ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಮಾನಸಿಕ ಧೈರ್ಯ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಮಾನಸಿಕ ಧೈರ್ಯ

ಲೋಕದರ್ಶನ ವರದಿ

ಯಲಬುರ್ಗಾ 20: ಕೊರೊನಾ ಭೀತಿಯ ನಡುವೆ ಹೊಸ ಮಾದರಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯುತ್ತಿದೆ, ತಾಲೂಕಿನ 21 ಪರೀಕ್ಷಾ ಕೇಂದ್ರಗಳಲ್ಲಿ ಇಂದು ಒಟ್ಟು 4704 ವಿದ್ಯಾರ್ಥಿಗಳ ಪೈಕಿ 12 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು ಅದರಲ್ಲಿ 4692 ವಿದ್ಯಾರ್ಥಿಗಳು  ಪರೀಕ್ಷೆ ಬರೆಯಲಿದ್ದಾರೆ. ತಾಲೂಕಿನಲ್ಲಿ  ಒಟ್ಟು 21 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಸಾಮಾಜಿಕ ಅಂತರದಲ್ಲಿ ಪರೀಕ್ಷೆ ಬರೆಯುವ ಉದ್ದೇಶದಿಂದ ಕೊಠಡಿಯಲ್ಲಿ ವಿದ್ಯಾರ್ಥಿಗಳು ಸಂಖ್ಯೆ ಕಡಿಮೆ ಮಾಡಲಾಗಿದೆ. 

ಪರೀಕ್ಷಾ ಕೊಠಡಿಗೆ ಹೋಗುವ ಮುನ್ನ ಸ್ಯಾನಿಟೈಸರ್, ಮಾಸ್ಕ್ , ಥರ್ಮಲ್ ಸ್ಕಾನರ್ ಕಡ್ಡಾಯಗೊಳಿಸಿದ್ದಾರೆ, ಬಹುತೇಕ ಮಕ್ಕಳು ಮಾಸ್ಕ್ ಹಾಕಿಕೊಂಡಿದ್ದು ಕಡಿಮೆ, ಇನ್ನೂ ತಮ್ಮ ಕೊಠಡಿ ಸಂಖ್ಯೆ ಎಲ್ಲಿದೆ ಎಂದು ಹುಡುಕಲು ಸಾಮಾಜಿಕ ಅಂತರವನ್ನು ಮರೆತಿದ್ದರು. ಶಿಕ್ಷಕರು ಮಕ್ಕಳಲ್ಲಿ ಸಾಮಾಜಿಕ ಅಂತರದ ಜಾಗೃತಿ ಮೂಡಿಸಲು ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.

ಹೊಸ ಮಾದರಿಯ ಪರೀಕ್ಷೆ ಬರೆಯಲು ಮುಂಜಾನೆಯ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಬಂದಿದ್ದು, ಪರೀಕ್ಷೆ ಭಯ ನಿವಾರಣೆಗಾಗಿ ಅಲ್ಲಲ್ಲಿ ಶಿಕ್ಷಕರು ಅವರಿಗೆ ಮಾನಸಿಕ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ, ತಾಲೂಕಿನ ವಿವಿಧ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಬರುವವ ವಿದ್ಯಾರ್ಥಿಗಳನ್ನು ಭವ್ಯವಾಗಿ ಸ್ವಾಗತಿಸಲಾಯಿತು.

ವಿದ್ಯಾರ್ಥಿಗಳಿಗೆ ಕೆಲವು ಕಡೆ ತೆಂಗಿನಗರಿ, ಮಾವಿನ ತೋರಣಗಳಿಂದ, ಬಣ್ಣ ಬಣ್ಣ ರಂಗೋಲಿಗಳಿಂದ ಸಿಂಗಾರಗೊಂಡಿವೆ ಹಾಗೂ ಕೆಲವು ಪರೀಕ್ಷ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ಅವರ ಹಣೆಗೆ ತಿಲಕವಿಟ್ಟು ಸ್ವಾಗತಿಸಿದರು, ಇದೇ ವೇಳೆ ಅವರಲ್ಲಿ ಆತ್ಮಸ್ಥೈರ್ಯ ತುಂಬಿದವರು, ಪರೀಕ್ಷೆಗಾಗಿ ಬಂದವರಿಗೆ ಶಿಕ್ಷಕರು ಸ್ವಾಗತ ವಿಶೇμÀವಾಗಿತ್ತು.

ಸುದ್ದಿ ಓದಿ