ಧಾರವಾಡ - ಹುಬ್ಬಳ್ಳಿ

ಮುಕ್ತ ಚದುರಂಗ ಸ್ಪರ್ಧೆಯಲ್ಲಿ ಸಿದ್ಧಪ್ಪ ತೋರಣಗಟ್ಟಿ ಸಾಧನೆ

ಮುಕ್ತ ಚದುರಂಗ ಸ್ಪರ್ಧೆಯಲ್ಲಿ ಸಿದ್ಧಪ್ಪ ತೋರಣಗಟ್ಟಿ ಸಾಧನೆ

ಲೋಕದರ್ಶನ ವರದಿ 

ಹುಬ್ಬಳ್ಳಿ 22: ಚೇಕನಕೊಪ್ಪದ  ಚೆನ್ನವೀರ ಶರಣರ ಅಂಧರ ಕಲ್ಯಾಣ ಆಶ್ರಮದ ವಿದ್ಯಾರ್ಥಿ ಸಿದ್ಧಪ್ಪ ತೋರಣಗಟ್ಟಿ ಅವರು ನವನಗರದ ನಿವಾಸಿಗಳ ಹಿತೋದ್ಧಾರಕ ಸಂಘದ ಆಶ್ರಯದಲ್ಲಿ ಬಸವರಾಜ (ರಾಜು) ಶಿವಪ್ಪ ಬಿಳಿಗಾರ್ ಸ್ಮರಣಾರ್ಥ ನವನಗರದ ಈಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಮುಕ್ತ ಚದುರಂಗ ಸ್ಪರ್ಧೆಯಲ್ಲಿ ಯಶಸ್ವಿಯಾಗಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.  

ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಸಿದ್ಧಪ್ಪ ತೋರಣಗಟ್ಟಿ ಅವರಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ಸದಸ್ಯರು ಸಿದ್ಧಪ್ಪ ಅವರನ್ನು ಅಭಿನಂದಿಸಿದರು.  

ವಚನ ಚದುರಂಗ ಸಂಸ್ಥೆ ಹಾಗೂ ಧಾರವಾಡ ಜಿಲ್ಲಾ ಚದುರಂಗ ಸಂಸ್ಥೆಯ ಅಧ್ಯಕ್ಷ ಪ್ರಾಧ್ಯಾಪಕ ಡಾ. ವಿಶ್ವನಾಥ ಪಿ. ಬಿಳಿಗಾರ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯೆ ಸುನೀತಾ ಮಾಳವದೆಕರ್,  ಈಶ್ವರ ದೇವಸ್ಥಾನದ ಅಧ್ಯಕ್ಷ ಬಸವರಾಜ ಪಾಟೀಲ, ಸೋಹನ ಸುರೇಶ ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು ಹಾಗೂ ಚದುರಂಗಾಸಕ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