ಸೆನ್ಸೆಕ್ಸ್ 100 ಅಂಕ ಕುಸಿತ
ಮುಂಬೈ, ಜುಲೈ 26 ಎಫ್‌ಎಂಸಿಜಿ, ಹಣಕಾಸು, ಆರೋಗ್ಯ ಮತ್ತು ಕೈಗಾರಿಕಾ ಷೇರುಗಳಿಗೆ ವ್ಯಕ್ತವಾದ ಖರೀದಿ ಬೆಂಬಲದಿಂದ ಮುಂಬೈ ಷೇರು ವಿನಿಮಯ ಕೇಂದ್ರ( ಬಿಎಸ್‌ಇ)ದ ಸಂವೇದಿ ಸೂಚ್ಯಂಕ, ಸೆನ್ಸೆಕ್ಸ್ ಸೋಮವಾರ ಬೆಳಗಿನ ವಹಿವಾಟಿನಲ್ಲಿ 102 ಅಂಕ ಏರಿಕೆ ಕಂಡು 53,077 ಕ್ಕೆ ತಲುಪಿದೆ.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ಸಹ 25 ಅಂಕ ಏರಿಕೆ ಕಂಡು 15,881.35 ಕ್ಕೆ ತಲುಪಿದೆ.
ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 53,103.42 ಮತ್ತು 52,783.63 ರಲ್ಲಿತ್ತು.
ನಿಫ್ಟಿ ಆರಂಭಿಕ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 15,893.35 ಮತ್ತು 15,797ರಲ್ಲಿತ್ತು. ಪ್ರಮುಖ 30 ಕಂಪೆನಿಗಳ ಷೇರುಗಳ ಪೈಕಿ 20 ಏರಿಕೆ ಕಂಡರೆ 10 ಕಂಪೆನಿಗಳ ಷೇರುಗಳು ಕುಸಿದಿವೆ.
ಲಾಭ ಗಳಿಸಿದ ಪ್ರಮುಖ ಷೇರುಗಳ ಪೈಕಿ ಬಜಾಜ್ ಫಿನ್‌ಸರ್ವ್, ಟೈಟಾನ್, ಇನ್ಫೋಸಿಸ್ , ಮತ್ತು ಎನ್‌ಟಿಪಿಸಿ ಸೇರಿವೆ.
ನಷ್ಟ ಕಂಡ ಷೇರುಗಳ ಪೈಕಿ ಮಾರುತಿ ಸುಜುಕಿ, ಎಸ್‌ಬಿಐ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್‌ಡಿಎಫ್‌ಸಿ ಸೇರಿವೆ.