ವಿಕಲಚೇತನರಿಗೆ ಮೀಸಲಿಡಲು ಸಕರ್ಾರ ಬದ್ಧ: ಸಚಿವೆ ಶಶಿಕಲಾ
ಲೋಕದರ್ಶನ ವರದಿ
ಚಿಕ್ಕೋಡಿ ಜುಲೈ 18: ರಾಜ್ಯದ ವಿಕಲಚೇತನರ ಸವಾರ್ಂಂಗೀಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಶೇ 5ರಷ್ಟ್ರು ಅನುದಾನ ವಿಕಲಚೇತನರಿಗೆ ಮೀಸಲಿಡಲು ಸಕರ್ಾರ ಬದ್ಧವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಶನಿವಾರ ಚಿಕ್ಕೋಡಿ ತಾಲೂಕಿನ ಯಕ್ಸಂಬಾದಲ್ಲಿ ತಮ್ಮ ಕಚೇರಿಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ವಿಲಕಚೇತನರ ಹಕ್ಕುಗಳ ಅಧಿನಿಯಮ-2016ರ ರಾಜ್ಯ ಸಲಹಾ ಸಮಿತಿ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ರಾಜ್ಯದ ವಿಲಕಚೇತನರ ಸವರ್ಾಂಗೀಣ ಅಭಿವೃದ್ಧಿ ಮಾಡುವುದೇ ನಮ್ಮ ಧ್ಯೇಯವಾಗಿದ್ದು, ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ವಿಲಕಚೇತನರಿಗೆ ವಿಶಿಷ್ಟ ಗುರುತಿನ ಚೀಟಿ ನೀಡುವುದು, ಶೇ 5ರಷ್ಟ್ರು ಅನುದಾನ ಮೀಸಲಿಟ್ಟು ಅವರಿಗೆ ಕೌಶಲ್ಯ ತರಬೇತಿ, ಐಟಿಐ ಮತ್ತು ಡಿಪ್ಲೋಮಾ ಕೋರ್ಸನಲ್ಲಿ ವಿಶೇಷ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದು ವಿಡಿಯೋ ಕಾನ್ಪರೇನ್ಸ್ನಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಸಕರ್ಾರದ ಅಪರ ಮುಖ್ಯ ಕಾರ್ಯದಶರ್ಿ, ಇಲಾಖೆ ನಿದರ್ೇಶಕರು,ಅಧಿನಿಯಮ ರಾಜ್ಯ ಆಯುಕ್ತರು ಮತ್ತು ರಾಜ್ಯ ಸಲಹಾ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.