ಮಹಲಿಂಗಪುರ

ಮಹಾಲಿಂಗಪುರದಲ್ಲಿ ಸನಾತನ ಧರ್ಮ ಜಾಗೃತಿಗಾಗಿ ಶೌರ್ಯ ಯಾತ್ರೆ.

ಮಹಾಲಿಂಗಪುರದಲ್ಲಿ ಸನಾತನ ಧರ್ಮ ಜಾಗೃತಿಗಾಗಿ ಶೌರ್ಯ ಯಾತ್ರೆ.

ಮಹಾಲಿಂಗಪುರ : ಇಂದಿನ ಯುವಕರು ದುಶ್ಚತಗಳತ ಹೆಚ್ಚು ಆಕರ್ಷತರಾಗುತ್ತಿದ್ದಾರೆ,ಇದು ದುರಂತ ಹಾಗೆ ತಂದೆ ತಾಯಿ ಪಾಲಕರು ಪೋಷಕರು ಮಕ್ಕಳ ಕಡೆಗೆ ಗಮನ ಕೊಟ್ಟು ರಾಷ್ಟ್ರ ಭಕ್ತಿ ಮತ್ತು ಸನಾತನ ಧರ್ಮ ಜಾಗ್ರತಿ ಮೂಡಿಸಿ ಮಕ್ಕಳನ್ನು ಸತಪ್ರಜೆಗಳನ್ನಾಗಿ ಮಾಡುವ ಕೆಲಸ ಮಾಡಬೇಕು ಆಗಲೇ ಹುಟ್ಟಿದಕ್ಕೆ ಸಾರ್ಥಕವಾಗುತ್ತದೆ ಎಂದು ಹಿಂದೂ ಮುಖಂಡರಾದ ನಂದು ಗಾಯಕವಾಡ ಹೇಳಿದರು.ಅವರು ನಗರದ ವೀರರಾಣಿ ಕಿತ್ತೂರು ಚೆನ್ನಮ್ಮ ಸರ್ಕಲ್ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದ 60ನೇ ವರ್ಷದ ಸಂಭ್ರಮಾಚರಣೆ ಶೌರ್ಯ ಜಾಗರಣೆ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿ ಸನಾತನ ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ಯುವಕರ ಮೇಲಿದೆ.ಭಗವಾನ ಶ್ರೀ ರಾಮನ ಆದರ್ಶಗಳನ್ನು ಯುವಕರು ಅಳವಡಿಕೊಳ್ಳಬೇಕು ತಮ್ಮ ಇಡೀ ಕುಟುಂಬದ ಬಗ್ಗೆ ಅಪಾರವಾದ ಗೌರವನ್ನು ಇಟ್ಟುಕೊಳ್ಳಬೇಕು, ದೇಶಕ್ಕಾಗಿ ಪೂರ್ವಜ್ಜರು ಮಾಡಿದ ತ್ಯಾಗ ಬಲಿದಾನ ಅವರು ಅರಿತುಕೊಳ್ಳಬೇಕು ಇದೇ ಈ ರಥಯಾತ್ರೆಯ ಪ್ರಮುಖ ಉದ್ದೇಶವಾಗಿದೆ.ಆ ನಿಟ್ಟಿನಲ್ಲಿ ಯುವಕರು ಕಾರ್ಯಪ್ರವೃತಾರಾಗಬೇಕು ಆಗಲೇ ದೇಶಕ್ಕೆ ಒಳ್ಳೆಯ ಭವಿಷ್ಯ ನಿರ್ಮಾಣವಾಗುತ್ತದೆ.ಎಂದರು

ಉತ್ತರ ಕರ್ನಾಟಕ ಭಾಗದಲ್ಲಿ ಹಮ್ಮಿಕೊಂಡಿರುವ ಶೌರ್ಯ ಜಾಗರಣ ಪರಿಷತ್ ,ಶೌರ್ಯ ಜಾಗರಣ ರಥಯಾತ್ರೆಯು ಮುಧೋಳ ತಾಲೂಕಿನ ಹಲಗಲಿ ಗ್ರಾಮದಲ್ಲಿ ಉದ್ಘಾಟನೆಗೊಂಡು ಹಲಗಲಿ ಗ್ರಾಮದಿಂದ ಮುಧೋಳ ಮಾರ್ಗವಾಗಿ ಇಂದು ಮಹಾಲಿಂಗಪುರ,ತೇರದಾಳ,ರಬಕವಿ,ಬನಹಟ್ಟಿ ಮಾರ್ಗ ವಾಗಿ ಹುನ್ನೂರು ತಲುಪಲಿದೆ.ನಂತರ ಮಾತನಾಡಿದ ಸಂಘದ ಜಿಲ್ಲಾ ಧರ್ಮಾಚಾರಿ ವಿರುಪಾಕ್ಷಯ್ಯ ಮಠದ ಹಿಂದು ಧರ್ಮ ಮತ್ತು ಸಂಸ್ಕೃತಿ ಆಚರಣೆಗೆ ಜಾಗೃತಿಯೊಂದಿಗೆ ಆಚರಣೆಗಳ ವೈಜ್ಞಾನಿಕ ಮಹತ್ವ ಅರಿವು ಮೂಡಿಸುವದು.ಯುವಕರ ದುಶ್ಚಟಗಳಿಂದ ದೂರವಿದ್ದು ದೇಶ ಭಕ್ತಿ ಬೆಳೆಸುವುದು,ಬಲಶಾಲಿ, ಧೈರ್ಯಶಾಲಿ,ವೀರತ್ವ ,ಯುವಕರಲ್ಲಿ ಬೆಳೆಸುವ ಅವಶ್ಯಕತೆ ಬಹಳ ಮುಖ್ಯವಾಗಿದೆ ಎಂದು ಹೇಳಿದರು.ಇದೇ ಸಂಧರ್ಭದಲ್ಲಿ ಮಹಾಲಿಂಗ ಕಂಕಣವಾಡಿ,ವೀರಭದ್ರ ಮುಗಳ್ಯಾಳ,ವೀಷ್ಟುಗೌಡ ಪಾಟೀಲ,ರವಿ ಹುಣಸ್ಯಾಳ,ಸುರೇಶ ಮಡಿವಾಳ, ಚನ್ನಪ್ಪ ಪಟ್ಟಣಶೆಟ್ಟಿ, ರಾಘವೆಂದ್ರ ಗರಗಟಗಿ, ರಾಘವೇಂದ್ರ ಬಸ್ಮೇ,ಬಸವರಾಜ ಮಣ್ಮಿ, ಶಿವನಗೌಡ ಪಾಟೀಲ, ಗಜಾನನ ಬೇಳಗಾಂವಕರ,ಮಹಾಂತೇಶ ಗುಡೆಜಾಡರ,ಕುಮಾರ ನಾರಾಯಣಕರ,ರಾಘು ಚಿಂಚಲಿ,ರವಿ ಗಿರಿಸಾಗರ, ಮಹಾಲಿಂಗ ಗಾಜ್ಯಾಗೊಳ್,ಚೇತನ್ ಬರಡೋಲ,ಭರತ ಕದ್ದಿಮನಿ, ಸೇರಿದಂತೆ ಹಲವಾರು ಹಿಂದೂ ಸಂಘಟನೆಯ ಕಾರ್ಯಕರ್ತರ ಶೌರ್ಯ ರಥ ಯಾತ್ರೆಯಲ್ಲಿ ಭಾಗವಹಿಸಿದರು 

ಸುದ್ದಿ ಓದಿ