2 ತಿಂಗಳಲ್ಲಿ ಇಬ್ಬರು ನಾಯಕರನ್ನು ಕಳೆದುಕೊಂಡ ಬೆಳಗಾವಿ ಜಿಲ್ಲೆ : ಸವದತ್ತಿ ಶಾಸಕ ಆನಂದ ಮಾಮನಿ ವಿಧಿವಶ : ಕಿತ್ತೂರು ಉತ್ಸವ ನಾಳಿಗೆ ಮುಂದೂಡಿಕೆ : ಇಬ್ಬರು ನಾಯಕರನ್ನು ಕಳೆದುಕೊಂಡು ಬಡವಾದ ಬಿಜೆಪಿ

2 ತಿಂಗಳಲ್ಲಿ ಇಬ್ಬರು ನಾಯಕರನ್ನು ಕಳೆದುಕೊಂಡ ಬೆಳಗಾವಿ ಜಿಲ್ಲೆ : ಸವದತ್ತಿ ಶಾಸಕ ಆನಂದ ಮಾಮನಿ ವಿಧಿವಶ : ಕಿತ್ತೂರು ಉತ್ಸವ ನಾಳಿಗೆ ಮುಂದೂಡಿಕೆ : ಇಬ್ಬರು ನಾಯಕರನ್ನು ಕಳೆದುಕೊಂಡು ಬಡವಾದ ಬಿಜೆಪಿ

ಬೆಳಗಾವಿ, ಅ, 23 : ಕಳೆದ 2 ತಿಂಗಳುಗಳ ಹಿಂದಷ್ಟೇ ಸಚಿವ ಉಮೇಶ ಕತ್ತಿ ಅವರನ್ನು ಕಳೆದುಕೊಂಡಿದ್ದ ಬೆಳಗಾವಿ ಜಿಲ್ಲೆ ಈಗ ಮತ್ತೋರ್ವ ನಾಯಕನನ್ನು ಕಳೆದುಕೊಂದಿದೆ. ಕೇವಲ ಎರಡು ತಿಂಗಳ ಅವಧಿಯಲ್ಲಿ ಈ ಇಬ್ಬರು ನಾಯಕರನ್ನು ಕಳೆದುಕೊಂಡಿರುವ ಬೆಳಗಾವಿ ಬಿಜೆಪಿ ಈಗ ಬಡವಾಗಿದೆ. ಇದರಿಂದ ಇಂದಿನಿಂದ ನಡೆಯಬೇಕಿದ್ದ ಕಿತ್ತೂರು ಉತ್ಸವದ ಮೇಲೆ  ಸೂತಕದ ಛಾಯೆ ಆವರಿಸಿದೆ. ಇಂದು ನಡೆಯಬೇಕಿದ್ದ ಕಿತ್ತೂರು ಉತ್ಸವವನ್ನು ನಾಳೆಗೆ ಮುಂದೂಡಿಕೆ ಮಾಡಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ ಮಾಡಿದ್ದಾರೆ.


     ಕಳೆದ ಎರಡು ತಿಂಗಳ ಹಿಂದೆ ಜಿಲ್ಲೆಯ ನಾಯಕ ಉಮೇಶ ಕತ್ತಿ ಅವರ ನಿಧನದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ಶೋಕದಿಂದ ಹೊರಬರುತ್ತಿದ್ದಂತೆ ಈಗ ಸವದತ್ತಿ ಶಾಸಕ ಹಾಗೂ ವಿಧಾನ ಸಭಾ ಉಪಾಧ್ಯಕ್ಷ ಆನಂದ ಮಾಮನಿ ಅವರನ್ನು ಕಳೆದುಕೊಂಡಿರುವದು ಕ್ಷೇತ್ರದ ಜನರು ಶೋಕ ಸಾಗರದಲ್ಲಿ ಮುಳಗಿದ್ದಾರೆ. ಅಲ್ಲದೆ ಬಿಜೆಪಿ ನಾಯಕರ ನಿಧನದ ಹಿನ್ನೆಲೆಯಲ್ಲಿ ಬಿಜೆಪಿ ಈಗ ನಾಯಕರ ಕೊರತೆಯಿಂದ ಬಡತನವನ್ನು ಅನುಭವಿಸುವಂತಾಗಿದೆ. 


      ಜಿಲ್ಲೆಯ ನಾಯಕರಾಗಿ ವಿಧಾನ ಸಭಾ ಉಪಾಧ್ಯಕ್ಷರಾಗಿ ಕಾರ್ಯ ಮಾಡುತ್ತಿದ್ದ ಆನಂದ ಮಾಮನಿ ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಅವರು ನಿಧನರಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆನಂದ ಮಾಮನಿ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.


       ನಮ್ಮ ಪಕ್ಷದ ಶಾಸಕರು, ವಿಧಾನಸಭೆಯ ಉಪಾಧ್ಯಕ್ಷರೂ ಆಗಿರುವ ಆನಂದ ಚಂದ್ರಶೇಖರ ಮಾಮನಿ ಅವರು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಿ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುವ ಮೂಲಕ  ಮುಖ್ಯಮಂತ್ರಿಗಳು ಕಂಬನಿ ಮಿಡಿದಿದ್ದಾರೆ.


(ಪೊಟೊ ಸಂಗ್ರಹ ಪಿ.ಕೆ.ಬಡಿಗೇರ)

ಸುದ್ದಿ ಓದಿ