ಸಲಗ’ ಚಿತ್ರದ ವಿಶೇಷ ಹಾಡು ರಿಲೀಸ್ ಮಾಡಲಿದ್ದಾರೆ ಶಿವರಾಜ್ ಕುಮಾರ್

ಸಲಗ’ ಚಿತ್ರದ ವಿಶೇಷ ಹಾಡು ರಿಲೀಸ್ ಮಾಡಲಿದ್ದಾರೆ ಶಿವರಾಜ್ ಕುಮಾರ್


ಬೆಂಗಳೂರು, ಆ 02 ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಿಸಿರುವ ಹಾಗೂ ನಾಯಕರಾಗಿ ನಟಿಸಿರುವ ಸಿನಿಮಾ ‘ಸಲಗ’. ಈ ಸಿನಿಮಾದ ವಿಶೇಷ ಹಾಡೊಂದನ್ನು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ರಿಲೀಸ್ ಮಾಡಲಿದ್ದಾರೆ.
 
ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ವಿಶೇಷ ಥೀಮ್ ಹಾಡೊಂದನ್ನು ಆಗಸ್ಟ್ 5 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಶಿವರಾಜ್ ಕುಮಾರ್ ಲಾಂಚ್ ಮಾಡಲಿದ್ದಾರೆ.
 
 ಈಗಾಗಲೇ ಸಲಗ ಚಿತ್ರತಂಡ ಶಿವಣ್ಣನನ್ನು ಭೇಟಿಯಾಗಿ ಹಾಡಿನ ಬಿಡುಗಡೆಗಾಗಿ ಖುದ್ದಾಗಿ ಆಹ್ವಾನ ನೀಡಿತ್ತು. ಚರಣ್ ರಾಜ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಗೀತಾ ಮತ್ತು ಗಿರಿಜಾ ಸಿದ್ಧಿ ಹಿನ್ನೆಲೆ ಗಾಯನವಿದೆ.

ಸುದ್ದಿ ಓದಿ