರು.
ರಾಜಕಾರಣಿಗಳು ನಮ್ಮ ಮದ್ಯಒಡಕುತಂದಿಡ್ತಾರೆ. ಮನುಷ್ಯ ಮನುಷ್ಯನನ್ನದ್ವೇಷ ಮಾಡೋರುರಾಕ್ಷಸರು, ಮನುಷ್ಯ ಮನುಷ್ಯನನ್ನ ಪ್ರೀತಿಸಬೇಕು, ಅದರಜೊತೆ ನಾಡು ನುಡಿ ನೆಲ ಜಲವನ್ನ ಪ್ರೀತಿ ಮಾಡಬೇಕು. ಕಿತ್ತೂರುಚನ್ನಮ್ಮಜಯಂತಿ ಮಾಡಿದ್ದು ನಾವು, ಕೆಂಪೆಗೌಡಜಯಂತಿ ಮಾಡಿದ್ದು ಸಿದ್ದರಾಮಯ್ಯ, ದೇವೆಗೌಡ, ಕುಮಾರಸ್ವಾಮಿ, ಕೆಂಗಲ್ ಹನಮಂತಯ್ಯಅಲ್ಲ, ಚನ್ನಮ್ಮಜಯಂತಿ ಮಾಡಿದ್ದು ಬೊಮ್ಮಾಯಿಅಲ್ಲ, ನಿಜಲಿಂಗಪ್ಪಅಲ್ಲ, ಸಿದ್ದರಾಮಯ್ಯ ಮಾಡಿದ್ದು . ಸತ್ಯ ಹೇಳಿದ್ದರೆ ಯಾಕೆ ಕೋಪ ಮಾಡ್ಕೋತಿರಾ, ನಾನು ಯಾವಾಗ್ಲೂ ಸತ್ಯವನ್ನ ಹೇಳ್ತಿನಿ. ನಾನು 7 ಞರ ಉಚಿತ ಅಕ್ಕಿ ಕೊಟ್ಟಿದ್ದೆ, ಜಾತಿ ಮೇಲೆ ಕೊಟ್ಟಿದ್ನಾ. ಈಗ್ಯಾಕೆ 5 ಕೆ.ಜಿ ಮಾಡಿದ್ದೀರಾಎಂದು ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ.
ಶಾಸಕ ಬೈರತಿ ಸುರೇಶ ಮಾತನಾಡಿ, ಸಿದದ್ದರಾಮಯ್ಯ ಅವರುತಮ್ಮಅಧಿಕಾರಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಹಲವಾರುಜನಪರ ಭಾಗ್ಯಗಳನ್ನು ಕೊಟ್ಟಿದ್ದಾರೆ. ಅವರುಅತ್ಯಂತ ಪ್ರಾಮಾಣಿಕರಾಜಕಾರಣಿ . ಹಿಂದಿನ ಎಲ್ಲಅಭಿವೃದ್ಧಿ ಕೆಲಸಗಳ ಪರ್ವ ಮುಂದುವರಿಯಲು ಸಿದ್ದರಾಮ್ಯ ಅವರು ಮುಖ್ಯಮಂತ್ರಿ ಆಗಬೇಕು ಸಿದ್ದರಾಮಯ್ಯ ನವರು ಸಿಎಂ ಆಗುವುದು ಸೂಕ್ತ’ ಎಂದರು.
ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ‘ಸಿದ್ದರಾಮಯ್ಯ ಅವರು ನೀಡಿದ ಅನೇಕ ಜನಪರ ಭಾಗ್ಯಗಳಿಂದ ರಾಜ್ಯದಲ್ಲಿ ಅಲವಾರುಅಭಿವೃದ್ಧಿ ಕೆಲಸಗಳಾಗಿವೆ. ಮತ್ತೊಮ್ಮೆಅವರನ್ನೆಮುಕ್ಯಮಂತ್ರಿ ಮಾಡಬೇಕು. ಮುಂದಿನ ಚುನಾವಣೆಯಲ್ಲಿಕಾಂಗ್ರೇಸ್ ಪಕ್ಷಅಧಿಕಾರಕ್ಕೆ ಬರಲುಎಲ್ಲರೂ ಕೈ ಜೋಡಿಸಬೇಂದುಜನರಲ್ಲಿ ಮನವಿ ಮಾಡಿದರು.
