ಶಿವಾಜಿ ಜಯಂತಿ;ವಿಜೃಂಭಣೆಯಿಂದ ನಡೆದ ಶೋಭಾಯಾತ್ರೆ
ಯಲಬುರ್ಗಾ 01: ಪಟ್ಟಣದಲ್ಲಿ ಹಿಂದೂ ಸಂಘಟನೆಗಳ ವತಿಯಿಂದ ಶಿವಾಜಿ ಜಯಂತಿ ನಿಮಿತ್ಯ ಯಲಬುರ್ಗಾದಲ್ಲಿ ಸಂಜೆ ವಿಜೃಂಭನೆಯಿಂದ ಶೋಭಾಯಾತ್ರೆ ನಡೆಯಿತು. ಮೊಗ್ಗಿ ಬಸವೇಶ್ವರ ದೇವಸ್ಥಾನದಿಂದ ಗುರುವಾರ ಸಂಜೆ ಶೋಭಾಯಾತ್ರೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ನೂರಾರು ಸಂಖ್ಯೆಯಲ್ಲಿ ಯುವಕರು ಸೇರಿಕೇಸರಿ ಶಾಲು,ಕೇಸರಿ ಧ್ವಜದೊಂದಿಗೆ ಶಿವಾಜಿ ನಾಮ ಹೇಳುವ ಜಯಘೋಷದೊಂದಿಗೆ ಯುವಕರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.