ಎಲಬುರ್ಗ

ಸುಕ್ಷೇತ್ರ ದಮ್ಮೂರ ಗ್ರಾಮದಲ್ಲಿ ಶಿವಾನುಭವ ಸಂಗೀತ ಧಾರ್ಮಿಕ ಗೋಷ್ಠಿ ಕಾರ್ಯಕ್ರಮ

ಸುಕ್ಷೇತ್ರ ದಮ್ಮೂರ ಗ್ರಾಮದಲ್ಲಿ ಶಿವಾನುಭವ ಸಂಗೀತ   ಧಾರ್ಮಿಕ ಗೋಷ್ಠಿ ಕಾರ್ಯಕ್ರಮ

ಯಲಬುರ್ಗಾ01:  ಸುಕ್ಷೇತ್ರ ದಮ್ಮೂರ್ ಗ್ರಾಮದ ಭೀಮಾಂಬಿಕದೇವಿ ಮಠದಲ್ಲಿ ಶ್ರೀಮಠದ ಒಡೆಯರಾದ ಹನುಮಂತಪ್ಪಜ್ಜ ದರ್ಮರ ಹಾಗೂ ಶರಣಯ್ಯ ಹಿರೇಮಠ ಇವರ ಸಾನಿಧ್ಯದಲ್ಲಿ 346 ನೇ ಶಿವಾನುಭವ ಗೋಷ್ಟಿ ಜರುಗಿತು. 

ಪ್ರಾರಂಭದಲ್ಲಿ ನವ ಜೀವನ ಸಮಿತಿ ಸದಸ್ಯರಿಂದ ಮಂಜುನಾಥ ಸ್ವಾಮಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಭಜನೆ ಕಾರ್ಯಕ್ರಮ  ಚತುರದರ್ಶಿ ಅಂಗವಾಗಿ ಜರುಗಿತು.   ಗ್ರಾಮದ  ಮುಖಂಡ ಗುರುಮೂರ್ತಿ ಬಡಿಗೇರ್, ಗಣೇಶ್ ನಿಡುಗುಂದಿ, ಭೀಮಣ್ಣ ಚಿಕ್ಕಗೌಡರ ಅವರು ಕಾರ್ಯಕ್ರಮ ನಡೆದು ಬಂದಿರುವ ಹಾದಿಯ ಬಗ್ಗೆ ಮಾತನಾಡಿದ ಅವರು ಮಕ್ಕಳು ಉತ್ತಮ ಸಂಸ್ಕಾರ ಸಂಸ್ಕೃತಿ ಪಡೆಯುವಲ್ಲಿ  ಮಠ ಮಂದಿರಗಳ  ಪಾತ್ರ ಮಹತ್ವದಾಗಿದೆಎಂದರು. 

ಭೀಮಾಂಬಿಕಾದೇವಿ   ಶಿವಾನುಭವ  ಸೇವಾ ಸಮಿತಿಯ ಅಧ್ಯಕ್ಷ ಶರಣ ಬಸಪ್ಪದಾನಕೈ ಅವರು ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಧರ್ಮದಲ್ಲಿ ರಾಜಕೀಯ ಬೇರೆಯಬಾರದು ಇಂದು ಧರ್ಮದಲ್ಲಿ ರಾಜಕೀಯ ಬೆರೆತು ಅಂತಹ ಮಠ ಮಂದಿರಗಳು ರಾಜಕೀಯ ಪಕ್ಷಗಳ  ಮಠಗಳಾಗಿವೆ ಇದರಿಂದ ಭಕ್ತರ ಭಕ್ತಿಕಡಿಮೆಯಾಗಿ ಅಂತಹ ಮಠಗಳು  ಹಿನ್ನಡೆಯಾಗಿ ಭಕ್ತರ ಭಕ್ತಿ ಕಡಿಮೆಯಾಗುತ್ತಿವೆ ಆದರೆ ರಾಜಕಾರಣದಲ್ಲಿ ಧರ್ಮ ಬೇರೆಯಬೇಕು, ರಾಜಕಾರಣದಲ್ಲಿ ಧರ್ಮ ಬೆರೆತಾಗ ರಾಜಕಾರಣಿಗಳು ಉತ್ತಮ ಸಂಸ್ಕಾರ ಸಂಸ್ಕೃತಿ ಹೊಂದಿ ಉತ್ತಮಜನ ಪ್ರತಿನಿಧಿಗಳು ಆಗುವುದಕ್ಕೆ ಸಾಧ್ಯವಾಗುತ್ತದೆ ಎಂದರು. 

ಈ ವೇಳೆ ಗ್ರಾಮದ ಶರಣೆಗೌಡ ದ್ಯಾಮನಗೌಡ್ರ,   ವೀರನಗೌಡ ನಿಡಗುಂದಿ, ಚಂದಪ್ಪ ಹಳ್ಳಿಕೇರಿ,  ಮಲ್ಲಿಕಾರ್ಜುನ ಮಂಡಲಿ, ಬಸನಗೌಡ ಪಾಟೀಲ್,  ಈರ​‍್ಪ ಹಲಗೇರಿ, ಬಸವರಾಜ ಮರಗಪ್ಪನರ, ಕಳಕಪ್ಪ ಹಡಪದ, ಯಮನೂರ​‍್ಪ ಹಳ್ಳಿಕೇರಿ, ಯಲ್ಲಪ್ಪ ಟಕ್ಕಳಿಕೆ  ಸೇರಿದಂತೆ ಸೇರಿದಂತೆ ಗ್ರಾಮದ ಹಿರಿಯರು ಭಾಗವಹಿಸಿದ್ದರು. 


ಸುದ್ದಿ ಓದಿ