ಎಲಬುರ್ಗ

ಸಂಕನೂರು, ಹಿರೇಮ್ಯಾಗೇರಿ ಗ್ರಾಪಂ ಚುನಾವಣೆ; ಮತ ಎಣಿಕೆ

ಸಂಕನೂರು, ಹಿರೇಮ್ಯಾಗೇರಿ ಗ್ರಾಪಂ ಚುನಾವಣೆ; ಮತ ಎಣಿಕೆ

ಯಲಬುರ್ಗಾ 31: ತಾಲೂಕಿನ ಹಿರೇಮ್ಯಾಗೇರಿ ಮತ್ತು ಸಂಕನೂರು ಗ್ರಾಮ ಪಂಚಾಯತಿಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಸಂಕನೂರು ಗ್ರಾಪಂಗೆ ಒಟ್ಟು 11 ಸ್ಥಾನಗಳಿಗೆ ಮತ್ತು ಹಿರೇಮ್ಯಾಗೇರಿ ಗ್ರಾಪಂಗೆ ಒಟ್ಟು 13 ಸ್ಥಾನಗಳಿಗೆ ಕಳೆದ ಮಾ.29 ರಂದು ಇವು ಎರಡು ಗ್ರಾಪಂಗಳ ಚುನಾವಣೆಯ ಮತ ಎಣಿಕೆ ಕಾರ್ಯ ಪಟ್ಟಣದ ಕಂದಾಯ ಭವನದಲ್ಲಿ ಬೆಳಿಗ್ಗೆ ನಡೆಯಿತು. ಎರಡು ಗ್ರಾಪಂಗಳ ಒಟ್ಟು 24 ಜನ ಸದಸ್ಯರ ಫಲಿತಾಂಶವನ್ನು ಪ್ರಕಟಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಶ್ರೀಶೈಲ ತಳವಾರ, ಪೋಲೀಸ್ ಸಿಬ್ಬಂದಿ ವರ್ಗ ಮತ್ತಿತರರು ಭಾಗವಹಿಸಿದ್ದರು.

ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೇಸ್, ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಬೆಂಬಲಿಗರು ವಿಜಯೋತ್ಸವವನ್ನು ಆಚರಿಸಿದರು. ಇಲ್ಲಿಯ ಬ್ಲಾಕ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಬ್ಲಾಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕರಿಬಸಪ್ಪ ನಿಡಗುಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ ಅಭ್ಯರ್ಥಿಗಳನ್ನು ಸನ್ಮಾನಿಸಿದರು.

ಸುದ್ದಿ ಓದಿ