ನಿಪ್ಪಾಣಿ ವಸತಿ ಗೃಹದ ಮೇಲೆ ದಾಳಿ : ವೆಶ್ಯಾವಾಟಿಕೆಯಲ್ಲಿದ್ದ 3 ಬಂಧನ, 5 ಮಹಿಳೆಯರ ರಕ್ಷಣೆ

ನಿಪ್ಪಾಣಿ ವಸತಿ ಗೃಹದ ಮೇಲೆ ದಾಳಿ : ವೆಶ್ಯಾವಾಟಿಕೆಯಲ್ಲಿದ್ದ 3 ಬಂಧನ, 5 ಮಹಿಳೆಯರ ರಕ್ಷಣೆ

ಬೆಳಗಾವಿ, ಫೆ, 27 : ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿರುವ ನಿಪ್ಪಾಣಿ ಪೊಲೀಸರು ಮೂವರನ್ನು ಬಂಧಿಸಿ 5 ಮಹಿಳೆಯರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.


    ನಿಪ್ಪಾಣಿ ನಗರದ ಹೊರ ವಲಯದಲ್ಲಿರುವ ಖಾಸಗಿ ಹೊಟೇಲ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಿರುವ ಬಗ್ಗೆ ಖಚಿತ ಮಾಹಿತಿ ಪಡೆದ ನಿಪ್ಪಾಣಿ ಸಿಪಿಐ ಸಂಗಮೇಶ ಶಿವಯೋಗಿ ಹಾಗೂ ಸಿಬ್ಬಂದಿಗಳು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಹೆಚ್ಚುವರಿ ವರಿಷ್ಠಾಧಿಕಾರಿ ನಂದಗಾವಿ ಅವರ ಮಾರ್ಗದಲ್ಲಿ ದಂಧೆ ನಡೆಯುತ್ತಿದ್ದ ವಸತಿ ಗೃಹದ‌ ಮೇಲೆ ಶನಿವಾರ ತಡರಾತ್ರಿ ದಾಳಿ ನಡೆಸಿದ್ದಾರೆ.  ಈ ಸಂದರ್ಭದಲ್ಲಿ ಈ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮೂವರು ದಂಧೆಕೊರರನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಸದ್ಯ ಮಾಂಸದ ದಂಧೆ ನಡೆಸುತ್ತಿದ್ದ ಖದೀಮರು ಜೈಲು ಪಾಲಾಗಿದ್ದಾರೆ‌.

    ಜಿಲ್ಲೆಯ ನಿಪ್ಪಾಣಿ ಪಟ್ಟಣದ ಹೊರವಲಯದ ಖಾಸಗಿ ಹೊಟೆಲ್ ಮೇಲೆ ನಿಪ್ಪಾಣಿ ಪೊಲೀಸರು ನಡೆದ ದಾಳಿ ನಡೆಸಿದ್ದು, ಈ ಮಾಂಸದ ದಂಧೆಗೆ ಸಹಕಾರ ಮಾಡುತ್ತಿದ್ದ ಸಂಕೇಶ್ವರದ ಸಂಜಯ ಮಾಳಿ ಹಾಗೂ ಹುಕ್ಕೇರಿ ತಾಲೂಕಿನ ಗೋಟೂರು ಗ್ರಾಮದ ಅರುಣ ಶೇಖನವರ ಮತ್ತು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಪಿಂಪಳಗಾಂವ ಗ್ರಾಮದ ಪರುಶರಾಮ ಚೌಹಾನ್ ಬಂಧಿತ ಆರೋಪಿಗಳಾಗಿದ್ದಾರೆ.

   ಈ ದಾಳಿಯ ವೇಳೆ 5 ಜನ ಮಹಿಳೆಯರನ್ನು ರಕ್ಷಣೆ ಮಾಡಿ ಪೊಲೀಸರು ಅವರನ್ನು ಸಂತ್ವನ ಕೇಂದ್ರಕ್ಕೆ ರವಾಣೆ ಮಾಡಿದ್ದಾರೆ.  ಈ ಕುರಿತು ನಿಪ್ಪಾಣಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದೆ ವರೆದಿದೆ.

ಸುದ್ದಿ ಓದಿ