ಸವದತ್ತಿ ಬಳಿ ನವಿಲುತೀರ್ಥ ಜಲಾಶಯದಲ್ಲಿ ತಾಯಿ, ಇಬ್ಬರು ಮಕ್ಕಳ ಮೃತದೇಹ ಪತ್ತೆ : ಜಿಗುಪ್ಸೆಯಿಂದ ಮಕ್ಕಳೊಂದಿಗೆ ತಾಯಿ ಹಿನ್ನೀರಿಗೆ ಹಾರಿ ಆತ್ಮಹತ್ಯೆ
ಬೆಳಗಾವಿ, ನ, 19: ತಾಯಿಯೋರ್ವಳು ತನ್ನ ಇಬ್ಬರು ಮಕ್ಕಳೊಂದಿಗೆ ನವಿಲು ತೀರ್ಥ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ಕುಲುಕುವ ಘಟನೆ ನಡೆದಿದೆ.
ಮೃತರು ಜಿಲ್ಲೆಯ ರಾಮದುರ್ಗ ತಾಲೂಕಿನ ಚುಂಚನೂರ ಗ್ರಾಮದ ಶಶಿಕಲಾ ಉರ್ಫ ತನುಜಾ ಪರಸಪ್ಪ ಗೋಡಿ (32) ಸಾ: ಚುಂಚನೂರು ತಾಲೂಕ : ಹಾಗೂ ಮಕ್ಕಳಾದ ಸುದೀಪ (4) ಮತ್ತು ರಾಧಿಕಾ (3) ಮೃತಪಟ್ಟ ದುರ್ಧೈವಿಗಳಾಗಿದ್ದಾರೆ.
ಶುಕ್ರವಾರ ದಿ. 18ರಂದು ಜಿಲ್ಲೆಯ ಸೌದತ್ತಿ ಪೊಲೀಸ್ ಠಾಣೆಯ ವಟ್ನಾಳ ಗ್ರಾಮ ಹದ್ದಿಯಲ್ಲಿ ಇರುವ ನವಿಲುತೀರ್ಥ ಜಲಾಶಯದ ಹಿನ್ನೀರಿನಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ಶವಗಳು ದೊರೆತಿದ್ದವು.
ಈ ಮೃತರ ಕುರಿತು ಸೌದತ್ತಿ ಪೊಲೀಸರು ತನಿಖೆ ನಡೆಸಿದಾಗ 17ರಂದು ಸಂಜೆ ವೇಳೆ ಶಶಿಕಲಾ ಇವಳು ಸಂಸಾರಿಕ ಜೀವನದಲ್ಲಿ ಜಿಗುಪ್ಸೆಯಿಂದ ತನ್ನ ಮಕ್ಕಳಾದ ಸುದೀಪ್, ನಾಲ್ಕು ವರ್ಷ ಹಾಗೂ ರಾಧಿಕಾ, ಮೂರು ವರ್ಷ ಇವರನ್ನು ನವಿಲು ತೀರ್ಥ ಜಲಾಶಯದ ಹಿನ್ನೀರಿನಲ್ಲಿ ಎರಡು ಮಕ್ಕಳನ್ನು ನೀರಲ್ಲಿ ಮುಳುಗಿಸಿ ತಾನು ಕೂಡಾ ನೀರಲ್ಲಿ ಮುಳುಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಕುರಿತು ಸೌದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ತನಿಖೆ ಮುಂದುವರೆದಿದೆ.