ಭಾರತೀಯ ಸೇನೆಯ ಸೇವೆಯಲ್ಲಿದ್ದ ಸಂಕೇಶ್ವರದ ಯೋಧ ಅನಾರೋಗ್ಯದಿಂದ ಸಾವು : ನಾಳೆ ಅಥವಾ ನಾಡಿದ್ದು ಪಾರ್ಥಿವ ಆಗಮನ ಸಾಧ್ಯತೆ

ಭಾರತೀಯ ಸೇನೆಯ ಸೇವೆಯಲ್ಲಿದ್ದ ಸಂಕೇಶ್ವರದ ಯೋಧ ಅನಾರೋಗ್ಯದಿಂದ ಸಾವು : ನಾಳೆ ಅಥವಾ ನಾಡಿದ್ದು ಪಾರ್ಥಿವ ಆಗಮನ ಸಾಧ್ಯತೆ

ಬೆಳಗಾವಿ, ಡಿ, 11 : ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂಕೇಶ್ವರದ ಯೋಧ ಸದ್ದಾಮ್  ಜಮಾದಾರ ಅವರು ಸೇವೆಯಲ್ಲಿರುವಾಗ ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನ ಹೊಂದಿದ್ದಾರೆ. 

     ಸಂಕೇಶ್ವರ ನಗರದ ಬೀರೇಶ್ವರ ನಗರದ ನಿವಾಸಿಯಾಗಿದ್ದ ಸದ್ದಾಮ್ ಈತ ಭಾರತೀಯ ಸೇನೆಯ ಬಿಎಸ್ ಎಫ್ ನಲ್ಲಿ ಯೋಧನಾಗಿ ಕಳೆದ ಕೆಲವು ವರ್ಷಗಳ ಹಿಂದಷ್ಟೇ ಸೇರ್ಪಡೆಯಾಗಿದ್ದರು. 

     ಬಡತನದಿಂದ ಬತ್ತಿ ಹೋಗಿದ್ದ ಕುಟುಂಬ ನಿರ್ವಹಣೆ ಜೊತೆಗೆ ದೇಶದ ಸೇವೆಗೆ ಧಾವಿಸಿದ್ದ ಈತ ಕಷ್ಟದಲ್ಲಿದ್ದ ಕುಟುಂಬವನ್ನು ಮೇಲೆತ್ತುವ ಕನಸು ಕಂಡಿದ್ದನು. ಆದರೆ ವಿಧಿ ಆಟದ ಮುಂದೆ ಯಾವ ಆಟವು ನಡೆಯುವದಿಲ್ಲ ಎನ್ನುವ ಹಾಗೆ ಸದ್ದಾಮ್ ಇಂದು ವಿಧಿವಶವಾಗಿದ್ದಾರೆ. 

   ಭಾರತೀಯ ಸೇನೆಯ ಬಿಎಸ್ಎಫ್ ನ ಗುಜರಾತ್ ರಾಜ್ಯದ ಬುಜ್ ನಲ್ಲಿ ಜವಾನನಾಗಿ ಕಾರ್ಯ ನಿರ್ವಹಿಸುತ್ತಿದ್ದನು. ಆದರೆ ಇಂದು ಸೇವೆಯಲ್ಲಿ ಇರುವಾಗಲೇ ಅನಾರೋಗ್ಯದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದಾರೆ. ಮೃತ ಯೋಧ ಸದ್ದಾಂ ಈತನ ಪಾರ್ಥಿವ ಶರೀರವು ಸೋಮವಾರ ಅಥವಾ ಮಂಗಳವಾರ ಸಂಕೇಶ್ವರ ನಗರಕ್ಕೆ ಆಗಮಿಸಲಿದೆ ಎಂದು ತಿಳಿದು ಬಂದಿದೆ. 

    

ಸುದ್ದಿ ಓದಿ