ಮಹಲಿಂಗಪುರ

ಸ್ಥಳೀಯ ಆಡಳಿತ, ಗಣ್ಯರು, ವರ್ತಕರ ಸ್ವಯಂ ಘೋಷಣೆ

ಸ್ಥಳೀಯ ಆಡಳಿತ, ಗಣ್ಯರು, ವರ್ತಕರ ಸ್ವಯಂ ಘೋಷಣೆ

ಮಹಾಲಿಂಗಪುರ 15 ದಿನ ಫುಲ್ ಲಾಕ್ ಡೌನ್: ಇಂದು ಮಧ್ಯಾಹ್ನ 12 ರವರೆಗೆ ಅವಕಾಶ. 

ಮಹಾಲಿಂಗಪುರ : ಕೊರೋನಾ 2 ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಸೋಂಕು ಮತ್ತು ಸಾವಿನ ಮೇಲೆ ನಿಯಂತ್ರಣ ಸಾಧಿಸಲು ಸ್ಥಳೀಯ ಆಡಳಿತ 15 ದಿನಗಳ ಸಂಪೂರ್ಣ ಲಾಕ್ ಡೌನ್ ಜಾರಿಗೆ ತೀಮರ್ಾನ ಕೈಗೊಂಡಿದ್ದು, ಇಂದು ಮಧ್ಯಾಹ್ನ 12 ರಿಂದಲೇ ಮಹಾಲಿಂಗಪುರ ಸ್ಥಬ್ಧವಾಗಲಿದೆ. ಪೋಲೀಸ್ ಇಲಾಖೆ, ಆರೋಗ್ಯ ಇಲಾಖೆ, ಸ್ಥಳೀಯ ಪುರಸಭೆ ಹಾಗೂ ಗಣ್ಯರು, ವರ್ತಕರು ಸೇರಿದಂತೆ ನಿನ್ನೆ ಮಧ್ಯಾಹ್ನ ಪುರಸಭಾ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಕೊರೋನಾ ನಿಯಂತ್ರಣದಲ್ಲಿ ಮಹಾಲಿಂಗಪುರ ಪಟ್ಟಣ ಸಂಪೂರ್ಣ ಕೊರೋನಾ ಮುಕ್ತವಾಗಿ ದೇಶಕ್ಕೆ ಸ್ಥಳೀಯ ಆಡಳಿತ ಮಾದರಿಯಾಗುವಂತೆ ಕಟ್ಟು ನಿಟ್ಟಿನ ಲಾಕ್ ಡೌನ್ ಜಾರಿಯ ಬಗ್ಗೆ ಸ್ವಯಂ ಪ್ರೇರಿತರಾಗಿ ಸರ್ವರೂ ಪಾಲಿಸುವುದಾಗಿ ತೀಮರ್ಾನ ಕೈಗೊಳ್ಳಲಾಯಿತು. 

ಪುರಸಭಾ ಮುಖ್ಯಾಧಿಕಾರಿ ಎಚ್. ಎಸ್. ಚಿತ್ತರಗಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವಾರು ಮಾದರಿ ತೀಮರ್ಾನಗಳನ್ನು ಕೈಗೊಂಡಿದ್ದು ಇಂದು ಮಧ್ಯಾಹ್ನ 12 ರಿಂದಲೇ ಕಟ್ಟುನಿಟ್ಟಾಗಿ ಜಾರಿಗೆ ತರಲು ತೀಮರ್ಾನಿಸಲಾಗಿದೆ . ಸ್ಥಳೀಯ ಆಸ್ಪತ್ರೆ ಮತ್ತು ಔಷಧ ಅಂಗಡಿಗಳು 24*7 ಸೇವೆ ಒದಗಿಸುವುದು. ಕೊರೋನಾ ಪ್ರಾಥಮಿಕ ಲಕ್ಷಣ ಇರುವವರಿಗೆ ಮಾತ್ರೆಗಳ ಕಿಟ್ ವಿತರಿಸಿ, ತಿಳುವಳಿಕೆ ನೀಡುವುದು, ಪ್ರತಿದಿನ ಬೆಳಿಗ್ಗೆ 6 ರಿಂದ 10 ರವರಿಗೆ ಮಾತ್ರ ತರಕಾರಿಗಳನ್ನು ಕೈಗಾಡಿಗಳಲ್ಲಿ ತಳ್ಳಿಕೊಂಡು ಬಡಾವಣೆಗಳಲ್ಲಿ ಸುತ್ತಾಡಿ ಮಾರಾಟ ಮಾಡಲು ಮಾತ್ರ ಅವಕಾಶ.ಯಾವುದೇ ಸಂತೆಗೆ ಅಥವಾ ಒಂದೆಡೆ ಕುಳಿತು ಮಾರಾಟ ಮಾಡಲು ಅವಕಾಶ ಇಲ್ಲ. ಕೃಷಿಸಂಬಂಧಿತ ಬೀಜ,ಗೊಬ್ಬರ, ಔಷಧ ಇತರೆ ಅಂಗಡಿಗಳು ಮಾತ್ರ 6 ರಿಂದ 10 ರವರಿಗೆ ಮಾರಾಟಕ್ಕೆ ಅವಕಾಶ, ಕಟ್ಟಡ ಕಾಮಗಾರಿ ಸಲಕರಣೆಗಳಾದ ಸಿಮೆಂಟ್,ಕಬ್ಬಿಣ, ಪೇಂಟ್, ಎಲೆಕ್ಟ್ರಿಕಲ್ ಇತರೆ ವಸ್ತುಗಳನ್ನು ವ್ಯಾಪಾರಸ್ಥರು ಕಾಮಗಾರಿ ಸ್ಥಳಕ್ಕೆ ತಲುಪಿಸಲು ನಿತ್ಯ 10 ರವರಿಗೆ ಮಾತ್ರ ಅವಕಾಶ. ಕಿರಾಣಿ ಸಾಮಾನುಗಳನ್ನು ಹೋಲ್ ಸೇಲ್ ಅಥವಾ ನಿತ್ಯ 6 ರಿಂದ 10 ರವರಿಗೆ ಮನೆ ಬಾಗಿಲಿಗೆ ತಲುಪಿಸಲು ಮಾತ್ರ ಅವಕಾಶ. ಹೋಟೆಲ್ ಗಳಿಗೂ ಪಾರ್ಸಲ್ ಮತ್ತು ಡೋರ್ ಡಿಲವರಿಗೆ ಮಾತ್ರ ಅವಕಾಶ ನೀಡಲಾಯಿತು. 

