ಖಾನಾಪುರ

ನಿರಂತರ ಪ್ರಗತಿ ಪತ್ರಿಕೆ ಚಂದಾ ಸಂಗ್ರಹಣೆಯಲ್ಲಿ ದೊಡಮನಿಗೆ ದ್ವಿತೀಯ ಸ್ಥಾನ

ನಿರಂತರ ಪ್ರಗತಿ ಪತ್ರಿಕೆ ಚಂದಾ ಸಂಗ್ರಹಣೆಯಲ್ಲಿ ದೊಡಮನಿಗೆ ದ್ವಿತೀಯ ಸ್ಥಾನ

ಕಕ್ಕೇರಿ 10: ಸ್ವಸಹಾಯ ಮಹಿಳಾ ಸಂಘಗಳ ಸದಸ್ಯರು, ಪ್ರಗತಿ ಬಂಧುಗಳು,ಸ್ವ ಉದ್ಯೋಗ,ಸಾಮಾನ್ಯ ಜ್ಞಾನ,ಕುಟುಂಬ ಅಭಿವೃದ್ಧಿ, ಮಕ್ಕಳ ಶಿಕ್ಷಣ ಹಾಗೂ ಎಲ್ಲ ಜನಸಾಮಾನ್ಯರಿಗೆ ಉಪಯುಕ್ತ ಮಾಹಿತಿ ಹೊಂದಿದ ಮಾಸಪತ್ರಿಕೆ "ನಿರಂತರ ಪ್ರಗತಿ."ಪ್ರಗತಿ ಪಥದಲ್ಲಿ ಮುಂದುವರೆದಿದೆ. 

ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನ ಮಂಡಳಿಯ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಮಹಾತ್ವಾಕಾಂಕ್ಷಿ ಗ್ರಾಮೀಣಾಭಿವೃದ್ಧಿ ಯೋಜನೆಗಳ ಅನುಷ್ಠಾನದ ಮುಖವಾಣಿಯಾಗಿ ದಶಕಗಳಿಂದ ಪ್ರಕಟವಾಗುತ್ತಿರುವ ಈ ಮಾಸಪತ್ರಿಕೆ ಜನಪ್ರಿಯವಾಗಿ ಬೆಳೆಯುತ್ತಿದೆ. 

ಈ ಪತ್ರಿಕೆಯನ್ನು ನೂರಾರು ಸ್ವ ಸಹಾಯ ಮಹಿಳಾ ಸಂಘಗಳ ಸದಸ್ಯರಿಗೆ ಪೂರೈಸಿದ ಬೀಡಿವಲಯದ ಮೇಲ್ವಿಚಾರಕ ಪ್ರವೀಣ ದೊಡಮನಿಯವರು  ತಾಲೂಕಿನಲ್ಲಿ 200 ನಿರಂತರ ಪತ್ರಿಕೆಗಳ ವಿತರಣೆಯ ಚಂದಾ ಸಂಗ್ರಹಣೆಯಲ್ಲಿ ದಾಖಲೆಯ ದ್ವಿತೀಯ ಸ್ಥಾನ ಗಳಿಸಿದ್ದಾರೆ. 

ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಅಭಿನಂದನಾ ಪತ್ರವನ್ನು ಪ್ರವೀಣ ಅವರಿಗೆ ಖಾನಾಪುರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಅಧಿಕಾರಿ ರಿಯಾಜ್ ಅತ್ತಾರ ನೀಡಿ ಅಭಿನಂದನೆ ಸಲ್ಲಿಸಿದರು.

ಸುದ್ದಿ ಓದಿ