ಎಸ್ಎಸ್ಎಲ್ಸಿ: ವರ್ಷಾ ಶಿವಪ್ಪ ಕುಲಕರ್ಣಿಗೆೆ ಎರಡನೇ ಸ್ಥಾನ
ಯಲಬುರ್ಗಾ 21: ಪಟ್ಟಣದ ನಿವಾಸಿ ವರ್ಷಾ ಶಿವಪ್ಪ ಕುಲಕರ್ಣಿ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕುಕನೂರಿನ ಎಸ್.ಎಫ್.ಎಸ್. ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಈ ವಿದ್ಯಾರ್ಥಿನಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ಅಂಕಗಳಿಗೆ 617 ಅಂಕಗಳನ್ನು ಪಡೆಯುವ ಮೂಲಕ 98.72ಅ ಪಡೆಯುವ ಮೂಲಕ ಸಾಧನೆ ಮಾಡಿದ್ದಾಳೆ.
ಹರ್ಷ: ವರ್ಷಾ ಶಿವಪ್ಪ ಕುಲಕರ್ಣಿ ವಿದ್ಯಾರ್ಥಿನಿಯು ತನ್ನ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಿ ಪಟ್ಟಣದ ಕೀರ್ತಿ ತಂದಿದ್ದು, ಈ ವಿದ್ಯಾರ್ಥಿನಿಯ ಸಾಧನೆಗೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಿ.ಹೆಚ್. ಪಾಟೀಲ್ ಹಿರಿಯ ಮುಖಂಡ ವೀರ್ಪ ಶರಬಪ್ಪ ಉಳ್ಳಾಗಡ್ಡಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶಕುಂತಲಾದೇವಿ ಮಾಲಿ ಪಾಟೀಲ್ ಮಾಜಿ ಕ.ಸಾ.ಪ ಜಿಲ್ಲಾ ಅಧ್ಯಕ್ಷ ರವಿತೇಜ ಅಬ್ಬಿಗೇರಿ ಯುವ ಮುಖಂಡ ಬಸವರಾಜ ಉಳ್ಳಾಗಡ್ಡಿ ಕರಮುಡಿ ಗುತ್ತಿಗೆದಾರ ಶರಣೇಶ ವಿ. ಉಳ್ಳಾಗಡ್ಡಿ ಕನ್ನಡಪರ ಹೋರಾಟಗಾರ ಸ. ಶರಣಪ್ಪ ಪಾಟೀಲ್ ಕರಮುಡಿ ನ್ಯಾಯವಾದಿ ಇಂದಿರಾ ಉಳ್ಳಾಗಡ್ಡಿ ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ. ಸಾಹಿತಿ ವೀರಣ್ಣ ವಾಲಿ ಇನ್ನಿತರರು ಹರ್ಷ ವ್ಯಕ್ತಪಡಿಸಿ ಮುಂಬರುವ ದಿನಮಾನಗಳಲ್ಲಿ ಹರ್ಷಾ ಶಿವಪ್ಪ ಕುಲಕರ್ಣಿ ತನ್ನ ಜೀವಮಾನದಲ್ಲಿ ಇನ್ನೂ ಹೆಚ್ಚು ಸಾಧನೆ ಮಾಡಲೆಂದು ಹಾರೈಸಿದ್ದಾರೆ.