ಬಾರ್ ಅಂಡ್ ರೆಸ್ಟೋರೆಂಟ್ ಸಂಪೂರ್ಣ ಬಂದ್ : ಸರಕಾರದ ನಿಯಮಗಳಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಗಳಿಗೆ ನಿಯಮಕ್ಕೊಳಪಟ್ಟ ಅನುಮತಿ ಇದ್ದರೂ ಸಹ ಮಹಾಲಿಂಗಪುರ ಬಾರ್ ಅಂಡ್ ರೆಸ್ಟೋರೆಂಟ್ ಮಾಲಿಕರು ಮುಂದಿನ 15 ದಿನಗಳು ಸ್ವಯಂ ಪ್ರೇರಿತರಾಗಿ ಸಂಪೂರ್ಣ ಬಂದ್ ಮಾಡಲು ಒಪ್ಪಿರುವುದರಿಂದ ಇಂದು ಮಧ್ಯಾಹ್ನದಿಂದ ಅವುಗಳಿಗೂ ಬೀಗ ಬೀಳಲಿದ್ದು ಮದ್ಯಪ್ರೀಯರಿಗೆ ಕೊಂಚ ಬೇಸರ ತರಿಸಿದೆ.ಅದರ ಜೊತೆ ಟೀ ಪಾಯಿಂಟ್, ಪಾನ್ ಷಾಪ್, ಕಟಿಂಗ್ ಶಾಪ್ ಗಳಿಗೂ ಬೀಗ ಬೀಳಲಿದೆ.ಪಿ ಎಸ್ ಐ ಆನಂದ ಅದಗೊಂಡ ಮಾತನಾಡಿ, ಸ್ಥಳೀಯರು ಕೈಗೊಂಡಿರುವ ಸ್ವಯಂ ಘೋಷಿತ ಲಾಕ್ ಡೌನ್ ಕಟ್ಟು ನಿಟ್ಟಾಗಿ ಪಾಲಿಸಿ, ತಪ್ಪಿದಲ್ಲಿ ವಾಹನಗಳನ್ನು ವಶ ಪಡಿಸಿಕೊಂಡು ಕೊರೋನಾ ಅಂತ್ಯದವರೆಗೂ ವಾಹನವನ್ನು ಮರಳಿಸುವುದಿಲ್ಲ ಹಾಗೂ ನಿಯಮ ಮೀರುವ ವ್ಯಾಪಾರಸ್ಥರ ಸಾಮಾಗ್ರಿಗಳನ್ನು ಸಹ ಜಪ್ತಿ ಮಾಡಿ, ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

 ಪುರಸಭಾ ಸದಸ್ಯರಾದ ಯಲ್ಲನಗೌಡ ಪಾಟೀಲ, ಶೇಖರ ಅಂಗಡಿ, ಜಾವೇದ ಭಾಗವಾನ್, ಬಸವರಾಜ ಹಿಟ್ಟಿನ ಮಠ, ಚನ್ನಬಸು ಯರಗಟ್ಟಿ, ರಾಜು ಚಮಕೇರಿ, ರವಿ ಜವಳಗಿ ಮತ್ತು ನಿಂಗಪ್ಪ ಬಾಳಿಕಾಯಿ, ಅಶೋಕ ಅಂಗಡಿ, ರಾಜು ಭಾವಿಕಟ್ಟಿ, ಸುನಿಲಗೌಡ ಪಾಟೀಲ, ಶಿವು ಅಂಗಡಿ, ಲಕ್ಷ್ಮಣ ಮಾಂಗ, ಸುರೇಶ ಹೊಸೂರ, ಕೇಮಚಂದ್ ಓಸ್ವಾಲ್, ಮಹಾಂತೇಶ ತಿರಕನ್ನವರ, ಅನಿಲ ಉಳ್ಳಾಗಡ್ಡಿ, ರಾಜು ನಂದೆಪ್ಪನವರ ಎಂ.ಕೆ ಪತ್ತಾರ್ ಇನ್ನೂ ಮುಂತಾದವರಿದ್ದರು.


ಸುದ್ದಿ ಓದಿ