ಅ. 7ರಿಂದ ಮೂರು ದಿನ ಶರದ್ ನಾಟಕೋತ್ಸವ
ಬೆಳಗಾವಿ 01: ರಂಗಸಂಪದ ಬೆಳಗಾವಿ ವತಿಯಿಂದ ಇದೇ ಅಕ್ಟೋಬರ್ 7ರಿಂದ ಮೂರು ದಿನಗಳ ಕಾಲ ಶರದ್ ನಾಟಕೋತ್ಸವ ಆಯೋಜನೆ ಮಾಡಲಾಗಿದೆ ಎಂದು ರಂಗಸಂಪದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿ ಇಂದಿಲ್ಲಿ ಹೇಳಿದರು.
ಶನಿವಾರ ನಗರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಪ್ರಸಕ್ತ ವರ್ಷ ತನ್ನ ಸಂಸ್ಕೃತಿಕ ಚಟುವಟಿಕೆಗಳನ್ನು ಶರದ್ ಋತುವಿನಲ್ಲಿ ಪ್ರಾರಂಭ ಮಾಡುವ ಮೂಲಕ ಮೂರು ದಿನಗಳ ಶರದ್ ನಾಟಕೋತ್ಸವ ವನ್ನು ನಗರದ ಲೋಕಮಾನ್ಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಮೊದಲ ನಾಟಕ ಅ.7 ಶುಕ್ರವಾರ ಶ್ರೀ ಕೃಷ್ಣಮೂರ್ತಿ ಕವತ್ತಾರ ಲನಿರ್ದೇಶಿಸಿರುವ ತಾಯಿಯಾಗುವುದು ಎಂದರೆ 70 ನಿಮಿಷಗಳ ಏಕ ವ್ಯಕ್ತಿ ಪ್ರದರ್ಶನವನ್ನು ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ ಎಂದರು. ಅ.8ರಂದು ಸರ್ವಥೇಟರಂ ಅ.9 ವಂಶವೃಕ್ಷ ನಾಟಕ ಪ್ರದರ್ಶನಗೊಳ್ಳುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ನಾಟಕ ಪ್ರೀಯರು ಆಗಮಿಸಬೇಕೆಂದು ತಿಳಿಸಿದರು. ಇಂದಿನ ಪತ್ರಿಕಾಗೋಷ್ಠಿಯಲ್ಲಿ ಗುರುನಾಥ ಕುಲಕರ್ಣಿ, ಪ್ರಶಾಂತ ಕಾರಜೋಳ, ಅಶೋಕ ಕುಲಕರ್ಣಿ, ಅನಂತ ಪಪ್ಪು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.