ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಗುರು ವಂದನೆ ಹಾಗೂ ಸ್ನೇಹ ಸಮ್ಮೇಳನ; ಮನುಷ್ಯರ ಭಾವನೆಯೇ ದೇವರ ನೆಲೆ : ಡಾ. ಯಲ್ಲಪ್ಪ ಹಿಮ್ಮಡಿ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಗುರು ವಂದನೆ ಹಾಗೂ ಸ್ನೇಹ ಸಮ್ಮೇಳನ; ಮನುಷ್ಯರ ಭಾವನೆಯೇ ದೇವರ ನೆಲೆ : ಡಾ. ಯಲ್ಲಪ್ಪ ಹಿಮ್ಮಡಿ
SSLC students hold Guru Vandana and Friendship Conference; Human feelings are the abode of God: Dr.

ಚಿಂಚಲಿ 30 : ದೇವರ ಸ್ಥಳ ಆಕಾಶವಲ್ಲ, ಗುಡಿಯೂ ಅಲ್ಲ, ಮನುಷ್ಯರ ಭಾವನೆಯೇ ಅದರ ನೆಲೆ ಎಂದು ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಯಲ್ಲಪ್ಪ ಹಿಮ್ಮಡಿ ಹೇಳಿದರು. ಅವರಿಂದು ಚಿಂಚಲಿ ಪಟ್ಟಣದ ಮಾಲಿನಿ ಪಾಟೀಲ ಭವನದಲ್ಲಿ ಮಹಾಕಾಳಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 1992-93ನೇ ಸಾಲಿನ ವಿದ್ಯಾರ್ಥಿ ಬಳಗ ತಮ್ಮ ಶಿಕ್ಷಕ ವರ್ಗದವರಿಗೆ ಹಮ್ಮಿಕೊಂಡಿದ್ದ "ಗುರುವಂದನೆ ಹಾಗೂ ಸ್ನೇಹ ಸಮ್ಮೇಳನ ಸಮಾರಂಭ"ವನ್ನು ಉದ್ಘಾಟಿಸಿ ಮಾತನಾಡಿದರು.  ಬಸವಣ್ಣ ದೇವರನ್ನು ದೇಹದಲ್ಲಿ ಕಂಡರೆ, ಅಂಬೇಡ್ಕರ್ ಅವರು ವಿದ್ಯೆಯಲ್ಲಿ ಕಂಡರು.

ವರನಟ ರಾಜಕುಮಾರ್ ಅವರು ಅಭಿಮಾನಿಗಳಲ್ಲಿ ಕಂಡರೆ, ವಿದ್ಯಾರ್ಥಿಗಳಾದ ತಾವು ಅಕ್ಷರ ಕಲಿಸಿದ ಗುರುಗಳಲ್ಲಿ ದೇವರನ್ನು ಕಾಣುತ್ತಿರುವುದು ವೈಚಾರಿಕ ನೋಟದ ವಿಸ್ತಾರಣೆಯಾಗಿದೆ ಎಂದು ಗುರುವಂದನೆಯ ಆಶಯವನ್ನು ವಿಶ್ಲೇಷಿಸಿದರು.   ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಸ್ಥಳೀಯ ಮಲ್ಲಿಕಾರ್ಜುನ ಗುರುದೇವ ಆಶ್ರಮದ ಶ್ರೀ ಸಿದ್ಧಪ್ರಸಾದ ಮಹಾಸ್ವಾಮಿಗಳು  ಪ್ರತಿಯೊಬ್ಬರ ಬದುಕಿನಲ್ಲಿ ತಂದೆ ತಾಯಿಗಳ ನಂತರ ಬದುಕು ರೂಪಿಸುವವರು ವಿದ್ಯೆ ಕಲಿಸುವ ಗುರುಗಳು. ಮೂವತ್ತು ವರ್ಷಗಳ ನಂತರವೂ ಅವರನ್ನು ನೆನಪಿಟ್ಟು ಗೌರವಿಸುವ ನಿಮ್ಮ ಆದರ್ಶದ ಹಿಂದೆ ಅವರು ಕಲಿಸಿದ ಸಂಸ್ಕಾರದ ದಟ್ಟ ಜ್ಞಾನವಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಸನ್ಮಾನಿತರಾದ ಎಸ್‌. ಬಿ. ಈರಗಾರ, ಎಮ್‌. ಎಚ್‌. ಪಾಟೀಲ, ಡಿ. ಎನ್‌. ಪಾಟೀಲ, ಧನ್ಯಕುಮಾರ ಕಾಂಬಳೆ ಕೃತಜ್ಞತಾ ನುಡಿಗಳನ್ನಾಡಿದರು.  ಶಿಕ್ಷಕರಾದ ಎಸ್‌. ಎ. ಲಕ್ಷ್ಮೇಶ್ವರ ಪ್ರಾಸ್ತಾವಿಕ ನುಡಿಗಳನ್ನಾಡಿದರು.  

ಚಂದ್ರಕಾಂತ ಪಟ್ಟೇಕರಿ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕರಾದ ಮಚ್ಛೇಂದ್ರ ಶಿಂದೆ, ಮಹಿಬೂಬ ತರಡೆ, ಧರೆಪ್ಪಾ ಖಿಲಾರೆ, ಆರತಿ ಇನಾಮದಾರ, ನಿರ್ಮಲಾ ರೆಂಟೆ ಸನ್ಮಾನ ನೆರವೇರಿಸಿದರು. ಮಲ್ಲಪ್ಪ ಕಸರಡ್ಡಿ, ಶಿವಾನಂದ ಕಲ್ಲಟ್ಟಿ,  ದೌಲತರಾವ ಪಾಟೀಲ, ಖಲೀಲ ಮುಲ್ಲಾ, ಅಶೋಕ ಹೊನಮಾನೆ, ಬಸನಗೌಡಾ ಪಾಟೀಲ, ಅನಿಲ ಉಪಾಧ್ಯೆ, ನಾರಾಯಣ ಮಾಂಗ, ಸಂಜು ಚೌಗುಲೆ, ನಿವೃತ್ತಿ ಖೋತ, ವೀರೇಂದ್ರ ಹಿಡಕಲ್, ಗಂಗೂತಾಯಿ ಪೂಜೇರಿ, ಅಖೀಲಾ ಸಗರೆ, ರಂಜನಾ ಜಾಧವ, ವಿನೋದ ಪಾಟೀಲ, ದತ್ತಾತ್ರೇಯ ಕರಾಡಕರ, ರಾಜು ವಡ್ಡರ ಇತರರು ಉಪಸ್ಥಿತರಿದ್ದರು. ಆರಂಭದಲ್ಲಿ ಜಿತೇಂದ್ರ ಕಾಂಬಳೆ, ಕೀರ್ತಿ ಪಟ್ಟೇಕರಿ ಮತ್ತು ಸಂಗಡಿಗರು ಪ್ರಾರ್ಥನೆ ಗೀತೆ ಪ್ರಸ್ತುತ ಪಡಿಸಿದರೆ ಪುಟ್ಟಕ್ಕ ಜಲಾಲಪುರೆ ಮತ್ತು ಸಂಗಡಿಗರು ಸ್ವಾಗತ ಗೀತೆ ಹಾಡಿದರು. ವಶಾಲಿ ಪಾಟೀಲ ಸ್ವಾಗತಿಸಿದರು, ಬಸವಂತ ಕವಳೆ ವಂದಿಸಿದರು. ಶ್ರೀಮತಿ ರೇಖಾ ಅಲಗೂರೆ ನಿರೂಪಿಸಿದರು. 


ಸುದ್ದಿ ಓದಿ