ಶಿವಸೇನೆಯ ಸಂಜಯ ರಾವುತ್ ಬೆದರಿಕೆ: ಬೆಳಗಾವಿ ಬರುತ್ತೆವಂತೆ ಮಹಾ ಸರಕಾರ: ನಮ್ಮಲ್ಲಿ ಬಂದೂಕುಗಳಿವೆ ಎಂದು ಪುಂಡಾಟ
ಬೆಳಗಾವಿ, ಮಾ, 13 : ಮಹಾರಾಷ್ಟ್ರ ಸರಕಾರ ತನ್ನ ಎಲ್ಲ ಶಕ್ತಿ ಮೀರಿ ಬೆಳಗಾವಿಗೆ ಆಗಮಿಸಲಿದೆ. ನಾನು ಕರ್ನಾಟಕಕ್ಕೆ, ಬೆಳಗಾವಿಗೆ ಹೋಗಲು ಪ್ರಯತ್ನಿಸುತ್ತೇನೆ ಆದರೆ ನನ್ನ ಅಲ್ಲಿ ತಡೆಯುತ್ತಾರೆ. ಬಡಿಗೆ ಬಂದುಕುಗಳಿಂದ ನಮ್ಮನ್ನು ಹೆದರಿಸುತ್ತಾರೆ. ನಮ್ಮ ಬಳಿಯು ಬಂದೂಕುಗಳಿಲ್ಲವೆ. ಇದರ ಕುರಿತು ರಾಜ್ಯ ಸರಕಾರ ಗಂಭಿರ ಚಿಂತನೆ ನಡೆಸದಿದ್ದರೆ ಮಹಾರಾಷ್ಟ್ರ ಸರಕಾರ ಬೆಳಗಾವಿಗೆ ಹೋಗಲಿದೆ ಎಂದು ಹೇಳುವ ಮೂಲಕ ರಾಜ್ಯ ಸರಕಾರಕ್ಕೆ ಮತ್ತು ಬೆಳಗಾವಿ ಜಿಲ್ಲಾಡಳಿತಕ್ಕೆ ಶಿವಸೇನಾ ಸಂಸದ ಸಂಜಯ ರಾವತ್ ಬೆದರಿಕೆಯನ್ನು ನೀಡುವ ಮೂಲಕ ಮತ್ತೆ ಮೊಂಡೊತನ ಮರೆದಿದ್ದಾರೆ.
ಮಹಾರಾಷ್ಟ್ರದ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಂಜಯ ರಾವತ್ ಅವರು, ಕೇಂದ್ರ ಸರಕಾವು ಇದಕ್ಕೆ ಜವ್ದಾರಿಯಾಗಿದೆ. ಇದಕ್ಕೆ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡಬೇಕಿದೆ. ಬೆಳಗಾವಿಯಲ್ಲಿ ಮರಾಠಿಗರ ಮೇಲೆ ಅನ್ಯಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರ ಕ್ರಮಕೈಗೊಳ್ಳದಿದ್ದರೆ ಮಹಾರಾಷ್ಟ್ರ ಸರಕಾರ ಬೆಳಗಾವಿಗೆ ಹೋಗಲಿದೆ ಎನ್ನುವ ಮೂಲಕ ಮತ್ತೆ ಭಾಷಾ ಕಿಡಿ ಹೊತ್ತಿಸಿದ್ದಾರೆ. ಸಾಂಗ್ಲೀ, ಕೊಲ್ಲಾಪೂರ ಜಿಲ್ಲೆಯಲ್ಲಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೆಳಗಾವಿಗೆ ಆಗಮಿಸಬೇಕಾಗುತ್ತದೆ. ಅಲ್ಲಿ ಏನೇದಾರು ಅನಾಹುತ ಸಂಭವಿಸಿದರೆ ಮತ್ತೆ ಪರಿಸ್ಥಿತಿ ಹದಗೇಡಲಿದೆ. ಇದಕ್ಕೆ ಮಹಾರಾಷ್ಟ್ರ ಸರಕಾರ ಅಥವಾ ಶಿವಸೇನೆ ಜವ್ದಾರಿ ಅಲ್ಲ ಎನ್ನುವ ವಿವಾದಾತ್ಮಕ ಹೇಳಿಕೆ ಸಂಜಯ ರಾವತ್ ನೀಡಿದ್ದಾರೆ.
ಬೆಳಗಾವಿಯ ನಮ್ಮ ಶಿವಸೇನಾ ಕಾರ್ಯಾಲಯದ ಮೇಲೆ ಕನ್ನಡ ಹೋರಾಟಗಾರರು ನುಗ್ಗಿ ದಾಂಧಲೆ ಮಾಡಿದ್ದಾರಂತೆ ಇದನ್ನು ಅಲ್ಲಿನ ಸರಕಾರ ಮತ್ತು ಜಿಲ್ಲಾಡಳಿತ ಕ್ರಮಕೈಗೊಳ್ಳದಿದ್ದರೆ ಈ ವಿವಾದ ಕೈ ಮೀರಿ ಹೋಗಲಿದೆ ಎನ್ನುವ ಗೊಡ್ಡು ಬೆದರಿಕೆಯನ್ನು ಸಂಜಯ ರಾವತ್ ಅವರು ನೀಡಿದ್ದಾರೆ. ಅಲ್ಲದೆ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ವಿರುದ್ದ ತಮ್ಮ ವಾಗ್ದಾಳಿ ನಡೆಸಿದ್ದಾರೆ.