ಬೆಳಗಾವಿ

‘ಸಮಾಧಾನ’ ಕೃತಿ ಅದ್ಭುತ: ಶಾನವಾಡ

‘ಸಮಾಧಾನ’ ಕೃತಿ ಅದ್ಭುತ: ಶಾನವಾಡ


ಬೆಳಗಾವಿ, 8: ತನ್ಮಯ ಚಿಂತನ ಚಾವಡಿ ವತಿಯಿಂದ ನಗರದ ರಾಮತೀರ್ಥನಗರದ ಶ್ರೀ ಮಹದೇವ ಕೆಂಪಿಗೌಡ್ರ ನಿವಾಸದಲ್ಲಿ ಹಿರಿಯ ಸಾಹಿತಿ ಸ.ರಾ. ಸುಳಕೂಡೆ ಅವರು ರಚಿಸಿರುವ ‘ಸಮಾಧಾನ’ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು.  

ತನ್ಮಯ ಚಿಂತನ ಚಾವಡಿ ಸಂಚಾಲಕ ಅಶೋಕ ಉಳ್ಳಾಗಡ್ಡಿ ಮಾತನಾಡಿ, ಕಳೆದ ಐದು ವರ್ಷಗಳಿಂದ ನಾಡು-ನುಡಿ ಹಾಗೂ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವುದಾಗಿ ತಿಳಿಸಿದರು.  

ಹಿರಿಯ ಸಾಹಿತಿ ಹಾಗೂ ವಿದ್ವಾಂಸ ಯು.ಎನ್‌. ಸಂಗನಾಳಮಠ ಅವರು ಕೃತಿ ಬಿಡುಗಡೆಗೊಳಿಸಿ, ಸುಳಕೂಡೆ ಅವರ ಸಾಹಿತ್ಯ ಸೇವೆ ಶ್ಲಾಘನೀಯವಾಗಿದೆ. ಅವರು ನಿರಂತರ ಅಧ್ಯಯನಶೀಲರಾಗಿದ್ದಾರೆ ಎಂದು ಹೇಳಿದರು.  

ಖ್ಯಾತ ಕಾದಂಬರಿಕಾರ ಹಾಗೂ ವಾಗ್ಮಿ ಪ್ರೊ. ಶ್ರೀಕಾಂತ ಶಾನವಾಡ ಅವರು ಕೃತಿ ಪರಿಚಯ ಮಾಡುತ್ತಾ, ‘ಸಮಾಧಾನ’ ಕೃತಿಯು ಬದುಕಿನ ಕುರಿತು ಚಿಂತನೆಗೆ ಹಚ್ಚುವ ವಿಚಾರಗಳನ್ನು ಒಳಗೊಂಡಿದೆ. ಕೃತಿಯಲ್ಲಿರುವ 25 ಲೇಖನಗಳು ಉತ್ತಮ ಬದುಕಿಗೆ ದಾರೀದೀಪವಾಗಿವೆ. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ದೂರವಾಗುತ್ತಿರುವ ಯುವ ಪೀಳಿಗೆಗೆ ಈ ಕೃತಿ ಮಾರ್ಗದರ್ಶನ ನೀಡಬಲ್ಲದು ಎಂದು ಹೇಳಿದರು.  


ಸುದ್ದಿ ಓದಿ