ಕ್ರೀಡೆ

ಶೇನ್ ವಾರ್ನ್ ರದ್ದು ಸಹಜ ಸಾವು: ವೈದ್ಯರ ಸ್ಪಷ್ಟನೆ

ಶೇನ್ ವಾರ್ನ್ ರದ್ದು ಸಹಜ ಸಾವು: ವೈದ್ಯರ ಸ್ಪಷ್ಟನೆ

ಮೆಲ್ಬೋರ್ನ್: ಮಾರ್ಚ್ 08: ಸ್ಪಿನ್ ದಿಗ್ಗಜ ಶೇನ್ ವಾರ್ನ್ ಸಾವಿನ ಬಗ್ಗೆ ಅನುಮಾನಿಸುವ ಅವಷ್ಯಕತೆ ಇಲ್ಲ ಎಂದು ಸ್ಪಷ್ಟವಾಗಿದೆ. ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಥಾಯ್ ಪೊಲೀಸರು ಅಧಿಕೃತವಾಗಿ ಘೋಷಿಸಿದ್ದಾರೆ. ವಾರ್ನ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಥಾಯ್ ಪೊಲೀಸರಿಗೆ ವರದಿ ಮಾಡಿದ್ದು, ವರದಿಯನ್ನ ಆಸ್ಟ್ರೇಲಿಯ ರಾಯಭಾರ ಕಚೇರಿಗೆ ಹಸ್ತಾಂತರಿಸಿದ್ದಾರೆ. ವಾರ್ನ್ ಸಾವಿನ ಬಗ್ಗೆ ಯಾವುದೇ ಅನುಮಾನವಿಲ್ಲ. ಅದು ಕೊಲೆಯಾಲ್ಲ, ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಸ್ವಾಭಾವಿಕವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮೊದಲು ವಾರ್ನ್ ತನ್ನ ತಂದೆಯ ಬಳಿ ಆಗಾಗ ಎದೆನೋವು ಬರುತ್ತಿರುವುದರ ಬಗ್ಗೆ ಹೇಳಿಕೊಂಡಿದ್ದರೆಂದು ಮತ್ತು ಥಾಯ್ಲೆಂಡ್‌ನಿಂದ ಹಿಂದಿರುಗಿದ ನಂತರ ವೈದ್ಯರನ್ನು ಭೇಟಿ ಮಾಡುವುದಾಗಿ ಹೇಳಿದ್ದರು. ಮತ್ತೊಂದೆಡೆ, ವಾರ್ನ್ ಅವರ ಮ್ಯಾನೇಜರ್ ಜೇಮ್ಸ್ ಎರ್ಸ್ಕಿನ್ ಅವರು ವಿಹಾರಕ್ಕೆ ಥಾಯ್ಲೆಂಡ್‌ಗೆ ತೆರಳುವ ಮೊದಲು ವಾರ್ನ್ ಎದೆ ನೋವಿನಿಂದ ಬಳಲುತ್ತಿದ್ದರು ಎಂದು ಬಹಿರಂಗಪಡಿಸಿದರು,

ಇದು ಅವರ ಆಹಾರಕ್ರಮದಲ್ಲಿನ ಬದಲಾವಣೆಯಿಂದ ಕೂಡ ಆಗಿರಬಹುದು. ‘ತೂಕ ಇಳಿಸುವ ಸಲುವಾಗಿ ಕಟ್ಟುನಿಟ್ಟಿನ ಆಹಾರ ನಿಯಮಗಳಿಗೆ ವಾರ್ನ್ ಒಗ್ಗಿಕೊಂಡಿದ್ದರು. ಥೈಲ್ಯಾಂಡ್‌ಗೆ ಹೊರಡುವ ಮೊದಲು ಎರಡು ವಾರಗಳ ಕಾಲ ಅವರು ದ್ರವ ಪದಾರ್ಥವನ್ನ ಮಾತ್ರ ಸೇವಿಸುತ್ತಿದ್ದರು. ಅವನು ತಮ್ಮ ಇಡೀ ಜೀವನದಲ್ಲಿ ಬಹಳಷ್ಟು ಧೂಮಪಾನ ಮಾಡುತ್ತಿದ್ದ ಬಹುಶಃ ಇದರಿಂದಲೂ ಹೃದಯಾಘಾತವೂ ಆಗಿರಬಹುದು’ ಎಂದು ವಿವರಿಸಿದರು ಅವರ ತಂದೆ ಹೇಳಿಕೊಂಡಿದ್ದಾರೆ.

ಸುದ್ದಿ ಓದಿ