ಅಂತರರಾಷ್ಟ್ರೀಯ

ಲಂಡನ್ ನಲ್ಲಿ ಶಾರೂಖ್-ಕಾಜೋಲ್ ಪ್ರತಿಮೆ

ಲಂಡನ್ ನಲ್ಲಿ ಶಾರೂಖ್-ಕಾಜೋಲ್ ಪ್ರತಿಮೆ

ನವದೆಹಲಿ, ಅ.20 ಬಾಲಿವುಡ್‌ನ ಕಿಂಗ್ ಖಾನ್ ಶಾರುಖ್ ಖಾನ್ ಮತ್ತು ನಟಿ ಕಾಜೋಲ್ ಅವರು ನಟಿಸಿರುವ 'ದಿಲ್ವಾಲೆ ದುಲ್ಹಾನಿಯಾ ಲೆ ಜಯಂಗೆ' (ಡಿಡಿಎಲ್‌ಜೆ) ಬ್ಲಾಕ್ಬಸ್ಟರ್ ಚಿತ್ರ 25 ವರ್ಷಗಳ ಪೂರ್ಣಗೊಳಿಸಿ ಇತಿಹಾಸ ಬರೆದಿದೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಶಾರುಖ್-ಕಾಜೋಲ್ ಅವರ ಪ್ರತಿಮೆಯನ್ನು ಲಂಡನ್‌ನಲ್ಲಿ ಸ್ಥಾಪಿಸಲಾಗುವುದು.

ಆದಿತ್ಯ ಚೋಪ್ರಾ ನಿರ್ದೇಶನದ ಈ ಚಿತ್ರ (ಡಿಡಿಎಲ್‌ಜಿ) ಯಶ್ ರಾಜ್ ಫಿಲ್ಸ್‌ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿತ್ತು. ಪ್ರಣಯ ಮತ್ತು ಸಂಬಂಧಗಳ ಮಹತ್ವವನ್ನು ಈ ಚಿತ್ರ ಸಾರಿತ್ತು. ಇದು ಅಕ್ಟೋಬರ್ 20, 1995 ರಂದು ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಶಾರುಖ್ ಖಾನ್ ರಾಜ್ ಮತ್ತು ಕಾಜೋಲ್ ಸಿಮ್ರಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು 25 ವರ್ಷಗಳ ಅಭಿನಯವನ್ನು ಪೂರ್ಣಗೊಳಿಸಿದೆ. 2021 ರಲ್ಲಿ ಶಾರುಖ್ ಖಾನ್ ಮತ್ತು ಕಾಜೋಲ್ ಅವರ ಕಂಚಿನ ಪ್ರತಿಮೆಯನ್ನು ಲಂಡನ್‌ನ ಲೀಸೆಸ್ಟರ್ ಚೌಕ್‌ನಲ್ಲಿ ಅನಾವರಣಗೊಳಿಸಲಾಗುವುದು.ಈ ಪ್ರತಿಮೆಯನ್ನು ಲೀಸೆಸ್ಟರ್ ಚೌಕ್‌ನಲ್ಲಿರುವ ಓಡಿಯನ್ ಸಿನೆಮಾದ ಹೊರಗೆ ಸ್ಥಾಪಿಸಲಾಗುವುದು ಎಂದು ಯಶ್ ರಾಜ್ ಫಿಲ್ಮ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಪ್ರತಿಮೆಯನ್ನು ಮುಂದಿನ ವರ್ಷ ಅನಾವರಣ ಮಾಡಲಾಗುವುದು. ಈ ಸಂದರ್ಭದಲ್ಲಿ ಕಾಜೋಲ್ ಮತ್ತು ಶಾರುಖ್ ಖಾನ್ ಉಪಸ್ಥಿತರಿರುತ್ತಾರೆ ಎಂದು ಸಂಘಟಕರು ಭಾವಿಸಿದ್ದಾರೆ.

  


ಸುದ್ದಿ ಓದಿ