ಅಂತರರಾಷ್ಟ್ರೀಯ

ಮಕ್ಕಾ ಮಸೀದಿಯಲ್ಲಿ ಪ್ರಾರ್ಥನೆಗಳಿಗೆ ಸೌದಿ ಅರೇಬಿಯಾ ಅನುಮತಿ !

ಮಕ್ಕಾ ಮಸೀದಿಯಲ್ಲಿ ಪ್ರಾರ್ಥನೆಗಳಿಗೆ ಸೌದಿ ಅರೇಬಿಯಾ ಅನುಮತಿ !

ರಿಯಾದ್, ಅ 19 : ಸೌದಿ ಅರೇಬಿಯಾ ಸರ್ಕಾರ ಭಾನುವಾರದಿಂದ  ದೇಶದ ನಾಗರೀಕರು,  ನಿವಾಸಿಗಳಿಗೆ  ಮಕ್ಕಾ ಮಸೀದಿಯಲ್ಲಿ (ಅಲ್ ಹರಾಮ್ ಮಸೀದಿ) ಪ್ರಾರ್ಥನೆ ಕೈಗೊಳ್ಳಲು ಅನುಮತಿ ನೀಡಿದೆ. ಕೊರೊನಾ ಸಾಂಕ್ರಾಮಿಕ  ಹಿನ್ನಲೆಯಲ್ಲಿ ಉಮ್ರಾ ಯಾತ್ರೆಯೊಂದಿಗೆ ಪ್ರಾರ್ಥನೆಗಳನ್ನು ಸ್ಥಗಿತಗೊಳಿಸಿದ್ದ ಸೌದಿ ಅರೇಬಿಯಾ  ಆಡಳಿತ  ಏಳು ತಿಂಗಳ  ಬಿಡುವಿನ ನಂತರ ಮತ್ತೆ ಇವುಗಳಿಗೆ  ಅವಕಾಶ ಕಲ್ಪಿಸಿದೆ.

ಇನ್ನೂ ಮುಂದೆ ದಿನಕ್ಕೆ  40 ಸಾವಿರ ಮಂದಿ ಪ್ರಾರ್ಥನೆ ನಡೆಸಲು,  15 ಸಾವಿರ ಉಮ್ರಾ ಯಾತ್ರಾರ್ಥಿಗಳು ಮೆಕ್ಕಾ ಮಸೀದಿಗೆ ಅನುಮತಿ ನೀಡಲಾಗುವುದು ಎಂದು ಸೌದಿ ಅಧಿಕಾರಿಗಳು ತಿಳಿಸಿದ್ದಾರೆ. 

ಈ ತಿಂಗಳ ಆರಂಭದಿಂದಲೇ ಸೌದಿ ತನ್ನ ನಾಗರೀಕರು, ನಿವಾಸಿಗಳಿಗೆ ಪವಿತ್ರ ಸ್ಥಳಗಳಾದ  ಮೆಕ್ಕಾ,ಮದೀನಾದಲ್ಲಿ ಉಮ್ರಾ ತೀರ್ಥಯಾತ್ರೆಗಳಿಗೆ ಅನುಮತಿ ನೀಡಿತ್ತು. ಆದರೆ, ಇತರ ದೇಶಗಳಿಗೆ ಸೇರಿದ ಮುಸ್ಲಿಮರಿಗೆ ನವಂಬರ್ 1ರಿಂದ ಉಮ್ರಾ ಯಾತ್ರೆಗೆ ಸೌದಿ ಅರೆಬಿಯಾ ಸರ್ಕಾರ ಅನುಮತಿ  ನೀಡಿದೆ.


ಸುದ್ದಿ ಓದಿ