ಗ್ರಾಮೀಣ ಕ್ರೀಡೆಗಳಲ್ಲಿ ತೆರಬಂಡಿ ಸ್ಪರ್ಧೆ ರೋಮಾಂಚನಕಾರಿ ಕ್ರೀಡೆ: ಬೆಳಗಲಿ
ಮಹಾಲಿಂಗಪುರ 04: ಗ್ರಾಮೀಣ ಕ್ರೀಡೆಗಳಲ್ಲಿ ತೆರಬಂಡಿ ಸ್ಪರ್ಧೆ ರೋಮಾಂಚನಕಾರಿ ಕ್ರೀಡೆ. ಇಲ್ಲಿ ಶಕ್ತಿಶಾಲಿ ಎತ್ತುಗಳೇ ಪಂದ್ಯಾವಳಿಯ ಕೇಂದ್ರಬಿಂದು ಎಂದು ನಗರದ ಖ್ಯಾತ ವೈದ್ಯ ಹಾಗೂ ಹಿರಿಯ ಕಾಂಗ್ರೆಸ್ ಧುರೀಣ ಡಾ.ಎ.ಆರ್.ಬೆಳಗಲಿ ಹೇಳಿದರು.
ಬುಧವಾರ ಪಟ್ಟಣದ ಬುದ್ನಿ ಪಿಡಿ ವ್ಯಾಪ್ತಿಯ ಜಮೀನೊಂದರಲ್ಲಿ ಶ್ರೀ ಬಸವೇಶ್ವರ ಜಾತ್ರಾ ಕಮಿಟಿ ಮತ್ತು ಪುರಸಭೆಯ ಸಹಯೋಗದಲ್ಲಿ ತೆರೆಬಂಡಿ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಇನ್ನೋರ್ವ ಅತಿಥಿ ಕಾಂಗ್ರೆಸ್ ಧುರೀಣರಾದ ಸಿದ್ದು ಕೊನ್ನೂರು ಮಾತನಾಡಿ, ಈ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಎತ್ತುಗಳಿಗೆ ಆಕರ್ಷಕ ಬಹುಮಾನಗಳನ್ನು ಆಯೋಜಕರು ಏರಿ್ಡಸಿದ್ದಾರೆ. ತಾವು (ಎತ್ತುಗಳ ಮಾಲೀಕರು) ಹಣ ಹಾಗೂ ಸ್ಥಾನಕ್ಕಾಗಿ ಸ್ಪರ್ಧಿಸದೆ ಒಳ್ಳೆಯ ಕ್ರೀಡಾ ಸ್ಪೂರ್ತಿ ಮೆರೆಯಲು ಹಾಗೂ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸಲು ಭಾಗವಹಿಸಿ ಎಂದರು.
ಸ್ಪರ್ಧೆಯ ಆಯೋಜಕರಾದ ಯಲ್ಲನಗೌಡ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಧುನಿಕ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆಗಳು ಕ್ಷೀಣಿಸುತ್ತಿವೆ, ನಮ್ಮ ಪ್ರಾಚೀನ ಸಂಸ್ಕೃತಿ ಉಳಿಯಬೇಕಾದರೆ ತೆರುಬಂಡೆಯಂತಹ ಕ್ರೀಡೆಗಳಿಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ರವಿಗೌಡ ಪಾಟೀಲ, ಸುನಿಲಗೌಡ ಪಾಟೀಲ, ನಿಂಗಪ್ಪ ಬಾಳಿಕಾಯಿ, ವಿಜುಗೌಡ ಪಾಟೀಲ, ಕೃಷ್ಣಗೌಡ ಪಾಟೀಲ, ಮಹಾಲಿಂಗಪ್ಪ ತಟ್ಟಿಮನಿ, ಹನುಮಂತ ಬ್ಯಾಕೋಡ, ವಿಠ್ಠಲ ಕುಳಲಿ, ಅನಿಲ ದೇಸಾಯಿ, ಬಸವರಾಜ ಗಂಟಿಚೌಡಿ, ಮಹಾಲಿಂಗಪ್ಪ ಜಿಟ್ಟಿ, ಗಂಗಯ್ಯ ಮಠಪತಿ, ಸಂಜು ಜಮಖಂಡಿ, ಮಹಾಲಿಂಗ ಪಾಟೀಲ, ಅಶೋಕ ತಳವಾರ, ನಾರಾಯಣ ಪಾಟೀಲ, ಶ್ರೀನಿವಾಸ ಮಾಲಬಸರಿ, ವಿಠ್ಠಲ ಪಾಟೀಲ, ಶ್ರೀಶೈಲ ಕಳ್ಯಾಗೋಳ ಮುಂತಾದವರಿದ್ದರು.