ಕೆಎಲ್ಇ ಸಂಸ್ಥೆಯ ಸಂಸ್ಕಾರಕ್ಕೆ ಸಪನಾ ಅನಿಗೋಳ ಸಾಧನೆ ಸಾಕ್ಷಿ: ಕುಂದಗೋಳ
ಮಹಾಲಿಂಗಪುರ24: ಶಿಕ್ಷಕರೇ ಕಟ್ಟಿದ ಕೆಎಲ್ಇ ಸಂಸ್ಥೆ ಸಂಸ್ಕಾರ ಮತ್ತು ವಿದ್ವತ್ತಿಗೆ ಹೆಸರಾಗಿದ್ದು, ರಾಜ್ಯಮಟ್ಟದ ಶಿಕ್ಷಕಿ ಪ್ರಶಸ್ತಿ ಪಡೆದ ಸಪನಾ ಅನಿಗೋಳ ಅವರು ಕೆಎಲ್ಇ ಸಂಸ್ಥೆಯ ಸಂಸ್ಕಾರಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಕೆಎಲ್ಇ ಪಾಲಿಟೆಕ್ನಿಕ್ ಪ್ರಾಚಾರ್ಯ ಎಸ್.ಐ.ಕುಂದಗೋಳ ಹೇಳಿದರು.
ಸ್ಥಳೀಯ ಕೆಎಲ್ಇ ಡಿಪ್ಲೋಮಾ ಕಾಲೇಜಿನಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕಿ ಸಪನಾ ಅನಿಗೋಳ ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಅಭಿನಂದನಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಶೈಕ್ಷಣಿಕವಾಗಿ ಬರೀ ಪಾಠ ಬೋಧನೆಗೆ ಮಾತ್ರ ಸೀಮಿತವಾಗದೆ ಮಕ್ಕಳಲ್ಲಿ ಪ್ರಾ??ಕ್ಟಿಕಲ್ ಜ್ಞಾನದೊಂದಿಗೆ ಜಾಗೃತಿ ಮೂಡಿಸಿ, ಸಾಮಾಜಿಕ ಕಳಕಳಿ, ಪರಿಸರ ಕಾಳಜಿಯೊಂದಿಗೆ ನಿಜವಾದ ಶಿಕ್ಷಣದ ಜವಾಬ್ದಾರಿ ಏನು ಎಂಬುದನ್ನು ತೋರಿಸಿಕೊಟ್ಟ ಅವರ ಪರಿಶ್ರಮಕ್ಕೆ ವಿಳಂಬವಾಗಿಯಾದರೂ ರಾಜ್ಯಮಟ್ಟದ ಪ್ರಶಸ್ತಿ ಬಂದಿದ್ದು ಹೆಡಮ್ಮೆ ತಂದಿದೆ ಎಂದರು.
ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕಿ, ರಾಜ್ಯಪ್ರಶಸ್ತಿ ವಿಜೇತೆ ಸಪ್ನಾ ಅನಿಗೋಳ ಸನ್ಮಾನ ಸ್ವೀಕರಿಸಿ ಮಾತನಾಡಿ, ಜೀವನದಲ್ಲಿ ಯಶಸ್ಸು ಎಂಬುದು ತಾನಾಗಿ ದೊರೆಯುವುದಿಲ್ಲ. ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡರೆ ಯಶಸ್ಸು ದೊರೆಯುತ್ತದೆ. ದುರ್ದೈವ ಬಂದಾಗ ಅದನ್ನು ಮೆಟ್ಟಿ ನಿಲ್ಲಬೇಕು. ಸುದೈವ ಬಂದಾಗ ಬಾಚಿ ತಬ್ಬಿಕೊಳ್ಳಬೇಕು. ಪ್ರೌಢಶಾಲೆ, ಕಾಲೇಜು ಎಂಬುದು ಜೀವನದ ತಿರುವು ಇದ್ದ ಹಾಗೆ. ಅಂಕ ಪಡೆಯುವಾಗ ಸ್ಪರ್ಧಾತ್ಮಕ ಭಾವ ನಿಮ್ಮಲ್ಲಿರಲಿ. ತಮ್ಮ ಜೀವನವನ್ನು ಸೆವೆಸಿ ಓದಿಸುವ ತಂದೆ-ತಾಯಿಗಳ ಮೇಲೆ ಗೌರವವಿರಲಿ. ಕನಿಷ್ಠ ಕಾಳಜಿಯಾದರೂ ಇರಲಿ. ತಮಗೆ ದೊರೆತ ಪ್ರಶಸ್ತಿ ತಾವು ಕೆಲಸ ಮಾಡುತ್ತಿರುವ ಶಾಲೆಗೆ ಸಂದಬೇಕು ಎಂದರು.
ಕಾರ್ಯಕ್ರಮದಲ್ಲಿ ಸಪನಾ ಅನಿಗೋಳ ಅವರನ್ನು ಕೆಎಲ್ಇ ಡಿಪ್ಲೋಮಾ ವತಿಯಿಂದ ಹಾಗೂ ಎಸ್ಸಿಪಿ ಪ್ರೌಢಶಾಲೆ ವತಿಯಿಂದ ಸನ್ಮಾನಿಸಲಾಯಿತು.
ಪ್ರಾಚಾರ್ಯ ಎಸ್.ಐ.ಕುಂದಗೋಳ ಅಧ್ಯಕ್ಷತೆ ವಹಿಸಿದ್ದರು. ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪೌಢಶಾಲೆ ಪ್ರಾಂಶುಪಾಲ ಬಿ.ಎನ್.ಅರಕೇರಿ, ಅಂಜನಾ ಮಲಾಜ್, ನಿರ್ಮಲಾ ಫಕೀರಪುರ, ಸುಭಾಶ ಮುಶಿ, ಮಂಜುನಾಥ ಅರಕೇರಿ, ಈಶ್ವರ ಹೂಲಿ, ಮಹಾದೇವಿ ಅಂಬಿ, ಮಲ್ಲು ಗರಗದ ಇದ್ದರು. ಯು.ಡಿ.ಹಾದಿಮನಿ ಸ್ವಾಗತಿಸಿದರು. ಸವಿತಾ ಗೊಂದಿ ನಿರೂಪಿಸಿದರು. ಸುಭಾಸ್ ಮೂಶಿ ವಂದಿಸಿದರು.