‘ರಂಗನಾಯಕ’ ಆಗಸ್ಟ್ 12ರಿಂದ ಚಿತ್ರೀಕರಣ: ಜಗ್ಗೇಶ್

‘ರಂಗನಾಯಕ’ ಆಗಸ್ಟ್ 12ರಿಂದ ಚಿತ್ರೀಕರಣ: ಜಗ್ಗೇಶ್

ಬೆಂಗಳೂರು, ಆಗಸ್ಟ್ 05 ನಿರ್ದೇಶಕ ಗುರುಪ್ರಸಾದ್ ಸಾರಥ್ಯದಲ್ಲಿ ಸಿದ್ಧವಾಗುತ್ತಿರುವ ‘ರಂಗನಾಯಕ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದ್ದೂ, ಅದಕ್ಕೂ ಮುನ್ನ ಶಿರಸಿಯ ಮಾರಿಕಾಂಬಾ ದರ್ಶನಕ್ಕೆ ನಟ ಜಗ್ಗೇಶ್ ತೆರಳಿದ್ದಾರೆ.
 
‘ಮಠ’, ‘ಎದ್ದೇಳು ಮಂಜುನಾಥ’ ಬಳಿಕ ಗುರುಪ್ರಸಾದ್ ನಿರ್ದೇಶನದಲ್ಲಿ ಜಗ್ಗೇಶ್ ಅಭಿನಯದ ಮೂರನೇ ಚಿತ್ರ ಇದಾಗಿದೆ.  
 
‘ರಂಗನಾಯಕ’ ಸಿನಿಮಾ ಲಾಕ್ ಡೌನ್ ಗೂ ಮೊದಲೇ ಸೆಟ್ಟೇರಿತ್ತು. ಇದೀಗ ಆಗಸ್ಟ್ 12 ರಿಂದ ಚಿತ್ರೀಕರಣ ಪ್ರಾರಂಭವಾಗುತ್ತಿರುವುದಾಗಿ ಜಗ್ಗೇಶ್ ಮಾಹಿತಿ ನೀಡಿದ್ದಾರೆ. ಅದಕ್ಕೂ ಮೊದಲು ಜಗ್ಗೇಶ್ ಪತ್ನಿ ಸಮೇತರಾಗಿ ಶಿರಸಿಗೆ ಪ್ರಯಾಣ ಬೆಳೆಸಿದ್ದು, ಮಾರಿಕಾಂಬೆಯ ದರ್ಶನ ಪಡೆದು ಬರುವುದಾಗಿ ಹೇಳಿದ್ದಾರೆ.

ಸುದ್ದಿ ಓದಿ