ಮಾಜಿ ಸಚಿವ ಬಸವರಾಜರಾಯರೆಡ್ಡಿ ಮಾತನಾಡಿ, ಬೈರತಿ ಸುರೇಶ ನನ್ನ ಮೇಲಿನ ಅಭಿಮಾನಕ್ಕೆ ನಾನು ಶಾಸಕನಾಗಬೇಕು ಎಂದು ಹೇಳಿದ್ದಾರೆ.ಅವರು ಹೇಳಿದ ತಕ್ಷಣ ನಾನು ಶಾಸಕನಾಗುವದಿಲ್ಲ. ಕೆಲ ಮುಖಂಡರು ನನ್ನ ಬಗ್ಗೆ ಹಗುರವಾಗಿ ಮಾತನಾಡಿತಮ್ಮ ಸಣ್ಣ ಬುದ್ದಿಯನ್ನು ಪ್ರದರ್ಶನ ಮಾಡಿದ್ದಾರೆ. ಯಾರು ಏನು ಎನ್ನುವದನ್ನು ನಾನು ಬಲ್ಲೆ. ಸಮಯ ಬಂದಾಗ ಮಾತನಾಡುತ್ತೇನೆಎಂದು ಹೇಳಿದರು.
ಈ ಸಂದರ್ಭದಲ್ಲಿಕಾಂಗ್ರೆಸ್ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ, ಶಾಸಕರಾದರಾಜಶೇಖರ ಪಾಟೀಲ, ರಾಘವೇಂದ್ರ ಹಿಟ್ನಾಳ, ಬೈರತಿ ಸುರೇಶ, ಎಂಎಲ್ಸಿ ಶರಣೇಗೌಡ ಬಯ್ಯಾಪೂರ, ಗಣ್ಯರಾದ ಬಸವರಾಜ ಉಳ್ಳಾಗಡ್ಡಿ, ಬಸಲಿಂಗಪ್ಪ ಭೂತೆ, ಸಿ.ಎಚ್.ಪಾಟೀಲ, ಕಳಕಪ್ಪ ಕಂಬಳಿ, ಯಂಕಣ್ಣ ಯರಾಶಿ, ಹನಮಂತಗೌಡಚಂಡೂರ, ಕೆರಿಬಸಪ್ಪ ನಿಡಗುಂದಿ, ಎ.ಜಿ.ಭಾವಿಮನಿ, ಗಿರಿಜಾ ಸಂಗಟಿ, ಸಾವಿತ್ರಿಗೊಲ್ಲರ, ರಾಮಣ್ಣ ಸಾಲಭಾವಿ, ಈಶ್ವರ ಅಟಮಾಳಗಿ, ಎಚ್.ಎಸ್.ಸೋಂಪುರ, ಹನಮಂತಗೌಡಚಂಡೂರ, ಶಾರದಾ ಸಾಲಭಾವಿ, ಬಿ.ಎಂ.ಶಿರೂರ, ವೀರಣ್ಣ ಹುಬ್ಬಳ್ಳಿ, ಶಿವಶಂಕರ ದೇಸಾಯಿ, ಶಿವು ರಾಜೂರ, ಅಮರೇಶ ಹುಬ್ಬಳ್ಳಿ ಸೇರಿದಂತೆ ಮತ್ತಿತರರಿದ್ದರು.
