ಸಂಕೇಶ್ವರದ ವಿವೇಕಾನಂದ ಆಸ್ಪತ್ರೆಯಲ್ಲಿ ಜು.1ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ಸಂಕೇಶ್ವರದ ವಿವೇಕಾನಂದ ಆಸ್ಪತ್ರೆಯಲ್ಲಿ  ಜು.1ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ಸಂಕೇಶ್ವರ ಜೂ, 30 : ನಗರದ ವಿವೇಕಾನಂದ ಆಸ್ಪತ್ರೆಯಲ್ಲಿ ಬರುವ ಇದೇ ಶುಕ್ರವಾರ ದಿ. ಜು. 1ರಂದು ರಾಷ್ಟ್ರೀಯ ವೈದ್ಯರದಿನಾಚರಣೆಯ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

     ದಿ. 1ರಂದು ನಡೆಯಲಿರುವ ಈ ಶಿಬಿರದಲ್ಲಿ ಮಧುಮೇಹ (Sugar) ತಪಾಸಣೆ, ರಕ್ತ ಒತ್ತಡ (BP) ತಪಾಸಣೆ, ಇ. ಸಿ. ಜಿ, 2 ಡಿ-ಇಕೋ, ಎಲುಬು ಸಾಂದ್ರತೆ ತಪಾಸಣೆ, ಶ್ವಾಸಕೋಶದ ಕಾರ್ಯ ಪರೀಕ್ಷೆ, ಥೈರಾಯ್‌ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

    ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ರಾಜೇಶ ನೇರ್ಲಿ ಹಾಗೂ ಶಿಬಿರದ ವಿಶೇಷ ತಜ್ಞರಾಗಿ ಡಾ. ದೀಪಕ ಬಾಳಿಕಾಯಿ, (ಚರ್ಮ ತಜ್ಞ ವೈದ್ಯ) ಡಾ. ಶಮಾ ಬೆಲ್ಲದ (ENT Surgeon), ಡಾ. ವಿವೇಕ ನಾಯಿಕವಾಡಿ (ಎಲುಬು ತಜ್ಞ) ಇವರು ಪರೀಕ್ಷೆ ನಡೆಸಲಿದ್ದಾರೆ.

   ಈ ತಪಾಸಣಾ ಶಿಬಿರವು ಶುಕ್ರವಾರ ದಿ. 1ರಂದು ಮುಂಜಾನೆ 9ರಿಂದ ಮಧ್ಯಾಹ್ನ 1 ವರೆಗೆ ಸಂಕೇಶ್ವರದ ಭೀಡೆ ಕಾಂಪ್ಲೆಕ್ಸ್ ಹಿಂಭಾಗದಲ್ಲಿ ರುವ ವಿವೇಕಾನಂದ ಆಸ್ಪತ್ರೆಯಲ್ಲಿ ನಡೆಯಲಿದೆ. ಅಲ್ಲದೆ ಈ ಶಿಬಿರದಲ್ಲಿ ನೂರಾರು ಉಚಿತ ಸಸಿಗಳನ್ನು ವಿತರಿಸಲಾಗುತ್ತದೆ. ಆಸಕ್ತರು ದೂರವಾಣಿ ಸಂಖ್ಯೆ 7259247893, 8762051908 ಇಲ್ಲಿ ಸಂಪರ್ಕಿಸುವಂತೆ ವಿವೇಕಾನಂದ ಆಸ್ಪತ್ರೆಯ ವೈದ್ಯರಾದ ಡಾ. ರಮೇಶ ದೊಡಭಂಗಿ ಅವರು ತಿಳಿಸಿದ್ದಾರೆ.

ಸುದ್ದಿ ಓದಿ