ಶಿಗ್ಗಾವ್

ಶಿವಾನಂದ ಮ್ಯಾಗೇರಿ 54ನೇ ಹುಟ್ಟುಹಬ್ಬ ಆಚರಣೆ

ಶಿವಾನಂದ ಮ್ಯಾಗೇರಿ  54ನೇ ಹುಟ್ಟುಹಬ್ಬ ಆಚರಣೆ


ಶಿಗ್ಗಾವಿ, ಸೆ.19: ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ನಿಕಟಪೂರ್ವ ಎನ್ಡಬ್ಲ್ಯುಕೆಆರ್ಟಿಸಿ ಉಪಾಧ್ಯಕ್ಷ ಹಾಗೂ ಸಾಹಿತಿ ಶಿವಾನಂದ ಮ್ಯಾಗೇರಿ  ಅವರ 54ನೇ ಹುಟ್ಟುಹಬ್ಬವನ್ನು ಶಿವಾನಂದ ಮಾಯಗೇರಿ ಅಭಿಮಾನಿ ಬಳಗದ ವತಿಯಿಂದ ಸೆ.20ರಂದು ಬೆಳಿಗ್ಗೆ 10.30ಕ್ಕೆ ನಗರದ ಸಂಗನಬಸವ ಮಂಗಲ ಭವನದಲ್ಲಿ ಆಯೋಜಿಸಲಾಗಿದೆ.  

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ಮುಖಂಡ ಭರತ ಬೊಮ್ಮಾಯಿ ಸೇರಿದಂತೆ ವಿಧಾನ ಪರಿಷತ್ ಸದಸ್ಯರು, ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಮಾಜಿ ಸಂಸದರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ.  

ಶಿವಾನಂದ ಮ್ಯಾಗೇರಿ ಅವರ ಅಭಿಮಾನಿಗಳು, ಗುರು-ಹಿರಿಯರು, ನಾಗರಿಕರು, ಯುವಕರು, ತಾಯಂದಿರು, ಅಕ್ಕ-ತಂಗಿಯರು, ಕಲಾವಿದರು, ಹೋರಾಟಗಾರರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಸಮುದಾಯಗಳ ಮುಖಂಡರು ಹಾಗೂ ಮಾಜಿ ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅಭಿಮಾನಿ ಬಳಗದವರು ಕೋರಿದ್ದಾರೆ. 


ಸುದ್ದಿ ಓದಿ