ಪಟ್ಟಣದಕಿತ್ತೂರರಾಣಿಚೆನ್ನಮ್ಮ,ಕನಕದಾಸ,ದರ್ಗಾಕ್ಕೆ ತೆರಳಿ ಪೂಜೆ ಸಲ್ಲಿಸಿಸಲಾಯಿತು.ಸಿದ್ದರಾಮಯ್ಯ ಅಭಿಮಾನಿಗಳು ಜೆಸಿಬಿ ಮೂಲಕ ಹೂ ಮಳೆ ಗೈದರು. ಸಮಾಜದಕೆಲವರುಟಗರು ಮರಿಯನ್ನು ಸಿದ್ದರಾಮಯ್ಯನವರಿಗೆ ಪ್ರಿತಿಯಿಂದಕಾಣಿಕೆ ನೀಡಿತಮ್ಮಅಭಿಮಾನ ಮೆರೆದರು. ಎರಡು ಕಾರ್ಯಕ್ರಮಗಳಲ್ಲಿ ಸಿದ್ದರಾಮಯ್ಯನವರ ಮಾತಿಗೆ ಅಭಿಮಾನಿಗಳು ಸೀಳೆ ಕೇಕೆ ಹಾಕಿ ತಮ್ಮ ಖುಷಿ ವ್ಯಕ್ತಪಡಿಸಿದರು.
ಬಾಕ್ಸ ಸುದ್ದಿ:
ಕಾರ್ಯಕ್ರಮದ ಮದ್ಯಕೈ , ಬಿಜೆಪಿ ಮುಖಂಡರ ನಡುವೆ ಮಾತಿನಜಟಾಪಟಿ
ಈ ಕಾರ್ಯಕ್ರಮದಲ್ಲಿಕಾಂಗ್ರೆಸ್ಮತ್ತು ನಿಜಜಟಪಿ ಮುಖಂಡರ ನಡುವೆ ಮಾತಿನಜಟಾಪಟಿ ನಡೆಯಿತು. ಶಾಸಕ ಭಯರತಿ ಸುರೇಶಅವರು ಮಾತನಾಡುವಾಗಯಲಬುರ್ಗಾ ಬಿಜೆಪಿ ಸಚಿವ ಹಾಲಪ್ಪಆಚಾರಅವರ ಹೆಸರುಎತ್ತದೇ“ಕ್ಷೇತ್ರದಲ್ಲಿಏನಾದರೂ ಕೆಲಸ ಮಾಡಿದ್ದಾರೆಯೇ?” ಎಂದು ಪ್ರಶ್ನಿಸಿದ್ದಾಗ. ಅವರ ಮಾತಿಗೆ ನಾಯಕರುಕಳಕಪ್ಪಕಂಬಳಿ ಬಸವಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳಿ, ಅಮರೇಶ ಹುಬ್ಬಳಿ ಸೇರಿ ಭೈರತಿ ಮಾತಿಗೆಆಕ್ಷೇಪ ವೈಕ್ತಪಡಿಸಿ ಮಾತು ನಿಲ್ಲಿಸುವಂತೆ ಸೂಚಿಸಿದರು.
ಈ ದಾರ್ಮಿಕಕಾರ್ಯಕ್ರಮಕ್ಕೆ ಬಿಜೆಪಿ ಪಕ್ಷದ ಮುಖಂಡರು ಸಹ ಆರ್ಥಿಕ ನೇರವನ್ನು ನೀಡಿದ್ದಾರೆ .ಇದು ರಾಜಕೀಯ ಕಾರ್ಯಕ್ರಮವಲ್ಲ ಎಂದು ಕೊಪಗೊಂಡ ಶೇಖಪ್ಪಗುರಾಣಿ ಭೈರತಿಯನ್ನು ತಳ್ಳಿದರು. ಇದರಿಂದಕೆಂಡಮಂಡಲವಾದ ಭೈರತಿಎಲ್ಲರಿಗೂ ಧನ್ಯವಾದಗಳನ್ನು ಹೇಳಿ, ತಳ್ಳಿದವರನ್ನು ಹುಡುಕಲು ಯತ್ನಿಸಿದರು. ಆಗ ಶಾಸಕ ರಾಘವೇಂದ್ರ ಹಿಟ್ನಾಲ್, ಮಾಜಿ ಸಚಿವ ಬಸವರಾಜರಾಯರೆಡ್ಡಿ ,ಶಿವರಾಜ ತಂಗಡಗಿ ಸೇರಿದಂತೆ ಭೈರತಿಯನ್ನು ಸಮಾಧಾನ ಪಡಿಸಿದರು.