ಶಾಲೆ ನೈತಿಕ ಮೌಲ್ಯಗಳು ಅರಳುವ ಕೇಂದ್ರ-ಸಾಹಿತ್ಯದ ತವರು ಮನೆ
ರಬಕವಿ-ಬನಹಟ್ಟಿ: ನಾಲ್ಕು ಗೋಡೆಗಳ ಮಧ್ಯೆ ಭಾರತದ ಭವಿಷ್ಯ ನಿರ್ಮಾಣವಾಗುತ್ತಿದೆ. ಇತಿಹಾಸ ಬರೆಯುವ, ಅರಿಯುವ ಮೊದಲ ಮೆಟ್ಟಿಲು ಶಾಲೆ. ಇದು ನೈತಿಕ ಮೌಲ್ಯಗಳು ಅರಳುವ ಕೇಂದ್ರವಾಗಿದೆ. ಕಥೆ, ಕವನ, ಗದ್ಯ, ಪದ್ಯ, ಕಾದಂಬರಿ ಬರೆಯುವವರಷ್ಟೇ ಸಾಹಿತಿಗಳಲ್ಲ, ಓದುವವರು, ವಿಮರ್ಶಿಸಿ ಪ್ರತಿಕ್ರಿಯೆ ನೀಡುವವರು ಸಾಹಿತಿಗಳಾಗಿದ್ದಾರೆ. ಓದುವ, ಬರೆಯುವ ಸಾಹಿತಿಗಳ ಜನ್ಮಸ್ಥಳ ಶಾಲೆ ಇದು ಸಾಹಿತ್ಯದ ತವರು ಮನೆ ಎಂದು ಮುಧೋಳದ ಹಿರಿಯ ಜನಪದ ಸಾಹಿತಿ ಸಿದ್ದು ದಿವಾಣ ಹೇಳಿದರು.
ಬಾಗಲಕೋಟೆ ಜಿಲ್ಲೆ ರಜತ ಮಹೋತ್ಸವದಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬಾಗಲಕೋಟೆ, ತಾಲೂಕ ಘಟಕ ರಬಕವಿ ಬನಹಟ್ಟಿ ವಲಯಗಳು ತೇರದಾಳ, ಮಹಾಲಿಂಗಪುರ, ಸರ್ಕಾರಿ ಪ್ರೌಢಶಾಲೆ ಹನಗಂಡಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಹಿತ್ಯದ ನಡಿಗೆ ಶಾಲೆಗಳೆಡೆಗೆ ಕಾರ್ಯಕ್ರಮವನ್ನು ಕುವೆಂಪು ಅವರ ಆತ್ಮಕಥೆ ನೆನಪಿನ ದೋಣಿಯಲ್ಲಿ ಕೃತಿಯನ್ನು ಓದುವುದರ ಮೂಲಕ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿ ಕನ್ನಡಕ್ಕೆ ತನ್ನದೇಯಾದ ಇತಿಹಾಸವಿದೆ. ಪರಂಪರೆಯಿದೆ. ಭಾಷೆಯ ಅರ್ಥ ಅರಿಯಬೇಕು ಎಂದರು.
ಮಕ್ಕಳ ಸಾಹಿತಿ ಜಯವಂತ ಕಾಡದೇವರ, ಗ್ರಾಮದ ಪ್ರಮುಖ ಪ್ರಸನ್ನಕುಮಾರ ದೇಸಾಯಿ, ಕಸಾಪ ಜಿಲ್ಲಾ ಸಮಿತಿ ಮಹಿಳಾ ಪ್ರತಿನಿಧಿ ಶ್ರೀಮತಿ ದಾಕ್ಷಾಯಣಿ ಮಂಡಿ ಅವರು ಮಾತನಾಡಿ ಸಾಹಿತ್ಯ ಪರಿಷತ್ತು ಇದೀಗ ಗ್ರಾಮೀಣ ಪ್ರದೇಶಕ್ಕೆ, ಶಾಲಾ ಮಕ್ಕಳೆಡೆಗೆ ಹೋಗುತ್ತಿದೆ. ಮಕ್ಕಳು ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು. ಶಾಲಾ ಹಂತದಲ್ಲಿ ಮಕ್ಕಳು ಸಾಹಿತ್ಯವನ್ನು ಅರಿತು ಸಾಹಿತ್ಯ ಕ್ಷೇತ್ರದಲ್ಲಿ ತೊಡಗುವಂತೆ ಮಾಡಲು ಈ ಕಾರ್ಯಕ್ರಮ ಪ್ರೇರಣೆ ನೀಡುವುದು ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕದ ಅಧ್ಯಕ್ಷರಾದ ಮ.ಕೃ.ಮೇಗಾಡಿ ಅಧ್ಯಕ್ಷತೆ ವಹಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳ ಯಶಸ್ವಿಗೆ ಎಲ್ಲರ ಪ್ರೋತ್ಸಾಹ ಸಹಕಾರ ಸದಾಕಾಲವೂ ಇರಲಿ. ನಾಡೋಜ ಡಾ. ಮಹೇಶ ಜೋಷಿ ಅವರು ರಾಜ್ಯದಲ್ಲಿ ಕಸಾಪ ಒಂದು ಕೋಟಿ ಸದಸ್ಯತ್ವ ಮಾಡುವ ಗುರಿಯನ್ನು ಹೊಂದಿದ್ದಾರೆ ಬಾಗಲಕೋಟೆ ಜಿಲ್ಲೆಯಲ್ಲಿಯೂ ನಿರಂತರ ಕಾರ್ಯಕ್ರಮ ನಡೆಯಲು ಜಿಲ್ಲಾಧ್ಯಕ್ಷರಾದ ಶಿವಾನಂದ ಶೆಲ್ಲಿಕೇರಿ ನಿರಂತರ ಶ್ರಮಿಸುತ್ತಿದ್ದಾರೆ ಎಂದರು.
