ರಾಮದುರ್ಗ

ಸೆಪಿಕ್ ಟಕ್ರಾ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ

ಸೆಪಿಕ್ ಟಕ್ರಾ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ

ರಾಮದುರ್ಗ : ತಾಲೂಕಿನ ಚಂದರಗಿಯ ಎಸ್ ಎಂ ಕಲೂತಿ ಸಂಯುಕ್ತ ಕ್ರೀಡಾ ವಸತಿ ಶಾಲೆಯ ಸೆಪಕ್ ಟಕ್ರಾ ತಂಡವು ದಾವಣಗೇರಿಯಲ್ಲಿ ಜರುಗಿದ ರಾಜ್ಯ ಮಟ್ಟದ ಜೂನೀಯರ್ ಮತ್ತು ಸಬ್ ಜೂನೀಯರ್ ವಿಭಾಗಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ಜೂನೀಯರ್ ವಿಭಾಗದಲ್ಲಿ ಬಂಗಾರ ಹಾಗೂ ಸಬ್ ಜೂನೀಯರ್ ವಿಭಾಗದಲ್ಲಿ ಬೆಳ್ಳಿ ಪದಕಗಳನ್ನು ಜಯಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ.ಸಾಧನೆಗೈದ ವಿದ್ಯಾರ್ಥಿಗಳಾದ ಬಸವರಾಜ ಮಾನೆಪ್ಪಗೋಳ, ಆದಿತ್ಯ ಚೌಗಲೆ, ಸುಮೀತ ಕೊರಡೆ, ಚಿನ್ಮಯ ಧೂಳಾ, ವಿಕಾಸ ವಾಲೀಕಾರ, ನಿಶಾಂತ ಚೌಗಲಾ, ರಾಹುಲ ನಾಯ್ಕ, ಬಸವಪ್ರಭು ಮಾಲದಿನ್ನಿ, ಅಮಿತ ಕಮತಗೌಡರ, ಸೂರಜ ಸರಾಫ, ರಜತ ನ್ಯಾಮತಿ, ನಿಂಬಾಜಿ ಜರಕರ, ವಿಕಾಸ ಕಲಕುಟಕೇರಿ, ವಿನಾಯಕ ಶಿವಳ್ಳಿ, ಮಲ್ಲಿಕಾರ್ಜುನ ಗುಬ್ಬೇವಾಡ, ಇವರಿಗೆ ಹಾಗೂ ತರಬೇತಿ ನೀಡಿದ ಎಲ್ ಸಿ ಲಮಾನಿಯವರನ್ನು ಸಂಸ್ಥಾಪಕರು, ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಪ್ರಾಚಾರ್ಯರು, ವ್ಯವಸ್ಥಾಪಕರು ಹಾಗೂ ಸಿಬ್ಬಂದಿಯವರು ಅಬಿನಂದಿಸಿದ್ದಾರೆ.

ಸುದ್ದಿ ಓದಿ