ರಾಜ್ಯ ನೇಕಾರ ಸಮುದಾಯ ಮಹಿಳಾ ಒಕ್ಕೂಟದ ನಿರ್ದೇಶಕರಾಗಿ ಶೀಲಾ ಹುಲ್ಲೂರ ಆಯ್ಕೆ
ಮಹಾಲಿಂಗಪುರ 02 : ಕರ್ನಾಟಕ ರಾಜ್ಯ ನೇಕಾರ ಸಮುದಾಯದ ಮಹಿಳಾ ಒಕ್ಕೂಟವು ತಮ್ಮ ಅನುಪಮ ಸೇವೆಯನ್ನು ಗುರುತಿಸಿ ರಾಜ್ಯ ಮಹಿಳಾ ವಿಭಾಗಕ್ಕೆ ಬಾಗಲಕೋಟ ಜಿಲ್ಲೆಯ ಶೀಲಾ ಹುಲ್ಲೂರು ಅವರನ್ನು ನೂತನ ನಿರ್ದೇಶಕರನ್ನಾಗಿ ಆಯ್ಕೆ ಮಾಡಿ ರಾಜ್ಯಾಧ್ಯಕ್ಷ ಉಮಾ ಜಗದೀಶ ಆದೇಶ ಹೊರಡಿಸಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳಾದ ಹೇಮಲತಾ ಇಂದ್ರೇಶ, ಬಾಗಲಕೋಟ ಜಿಲ್ಲಾ ಉಸ್ತುವಾರಿ ಶ್ರೀಮತಿ ಗೀತಾಲಕ್ಷ್ಮಿ ಅಂಬಾದಾಸ ಕಾಮೂರ್ತಿ ಸೇರಿದಂತೆ ಮಹಿಳಾ ವಿಭಾಗದ ಪದಾಧಿಕಾರಿಗಳ ಸಮುಖದಲ್ಲಿ ಆದೇಶ ಪತ್ರ ನೀಡಿ ಗೌರವಿಸಿದರು. ರಾಜ್ಯಾಧ್ಯಕ್ಷರಾದ ಬಿ ಎಸ್ ಸೋಮಶೇಖರ ಉಪಾಧ್ಯಕ್ಷರಾದ ಜಗದೀಶ ಬಲಭದ್ರ ಸೇರಿದಂತೆ ಹಲವು ನಾಯಕರು ಅಭಿನಂಡಿಸಿದ್ದಾರೆ.
ಗ್ರಾಮೀಣ ಭಾಗದವರಾದ ಶೀಲಾ ಹುಲ್ಲೂರ ಅವರ ಆಯ್ಕೆ ಮಾಡಿ ನಮ್ಮ ಭಾಗದ ಮಹಿಳೆಯರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಿದ್ದಕ್ಕಾಗಿ, ಮಾಜಿ ಸಚಿವೆ, ಸಂಸದೆ ಉಮಾಶ್ರೀ ಸೇರಿದಂತೆ ಈ ಭಾಗದ ನೇಕಾರ ಸಮಾಜದ ಎಲ್ಲ ಗುರು-ಹಿರಿಯರು ಅಭಿನಂದನೆ ಸಲ್ಲಿಸಿದ್ದಾರೆ.