ಸಾಲೋಟಗಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಅವಿರೋಧ ಆಯ್ಕೆ
ಇಂಡಿ 09: ತಾಲೂಕಿನ ಸಾಲೋಟಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸುನಂದಾ ಕಲ್ಲಯ್ಯಾ ಹಿರೇಪಟ್ಟ, ಉಪಾಧ್ಯಕ್ಷರಾಗಿ ಶಿವಾನಂದ ಈರಣ್ಣ ನಂದಾಗೋಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಾಜಕುಮಾರ ತೊರವಿ ಘೋಷಿಸಿದರು.
ಸೋಮವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷು-ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಘೋಷಿಸಲಾಯಿತು.
ಅಭಿಮಾನಿಗಳು ಗುಲಾಲ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಮಾಜಿ ಜಿ.ಪಂ ಅಧ್ಯಕ್ಷ ಶಿವಯೋಗೇಪ್ಪ ನೇದಲಗಿ, ಭೀಮರಾಯಗೌಡ ಪಾಟೀಲ, ರಾಜುಗೌಡ ಪಾಟೀಲ, ಶಿವಯೋಗೇಪ್ಪ ಚನಗೊಂಡ, ಶರಣಪ್ಪ ಕೆರೂರ, ಸಿದ್ದು ಶಿವೂರ, ಪುಂಡಲಿಕ ಕೇರೂರ, ಕಲ್ಲಪ್ಪ ಮರಡಿ, ಕಂಟೇಪ್ಪ ಚಾಂದಕವಟೆ,ಸೋಮನಾಥ ಅಕ್ಕಲಕೋಟ, ಶ್ಯಾಮಾರಾಯ ಬಗಲಿ, ಸಿದ್ದರಾಯ ಅಳಗುಂಡಗಿ, ಸೈಪನಮಲೀಕ ಹೊಸೂರ, ಶಿವಯೋಗಯ್ಯಾ ರೂಗಿಮಠ , ಧರ್ಮುಸಾಹುಕಾರ ಚಾಂಧವಟೆ, ಧರ್ಮು ಸಾಲೋಟಗಿ, ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಲಾಲಸಾಬ ನಧಾಫ್, ಕಾರ್ಯದರ್ಶಿ ಬಂಡೇಪ್ಪ ತೇಲಿ, ಚುನಾವಣಾಧಿಕಾರಿ ರಾಜಕುಮಾರ ತೊರವಿ ನೂತನ ಗ್ರಾ. ಪಂ ಸದಸ್ಯರು ಸೇರಿದಂತೆ ಗ್ರಾಮದ ಹಿರಿಯ ಪಾಲ್ಗೊಂಡಿದ್ದರು.