ಶಿವಗಂಗಾ ಶಾಲೆಯ ಫಲಿತಾಂಶ ನೂರಕ್ಕೆ ನೂರ
ರಾಣೆಬೆನ್ನೂರ 25: ನಗರದ ಹೊರವಲಯದ ಶಿವಗಂಗಾ ಪಬ್ಲಿಕ್ ಶಾಲೆಯ 2026 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ನೂರಕ್ಕೆ ನೂರರಷ್ಟು ಆಗಿದೆ. ಒಟ್ಟು 19 ವಿದ್ಯಾರ್ಥಿಗಳ ಪೈಕಿ 4 ಶ್ರೇಣಿ, 5 ಪ್ರಥಮ, 8 ದ್ವಿತೀಯ, ಹಾಗೂ 2 ತೃತೀಯ ಸ್ಥಾನದಲ್ಲಿ ಪಾಸಾಗಿದ್ದಾರೆ. ಮಿಥುನ್ ಕೋಟಿಹಾಳ್ 97.4ಅ, ನಿಸರ್ಗ ಎಲ್ 95.44ಅ, ಶ್ರೀ ಅಂಕುಶಖಾನಿ 91.56ಅ, ನೆಹರು ಯೋಗಿಮಠ 91ಅ ಅತಿ ಹೆಚ್ಚು ಅಂಕಗಳನ್ನು ಪಡೆದು ಪಾಸಾಗಿದ್ದಾರೆ. ಸಾಧನೆಗೈದ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷೆ ಚೈತ್ರಾ ಪಾಟೀಲ, ಕಾರ್ಯದರ್ಶಿ ಮಹೇಶ್ವರಗೌಡ ಪಾಟೀಲ ಸೇರಿದಂತೆ ಶಾಲಾ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.