ಪತ್ರಕರ್ತ ಧನ್ಯಕುಮಾರ ಧನಶೆಟ್ಟಿ ನಿಧನಕ್ಕೆ ಶ್ರದ್ಧಾಂಜಲಿ
ಇಂಡಿ 22: ಮಂಗಳವಾರ ತಡರಾತ್ರಿ ನಿಧನರಾದ ಪತ್ರಕರ್ತ ಧನ್ಯಕುಮಾರ ಧನಶೆಟ್ಟಿ ಅವರಿಗೆ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪತ್ರರ್ಕರಾದ ಲಾಲಸಿಂಗ್ ರಾಠೋಡ, ರಾಜಕುಮಾರ ಚಾಬುಕಸವಾರ ಮಾತನಾಡಿ ಧನಶೆಟ್ಟಿ ಅವರ ನಿಧನದಿಂದ ಓರ್ವ ಉತ್ತಮ ಪತ್ರಕರ್ತಕನ್ನು ಕಳೆದುಕೊಂಡಂತಾಗಿದೆ. ಭಗವಂತ ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದರು.
ಶಂಕರ ಜಮಾದಾರ, ಶಿವಾನಂದ ಮಲಕಗೊಂಡ, ಅಬುಶಾಮ ಹವಾಲ್ದಾರ, ಸದ್ದಾಂ ಜಮಾದಾರ, ಫಯಾಜ ಬಾಗವಾನ, ಜೈಭೀಮ ಸಿಂಗೆ, ಅಶೋಕ ಜಾಧವ, ವಾಸಿಮ್ ಬಾಗವಾನ, ಬಿ.ಎಸ್. ಹೊಸೂರ ಮತ್ತಿತರರು ಇದ್ದರು.