ಸಂಕೇಶ್ವರ ಪೊಲೀಸರ ಕಾರ್ಯಾಚರಣೆ : ಮನೆ ಕಳ್ಳತನ‌ ಆರೋಪಿ ಬಂಧನ : 5.03 ಲಕ್ಷ ಚಿನ್ನಾಭರಣ, ಸಾಮಗ್ರಿ ವಶಕ್ಕೆ

ಸಂಕೇಶ್ವರ ಪೊಲೀಸರ ಕಾರ್ಯಾಚರಣೆ : ಮನೆ ಕಳ್ಳತನ‌ ಆರೋಪಿ ಬಂಧನ : 5.03 ಲಕ್ಷ ಚಿನ್ನಾಭರಣ, ಸಾಮಗ್ರಿ ವಶಕ್ಕೆ

ಬೆಳಗಾವಿ, ಡಿ, 6 : ಮನೆಗಳ್ಳತನ ಮಾಡುತ್ತಿದ್ದ ಖದೀಮನನ್ನು ಬಂಧಿಸಿರುವ ಸಂಕೇಶ್ವರದ ಪೊಲೀಸರು ಬಂಧಿತನಿಂದ ಚಿನ್ನಾಭರಣ ಸೇರಿದಂತೆ ಸುಮಾರು 5.03 ಲಕ್ಷ ರೂ. ಮೌಲ್ಯದ ಸಾಮಗ್ರಿ, ಹಾಗೂ ನಗದು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

    ಮಹಾದೇವ ಮಾರುತಿ ಮುನ್ನೋಳಿ (ಸಾ: ಗೋಕಾಕ) ಬಂಧಿತ ಖದೀಮನಾಗಿದ್ದಾನೆ.  ಸಂಕೇಶ್ವರ ಪೊಲೀಸ್ ಠಾಣೆ ಹದ್ದಿಯಲ್ಲಿ ವರದಿ ಆಗುತ್ತಿದ್ದ ಮನೆ ಕಳವು ಪ್ರಕರಣಗಳ ತಪಾಸಣೆ ಮಾಡುವ‌ ನಿಟ್ಟಿನಲ್ಲಿ ಗೋಕಾಕ  ಡಿಎಸ್ಪಿ ಮನೋಜ್ ಕುಮಾರ ನಾಯಿಕ ಅವರ ನೇತೃತ್ವದಲ್ಲಿ ಸಂಕೇಶ್ವರ ಸಿಪಿಐ ಪ್ರಹ್ಲಾದ ಚೆನ್ನಗೇರಿ, ಸಂಕೇಶ್ವರ ಪಿಎಸ್ ಐ ಶಿವರಾಜ್ ನಾಯಿಕವಾಡಿ ಅವರ ತಂಡವು, ಆರೋಪಿತರ ತಪಾಸಣೆ ಕಾರ್ಯ ಕೈಗೊಂಡಾಗ ದಿ : 06ರಂದು ಎಸ್ ಬಿ ನಾಯಿಕವಾಡಿ ಪಿ.ಎಸ್.ಐ ಮತ್ತು ಸಿಬ್ಬಂದಿಗಳು ಸಂಶಯುಕ್ತ ವ್ಯಕ್ತಿಗೆ ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ ಸಂಕೇಶ್ವರ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ- 97/2022, 275/2022, 278/2022, 280/2022 ಕಲಂ-454, 457 380 ಐಪಿಸಿ ಪ್ರಕರಣಗಳಲ್ಲಿ ಶಾಮಿಲಾಗಿರುವದು ತನಿಖೆ ವೇಳೆ ಪತ್ತೆಯಾಗಿದೆ.

      ಬಂಧಿತನಿಂದ ಬಂಗಾರದ ಸರ (30 ಗ್ರಾಂ) 1,50,000, ಬಂಗಾರದ ಬೆಸೆಲೇಟ ಒಂದು (15 ಗ್ರಾಂ) 75,000, ಬಂಗಾರದ ಉಂಗುರ ಒಂದು (05 ಗ್ರಾಂ) 25,000, ಬಂಗಾರದ ನಕ್ಸಸ ಒಂದು (35 ಗ್ರಾಮೀನದ್ದು) 1,75,000, ನಗದು ಹಣ 4500 ರೂಪಾಯಿಗಳು, ಹೊಂಡಾ ಸ್ಕೂಟರ್ ಕೆಎ22 9050, ತೋಮಸನ್ ಕಂಪನಿಯ ಟಿ.ವಿ ಒಂದು, ಟಾಟಾ ಪ್ಲೇ ಕಂಪನಿಯ ಸೇಟ ಅಪ್ ಬಾಕ್ಸ ಬಂಗಾರದ ಆಭರಣ, ವಸ್ತುಗಳನ್ನು ಈ ಪ್ರಕಾರ 4,25,000 ಕಿಮ್ಮತ್ತಿನ 85 ಗ್ರಾಂ ಬಂಗಾರದ ಆಭರಣ ಮತ್ತು 4500 ನಗದು ಹಣ, ಮತ್ತು 73.500 ಕಿಮ್ಮತ್ತಿನ ಕಳ್ಳತನವಾದ ವಸ್ತುಗಳನ್ನು ಹೀಗೆ ಒಟ್ಟು 5,03,000 ಕಿಮ್ಮತ್ತಿನ ವಸ್ತುಗಳನ್ನು ಆರೋಫಿತನ ಕಡೆಯಿಂದ ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

       ಇದರಿಂದ ಸಂಕೇಶ್ವರ ಪೊಲೀಸ್ ಠಾಣೆಯ 04 ರಾತ್ರಿ ಕನ್ನಾ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ. ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಬಿ.ಕೆ ನಾಗನೂರಿ, ಐ ಬಿ ಅಲಗರಾವತ, ಬಿ.ವಿ ಹುಲಕುಂದ, ಮೆಹಬೂಬ ದಾದಾಮಕ, ಬಿ.ಟಿ ಪಾಟೀಲ, ಎಮ್ .ಎಮ್ .ಜಂಬಗಿ, ಬಿ. ಎಸ್. ಕಪರಟ್ಟಿ, ಮಹೇಶ ಕರಗುಪ್ಪಿ, ಯಾಶೀನ ನದಾಫ್  ಇರನ್ನೊಳಗೊಂಡ ತಂಡದ ಕಾರ್ಯವನ್ನು ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಅವರು ಶ್ಲಾಘಿಸಿರುತ್ತಾರೆ.

ಸುದ್ದಿ ಓದಿ