ಮಹಲಿಂಗಪುರ

ಸರಣಿ ಅಗ್ನಿ ಅವಘಡ: ಭಾರದಾನ ಅಂಗಡಿ ಮಾಲೀಕರುಗಳಿಗೆ ಲಕ್ಷಾಂತರ ರೂಗಳ ಹಾನಿ

ಸರಣಿ ಅಗ್ನಿ ಅವಘಡ: ಭಾರದಾನ ಅಂಗಡಿ ಮಾಲೀಕರುಗಳಿಗೆ ಲಕ್ಷಾಂತರ ರೂಗಳ ಹಾನಿ

ಮಹಾಲಿಂಗಪುರ : ಪಟ್ಟಣದ 2 ಹೋಲ್ಸೇಲ್ ತಟ್ಟಿನ (ಬಾರದಾನ) ಚೀಲುಗಳ ಸಂಗ್ರಹ ಉಗ್ರಾಣಗಳಿಗೆ ಸರಣಿ ಬೆಂಕಿ ಹೊತ್ತಿಕೊಳ್ಳುವ ಮೂಲಕ ಲಕ್ಷಾಂತರ ರೂಪಾಯಿಗಳ ಹಾನಿಯಾಗಿದೆ ಎಂದು ಮಾಲಿಕರು ಹೇಳುತ್ತಾರೆ. 

ಪಟ್ಟಣದ ಎಪಿಎಂಸಿ ಹತ್ತಿರ ಫೆಬ್ರುವರಿ 5 ಶನಿವಾರ ಸಂಜೆ 4.30ಕ್ಕೆ ಮೂಸಾ ಸಾಂಗ್ಲಿಕರ್ ಹಾಗೂ ರವಿವಾರ ರಾತ್ರಿ ಸುಮಾರು 1.30 ಕ್ಕೆ ಹುಸೇನ್ ಚಿನಗುಂಡಿ ಇವರ ಬಾರದಾನ ಸಂಗ್ರಹಗಾರಗಳಿಗೆ ಬೆಂಕಿ ಹೊತ್ತಿ ಒಂದು ಹೊಸ ಸೈಕಲ್ ಮೋಟಾರ್ ಸಮೇತವಾಗಿ ಲಕ್ಷಾಂತರ ರೂಪಾಯಿಗಳ ಹಾನಿ ಸಂಭವಿಸಿದೆ. 

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಎರಡೂ ಕಡೆಗಳಲ್ಲಿ ಸುಮಾರು 10 ತಾಸುಗಳ ನಿರಂತರ ಬೆಂಕಿ ನಂದಿಸುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಈ ಸಮಯದಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ. 

ಸ್ಥಳಕ್ಕೆ ಸ್ಥಳೀಯ ಠಾಣಾಧಿಕಾರಿ ವಿಜಯ್‌. ಎಸ್‌. ಕಾಂಬ್ಳೆ ಮತ್ತು ಸಿಬ್ಬಂದಿಗಳಾದ ಎಸ್‌.ಡಿ. ಬಾರಿಗಡ್ಡಿ, ಎಂ. ಎಸ್‌. ಕನಶೆಟ್ಟಿ , ಸಂತೋಷ ಗಾಳಪ್ಪಗೋಳ ಭೇಟಿ ನೀಡಿ ಕೂಲಂಕೂಷವಾಗಿ ಪರೀಶೀಲನೆ ನಡೆಸಿದರು. 

ಕಳೆದ ತಿಂಗಳು ಜೋಡು ರಸ್ತೆಯಲ್ಲಿ ಮೊಬೈಲ್ ಅಂಗಡಿಯಲ್ಲಿ ಬೆಂಕಿ ಹತ್ತಿ ಅಲ್ಲಿಯೂ ಕೂಡ ಲಕ್ಷಾಂತರ ರೂಪಾಯಿಗಳ ಹಾನಿಯಾಗಿರುವುದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.  

ಇಲ್ಲಿ ನಡೆದ ಘಟನೆಗಳಲ್ಲಿ ಒಂದೇ ರೀತಿಯ ಸಾಮ್ಯತೆ ಎದ್ದು ಕಾಣುತ್ತಿರುವುದರಿಂದ ಭಯದ ವಾತಾವರಣ ಮೂಡಿ ಸಾರ್ವಜನಿಕರು ವಾತಾವರಣ ನಿರ್ಮೂಲನೆಗೊಳ್ಳಲು ಪೊಲೀಸ್ ಇಲಾಖೆ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ಅಲ್ಲಲ್ಲಿ ಮಾತನಾಡುವ ಸಂದರ್ಭಗಳು ಕಂಡುಬಂದವು. 


ಸುದ್ದಿ ಓದಿ