ಶA.ಗು.ಬಿರಾದಾರ ಅವರ ಕವಿತೆಯನ್ನು ಶ್ರೀದೇವಿ ಪಾಟೀಲ, ಅಣ್ಣಾಜಿ ಫಡತಾರೆ ಅವರ ಕವಿತೆಯನ್ನು ಸಂಜನಾ ಕಮಲದಿನ್ನಿ, ಜಯವಂತ ಕಾಡದೇವರ ಅವರ ಕವಿತೆಯನ್ನು ಅನಿತಾ ಪಾಟೀಲ, ಡಾ. ಶಾರದಾ ಮುಳ್ಳೂರ ಅವರ ಕವಿತೆಯನ್ನು ಶಿವಾನಂದ ಪಾಟೀಲ, ಸೋಮಲಿಂಗ ಬೇಡರ ಅವರ ಕವಿತೆಯನ್ನು ಮಹೇಶ ನಂದಗುಣಿ, ಮ.ಕೃ.ಮೇಗಾಡಿ ಅವರ ಕವಿತೆಯನ್ನು ಸೇವಂತಿ ಮಾಕಾಣಿ ವಾಚಿಸಿದರು.
ಎಸ್ಬಿಐ ಜೀವವಿಮ ಪ್ರತಿನಿಧಿ ರಾಮಪುರದ ಮಹಾಲಿಂಗ ತೆಳಗಿನಮನಿ, ಎಸ್ಡಿಎಂಸಿ ಅಧ್ಯಕ್ಷ ಶ್ರೀಶೈಲ ಬಿರಾದಾರಪಾಟೀಲ, ದೈಹಿಕ ಶಿಕ್ಷಕಿ ಎಸ್.ಎಸ್.ಮಾಂಗ, ಕರಾಟೆ ಕೋಚ್ ಪರವೀನ್ ಗಡ್ಡೇಕರ ಅವರನ್ನು ಸನ್ಮಾನಿಸಲಾಯಿತು.
ಕುಮಾರಿ ಎಸ್.ಎಸ್.ಮಾಂಗ ಪ್ರಾರ್ಥಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಡಾ. ಶಾರದಾ ಮುಳ್ಳೂರ ಅವರು ಸ್ವಾಗತಿಸಿ ಮಾತನಾಡಿದರು. ಪುಷ್ಪ ಕವಟಗೊಪ್ಪ ನಿರೂಪಿಸಿದರು. ಸಂಜಯ ಹರವಿ ವಂದಿಸಿದರು.
ರಬಕವಿಯ ಮಹದೇವ ಹೆರಕಲ್ಲ, ಹನಗಂಡಿ ಗ್ರಾಮ ಪಂಚಾಯತ ಸದಸ್ಯ ಪ್ರಕಾಶ ನಾರವಗೋಳ, ರಬಕವಿ ಸಿಆರ್ಪಿ ಎಸ್.ಎ.ಕೊಕಟನೂರ, ತೇರದಾಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಎಂ.ಆರ್.ನದಾಫ್, ವೀರಬಸಪ್ಪ ಗೋಲಬಾಂವಿ, ಮಲ್ಲು ಜೋಗದಂಡೆ, ಎಸ್ಡಿಎಂಸಿ ಸದಸ್ಯರಾದ ಶಾಂತಾ ಜನವಾಡ, ಭಾರತಿ ಚೌಗಲಾ, ಲಾಳಕೆ, ಶಾಲಾ ಸಿಬ್ಬಂದಿ, ಮಕ್ಕಳು ಪಾಲ್ಗೊಂಡಿದ್ದರು.