ಕೊಪ್ಪಳ

ಕೊಪ್ಪಳ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಕೊಪ್ಪಳ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಕೊಪ್ಪಳ 05: ಕೆಲವು ದಶಕಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಉರ್ದು ಭಾಷೆಯ ಅಭಿವೃದ್ಧಿ ಸೇರಿದಂತೆ ಸಾಹಿತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಸಮಾಜ ಕಾರ್ಯ ಮಾಡುತ್ತಿರುವ ಇದಾರಯೆ ಅದಬೆ ಇಸ್ಲಾಮಿ ಹಿಂದ್ ಕೊಪ್ಪಳ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಕುರಿತು ಗುರುವಾರ  ಕೊಪ್ಪಳದ ಜಮಾತೆ ಇಸ್ಲಾಮಿ ಹಿಂದ್ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳಲಾಯಿತು.

ಇದಾರಯೆ ಅದಬೆ ಇಸ್ಲಾಮಿ ಹಿಂದ್ ಕೊಪ್ಪಳ ಘಟಕಕ್ಕೆ ಅಧ್ಯಕ್ಷರಾಗಿ ಮೊಹಮ್ಮದ್ ಅಲಿ ಹಿಮಾಯತಿ, ಕಾರ್ಯದರ್ಶಿಯಾಗಿ ಹೈದರ್ ಅಲಿ ಮತ್ತು ಖಜಾಂಚಿಯಾಗಿ ಬದಿಯುದೀನ್ ನವೀದ್ ರವರು  ಆಯ್ಕೆಗೊಂಡಿದ್ದಾರೆ. ಸದರಿ ಘಟಕದ ಪದಾಧಿಕಾರಿಗಳ ಆಯ್ಕೆ ಕುರಿತು ಇದಾರಯೆ ಅದಬೆ ಇಸ್ಲಾಮಿ ಹಿಂದ್‍ನ ರಾಜ್ಯ ಕಾರ್ಯದರ್ಶಿಯಾಗಿರುವ ಅಬ್ದುಲ್ ಖದೀರ್ ರವರು ನೂತನ ಪದಾಧಿಕಾರಿಗಳ ಆಯ್ಕೆ ಘೋಷಣೆಮಾಡಿದರು. ನಿಕಟಪೂರ್ವ ಕೊಪ್ಪಳ ಘಟಕದ ಅಧ್ಯಕ್ಷರಾದ ನಿವೃತ್ತ ಉಪನ್ಯಾಸಕ  ಅನ್ವರ್ ಹುಸೇನ್ ರವರು ಪಾಲ್ಗೊಂಡಿದ್ದರು. ಸುಮಾರು 4 ವರ್ಷಗಳ ಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಅವಧಿ ಮುಗಿದ ಬಳಿಕ ತೆರವುಗೊಂಡ ಅವರ ಸ್ಥಾನಕ್ಕೆ ನೂತನ ಅಧ್ಯಕ್ಷರಾಗಿ ಮಹಮದ್ ಅಲಿ ಹಿಮಾಯತಿ ರವರು ಆಯ್ಕೆಗೊಂಡಿದ್ದಾರೆ.

ಅದರಂತೆ  ಕಾರ್ಯದರ್ಶಿಯಾಗಿ ಹೈದರ್ ಅಲಿ, ಖಜಾಂಚಿಯಾಗಿ ಬದಿಯುದೀನ್ ನವೀದ್ ರವರು ಆಯ್ಕೆಗೊಂಡಿದ್ದು  ನೂತನ ಪದಾಧಿಕಾರಿಗಳ ಆಯ್ಕೆ ಕುರಿತು ಜರುಗಿದ ಸಭೆಯಲ್ಲಿ ಹಿರಿಯರಾದ ರಶೀದ್‍ಸಾಬ್, ಪತ್ರಕರ್ತ ಸಾದಿಕ್ ಅಲಿ, ಖಾದರಬಾಬಾ ಮಾಳೆಕೊಪ್ಪ, ಅಶ್ಫಾಕ್ ಅಹಮ್ಮದ್ ಕಲೀಮ್‍ಉಲ್ಲಾ ಖಾನ್, ರಶೀದ್ ಸಿದ್ದಿಕಿ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು ನಿಕಟಪೂರ್ವ ಅಧ್ಯಕ್ಷರಾದ ಅನ್ವರ ಹುಸೇನ್ ರವರ ಕಾರ್ಯಕ್ಕೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿ ನೂತನ ಪದಾಧಿಕಾರಿಗಳಿಗೆ ಸಹಕಾರ ಮಾರ್ಗದರ್ಶನ ನೀಡುವಂತೆ ರಾಜ್ಯ ಕಾರ್ಯದರ್ಶಿ ಅಬ್ದುಲ್ ಖದೀರ್ ರವರು ಸಲಹೆ ನೀಡಿದರು.


ಸುದ್ದಿ ಓದಿ