150 ವರ್ಷ ಪೂರೈಸಿದ ಸಂಕೇಶ್ವರ ಮುಖ್ಯ ಅಂಚೆ ಕಚೇರಿ ಕಟ್ಟಡ : ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
ಬೆಳಗಾವಿ, ಆ, 5 : ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ನಾನುಡಿಯಂತೆ ಮದುವನಗಿತ್ತಿಯಂತೆ ಸಿಂಗಾರಗೊಂಡ ಸಂಕೇಶ್ವರದ ಮುಖ್ಯ ಅಂಚೆ ಕಚೇರಿ ಕಟ್ಟಡಕ್ಕೆ ಈಗ 150 ವರ್ಷಗಳ ಇತಿಹಾಸ. 1870ರಲ್ಲಿ ನಿರ್ಮಾಣಗೊಂಡಿರುವ ಈ ಚಂದದ ಕಲ್ಲಿನ ಕಟ್ಟಡ ಯಾವದೇ ಮಳೆಗೆ ಸೋರದೆ ತನ್ನ 150 ವಸಂತಗಳನ್ನು ಪೂರೈಸಿದೆ. ಅದಕ್ಕಾಗಿ ಸುಣ್ಣ, ಬಣ್ಣ, ದೀಪಾಲಂಕಾರದಿಂದ ಜಗಮಗಿಸುತ್ತಿದೆ.

ಹೌದು ಓದುಗರೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದ ಚನ್ನಮ್ಮ ವೃತದ ಬಳಿ ಹಾಗೂ ಹಳೆಯ ಪಿಬಿ ರಸ್ತೆಯ ಬಳಿ ಇರುವ ಮುಖ್ಯ ಅಂಚೆ ಕಚೇರಿಯ ಕಟ್ಟಡಕ್ಕೆ ಈಗ 150 ವರ್ಷಗಳು ಗತಿಸಿವೆ.

ಈ ಹಿನ್ನೆಲೆಯಲ್ಲಿ ಸಂಕೇಶ್ವರದ ಅಂಚೆ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡು ಕಟ್ಟಡಕ್ಕೆ ಹೊಸ ಮೆರಗು ನೀಡಿದ್ದಾರೆ. ಕತ್ತಲಲ್ಲಿ ಈಗ ಅಂಚೆ ಕಚೇರಿ ಗುರುತು ಹಿಡಿಯದಷ್ಟು ಶೃಗಾಂರ ಮಾಡಲಾಗಿದೆ. ಮುಖ್ಯ ಅಂಚೆ ಕಚೇರಿ ಕಟ್ಟಡ 150 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಒಂದು ಚಿಕ್ಕ ಕಾರ್ಯಕ್ರಮ ವನ್ನು ಶುಕ್ರವಾರ ಸಂಜೆ ಆಯೋಜಿಸಲಾಗಿದೆ ಎಂದು ಸಂಕೇಶ್ವರದ ಅಂಚೆ ಕಚೇರಿ ವ್ಯವಸ್ಥಾಪಕರಾದ ದಯಾನಂದ ಕಂಚಗಾರಟ್ಟಿ ತಿಳಿಸಿದ್ದಾರೆ.