ಮಹಲಿಂಗಪುರ

ಬಾಜಪ ಸಂಸ್ಥಾಪನ ದಿನಾಚರಣೆ ನಿಮಿತ್ಯ ಶ್ಯಾಮಪ್ರಸಾದ ಮುಖರ್ಜಿ, ದೀನದಯಾಳ ಉಪಾಧ್ಯಾಯ ನೆನೆದ: ಶಾಸಕ ಸಿದ್ದು ಸವದಿ.

ಬಾಜಪ ಸಂಸ್ಥಾಪನ ದಿನಾಚರಣೆ ನಿಮಿತ್ಯ ಶ್ಯಾಮಪ್ರಸಾದ ಮುಖರ್ಜಿ, ದೀನದಯಾಳ ಉಪಾಧ್ಯಾಯ  ನೆನೆದ: ಶಾಸಕ ಸಿದ್ದು ಸವದಿ.

ಮಹಾಲಿಂಗಪುರ : ಶ್ಯಾಮಪ್ರಸಾದ ಮುಖರ್ಜಿ ಮತ್ತು ದೀನದಯಾಳ ಉಪಾಧ್ಯಾಯ ಅವರ ತ್ಯಾಗ ಬಲಿದಾನಗಳಿಂದ ಜನಿಸಿದ ಪಕ್ಷದಿಂದ ಇಂದು ಭಾರತ ಸುರಕ್ಷಿತವಾಗಿದೆ ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ಹೇಳಿದರು.  

ಭಾಜಪ ಸಂಸ್ಥಾಪನ ದಿನಾಚರಣೆಯಲ್ಲಿ ಮತ್ತು  ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,  ಭಾರತದ ವಿಭಜನೆಯನ್ನು ಧಿಕ್ಕರಿಸಿ ತಮ್ಮ ಜೀವವನ್ನೇ ಬಲಿದಾನ ಗೈದ ಶಾಮ ಪ್ರಸಾದ ಮುಖರ್ಜಿ ಹಾಗೂ ಅಂತ್ಯೋದಯ ಹರಿಕಾರ ದೀನ ದಯಾಳ ಉಪಾಧ್ಯಾಯ ಇವರ ಕನಸು ಇಂದು ನನಸಾಗಿದೆ. ಕೇವಲ 44 ವರ್ಷಗಳಲ್ಲಿ ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವಾಗಿ, ಜಗತ್ತಿನಲ್ಲಿಯೇ ಅತಿ ಹೆಚ್ಚು ಅಧಿಕೃತ ಕಾರ್ಯಕರ್ತರನ್ನು ಹೊಂದಿದ ಪಕ್ಷ ಎಂಬ ಹೆಗ್ಗಳಿಕೆಯೊಂದಿಗೆ ಇಡೀ ಭಾರತದಲ್ಲಿ ತನ್ನ ಆಧಿಪತ್ಯ ಸ್ಥಾಪಿಸಿ, ಜಗತ್ತಿಗೆ ಭಾರತದ ಘನತೆಯನ್ನು ಸಾರಿದ ಏಕೈಕ ಪಕ್ಷ  ನಮ್ಮ ಭಾಜಪ ಪಕ್ಷ. ಭಾಜಪ ಪಕ್ಷ ಮತ್ತು ಮೋದಿಯವರಿಂದ ಮಾತ್ರ ದೇಶ ಸುರಕ್ಷಿತವಾಗಿರಲು ಸಾಧ್ಯ  ಎಂದರು.  

ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಮಾತನಾಡಿ, ಗಾಂಧಿ ಕೊಂದ ಪಕ್ಷ, ಬ್ರಾಹ್ಮಣರ ಪಕ್ಷ ಎಂಬ ಆರೋಪಗಳ ಕಠಿಣ ಪರಿಸ್ಥಿತಿಯಲ್ಲಿ ಬೆಳೆದು ಜಗತ್ತಿನ ನಂಬರ್ ಒನ್  ಪಕ್ಷವಾಗಿ ಭಾಜಪ ಇಂದು ಇಡೀ ದೇಶವನ್ನೇ ಆಳುತ್ತಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಜನಾಂಗದ ಮೀಸಲಾತಿ ಹೆಚ್ಚಿಸಿ ಮತ್ತು ಒಳ ಮೀಸಲಾತಿಯೊಂದಿಗೆ ಮಾದಿಗ ಸಮಾಜಕ್ಕೆ ಹೊಸ ಬದುಕು ಕಲ್ಪಿಸಿರುವ ರಾಜ್ಯ ಸರ್ಕಾರ ಲಿಂಗಾಯತರಿಗೂ ಸಹ ಸಾಕಷ್ಟು ಅನುಕೂಲ ಮಾಡಿದೆ ಎಂದರು.  

   ಸಮೀಪದ ನಂದಗಾವ, ಢವಳೇಶ್ವರ, ಮದಬಾವಿ, ಬಿಸನಾಳ, ಕೆಸರಗೊಪ್ಪ ಹಾಗೂ ಮಹಾಲಿಂಗಪುರದಲ್ಲಿ ಜರುಗಿದ ಭಾಜಪ ಸಂಸ್ಥಾಪನಾ ದಿನಾಚರಣೆ ಸಮಾರಂಭಗಳಲ್ಲಿ ಭಾಗವಹಿಸಿದ ಶಾಸಕರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ, ಪುರಸಭಾ ಅಧ್ಯಕ್ಷ ಬಸವರಾಜ ಹಿಟ್ಟಿನಮಠ, ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಅಕ್ಕಿವಾಟ, ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಕುಳ್ಳೊಳ್ಳಿ, ಆನಂದ ಕಂಪು, ನಗರ ಘಟಕದ ಅಧ್ಯಕ್ಷ ಶ್ರೀಮಂತ ಹಳ್ಳಿ, ಮುಖಂಡರಾದ ಚನ್ನಪ್ಪ ಪಟ್ಟಣಶೆಟ್ಟಿ, ಶಿವಲಿಂಗ ಕೌಜಲಗಿ ಹಾಗೂ ಸ್ಥಳೀಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. 


ಸುದ್ದಿ ಓದಿ