ಭೀಮಾಂಬಿಕಾದೇವಿ ಮಠದಲ್ಲಿ ಶಿವಾನುಭವ ಗೋಷ್ಠಿ
ಯಲಬುರ್ಗಾ : ತಾಲೂಕಿನ ದಮ್ಮೂರ ಗ್ರಾಮದ ಶ್ರೀ ಭೀಮಾಂಬಿಕಾದೇವಿ ಮಠದಲ್ಲಿ ಮಾ.12 ರಂದು ಶುಕ್ರವಾರ ರಾತ್ರಿ 8.ಗಂಟೆಗೆ 223 ನೇ ಶಿವಾನುಭವ ಗೋಷ್ಠಿ ಕಾರ್ಯಕ್ರಮ ಶ್ರೀ ಮಠದ ಒಡೆಯರಾದ ಹನುಮಂತಪ್ಪಜ್ಜ ಧರ್ಮರ ಹಾಗು ಶರಣಯ್ಯ ಹಿರೇಮಠ ಇವರ ಸಾನಿಧ್ಯದಲ್ಲಿ ಜರುಗಿತು.ನಮ್ಮ ಜೀವನದಲ್ಲಿ ದುಡಿಕಿನ ನಿರ್ಧಾರಗಳಿಂದ ಕೆಡಕುಗಳನ್ನೂ ಬರಮಾಡಿಕೊಂಡಂತೆ ಆದ್ದರಿಂದ ಪ್ರೀತಿ, ಸಹನೆ, ತಾಳ್ಮೇಗಳಿಂದ ಸಮಸ್ಯೆಗಳನ್ನು ಸರಳ ವಿಚಾರಗಳಿಂದ ಬಗೆಹರಿಸಿಕೊಂಡಲ್ಲಿ ನಮ್ಮ ಬದುಕು ಸುಂದರವಾಗಿ ಇರಲು ಸಾಧ್ಯವೆಂದು ದಮ್ಮೂರ ಶ್ರೀ ಭೀಮಾಂಬಿಕಾದೇವಿ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶರಣಬಸಪ್ಪ ಕೆ ದಾನಕೈ ಅವರು ಅಧ್ಯಕ್ಷತೆವಹಿಸಿ ಮಾತನಾಡಿದರು.ಮಾನವಿಯ ಗುಣಗಳನ್ನು ಬೆಳಸಿಕೊಂಡು ನೆಮ್ಮದಿಯ ಬದುಕಿಗೆಗಾಗಿ ಇಂತಹ ಶಿವಾನುಭವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ನಮ್ಮ ಮನಸ್ಸು ಹಗುರವಾಗಿ ಶಾಂತಿಯಿಂದ ಇರುವದಕ್ಕೆ ಸಾಧ್ಯವಾಗುತ್ತದೆ ಎಂದು ಮಾಜಿ ಕ.ಸಾ.ಪ ಜಿಲ್ಲಾ ಅಧ್ಯಕ್ಷ ವೀರಣ್ಣ ನಿಂಗೋಜಿ ಅವರು ಅತಿಥಿಗಳಾಗಿ ಮಾತನಾಡಿದರು.ಸಂಗೀತ ಕಲಾವಿದರಾದ ಕಳಕಪ್ಪ ಹಡಪದ , ಡಿ.ಮೌನೇಶ ಬಡಿಗೆರ, ಹನುಮೇಶ ಹಡಪದ ಇವರಿಂದ ಸಂಗೀತಸೇವೆ ಜರುಗಿತು.ಬಸವರಾಜ ಮರಗಪ್ಪನವರ ಹಾಗು ಭೀಮಣ್ಣ ಚಿಕ್ಕಗೌಡ್ರ ಕಾರ್ಯಕ್ರಮ ನಿರೂಪಿಸಿದರು.