ಮಹಲಿಂಗಪುರ

ಪಟ್ಟಣದಲ್ಲಿ ಕಲ್ಯಾಣರಾವ ಮುಚಳಂಬಿಗೆ ಶ್ರದ್ಧಾಂಜಲಿ

ಪಟ್ಟಣದಲ್ಲಿ ಕಲ್ಯಾಣರಾವ ಮುಚಳಂಬಿಗೆ ಶ್ರದ್ಧಾಂಜಲಿ

ಮಹಾಲಿಂಗಪುರ 07: ಉತ್ತರ ಕರ್ನಾಟಕದ ರೈತ ಮತ್ತು ಮಾಧ್ಯಮ ಪ್ರಶಸ್ತಿ ಪುರಸ್ಕೃತ ಹಸಿರು ಕ್ರಾಂತಿ ಹಾಗೂ ಸಮತೋಲ ಪತ್ರಿಕೆಗಳ ಸಂಪಾದಕರಾದ ಕಲ್ಯಾಣರಾವ್ ಮುಚಳಂಬಿ ಅವರು ಬುಧವಾರ ನಿಧನರಾದ ಪ್ರಯುಕ್ತ ಪಟ್ಟಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. 

ಈ ಸಮಯದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಉಪಾಧ್ಯಕ್ಷರಾದ ಜಯರಾಮ್ ಶೆಟ್ಟಿ ಮಾತನಾಡಿ, ಕಲ್ಯಾಣರಾವ ಮುಚಳಂಬಿಯವರು ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ, ದಿ.ಪ್ರೊಫೆಸರ್ ನಂಜುಂಡಸ್ವಾಮಿ, ಕೆ ಪುಟ್ಟಣ್ಣಯ್ಯ, ವಿವಿಧ ಮಠಾಧೀಶರು, ರಾಜಕಾರಣಿಗಳಿಗೆ ಆಪ್ತರಾಗಿದ್ದರು.ರೈತರ ಪರ ನಿರಂತರ ಹೋರಾಟಗಾರೂ ಆಗಿದ್ದರು.  

ಈ ಕಾರಣಗಳಿಂದ ಉತ್ತರ ಕರ್ನಾಟಕದ ಭಾಗದ ಶಕ್ತಿಯಾಗಿ ಬೆಳೆದಿದ್ದರು. ಇವರ ಅಕಾಲಿಕ ನಿಧನ ಸಮಾಜಕ್ಕೆ ಹಾಗೂ ಪತ್ರಿಕಾ ವೃತ್ತಿಗೆ ತುಂಬಲಾರದ ನಷ್ಟ ಉಂಟಾಗಿದೆ ಕಾರಣ ಅವರ ಕುಟುಂಬಕ್ಕೆ ದಿವಂಗತರ ಅಗಲುವಿಕೆಗೆ ದೇವರು ಶಕ್ತಿ ನೀಡಲಿ ಎಂದರು. 

ಪತ್ರಕರ್ತರಾದ ಲಕ್ಷ್ಮಣ ಕಿಶೋರಿ, ಮೀರಾ ತಟಗಾರ, ಲಾಲಸಾಬ ನಗಾರ್ಚಿ, ಹನುಮಂತ ನಾವಿ ಹಾಗೂ ಭೀಮಪ್ಪ ನೇಸೂರ್, ಗಂಗಯ್ಯ ಮಠಪತಿ, ಲಕ್ಷ್ಮಣ ಮೂಡಲಗಿ, ಶ್ರೀಶೈಲ ಕಾಗಿ, ಶ್ರೀಶೈಲ ಜಮಖಂಡಿ, ಮುರಿಗೆಪ್ಪ ಜತ್ತಿ ಇನ್ನು ಮುಂತಾದವರು ಈ ಶ್ರದ್ಧಾಂಜಲಿ ಸಭೆಯಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