ಮಹಲಿಂಗಪುರ

ರನ್ ಫಾರ್ ಯುನಿಟಿ ಕಾರ್ಯಕ್ರಮ

ರನ್ ಫಾರ್ ಯುನಿಟಿ ಕಾರ್ಯಕ್ರಮ

ಮಹಾಲಿಂಗಪುರ 31; ಸ್ಥಳೀಯ ಪೊಲೀಸ ಠಾಣೆ ಸಿಬ್ಬಂದಿ ಮತ್ತು ವಿವಿಧ ಸಂಘಟನೆಗಳ ಸದಸ್ಯರು ಸೇರಿ ಸರ್ದಾರ ವಲ್ಲಭಾಯಿ ಪಟೇಲ ಅವರ 150 ನೇ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಏಕತಾ ದಿನವೆಂದು ಆಚರಿಸಲು ಮಹಾಲಿಂಗೇಶ್ವರ ದೇವಸ್ಥಾನದಿಂದ ಆರಂಭವಾದ ರಾ​‍್ಯಲಿಯು ನಡುಚೌಕಿ, ಡಬಲ್ ರಸ್ತೆ, ಅಂಬೇಡ್ಕರ ವೃತ್ತ, ಗಾಂಧಿವೃತ್ತ ಮಾರ್ಗವಾಗಿ ರಾಣಿ ಚನ್ನಮ್ಮ ವೃತ್ತದ ವರೆಗೆ ರಾ​‍್ಯಲಿ ನಡೆಸಲಾಯಿತು.  

ಈ ಸಂದರ್ಭದಲ್ಲಿ ಸ್ಥಳೀಯ ಕ್ರೈಮ್ ಪಿ.ಎಸ್‌.ಐ ಪುರಂದರ ಪೂಜಾರಿ ಮಾತನಾಡಿ ಅವರು ರಾಷ್ಟ್ರದ ಸ್ವಾತಂತ್ರ ಹಾಗೂ ಐಕ್ಯತೆ ಬಲಪಡಿಸಲು ದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಕೋಮು ಗಲಭೆೆ ತೆಡೆಗಟ್ಟುವುದಕ್ಕಾಗಿ ರಾಷ್ಟ್ರೀಯ ಐಕ್ಯತಾ ಸಪ್ತಾಹ ಆಚರಿಸಲಾಗುತ್ತದೆ. ಸರ್ಧಾರ ವಲ್ಲಭಾಯಿ ಪಟೇಲ ಕೇವಲ ಉಕ್ಕಿನ ಮನುಷ್ಯ ಮಾತ್ರವಾಗಿರಲಿಲ್ಲ. ಅವರು ಅತ್ಯಂತ ವಾತ್ಸವವಾದಿ ಮತ್ತು ಚಾಣಾಕ್ಷ ರಾಜಕಾರಣಿಯಾಗಿದ್ದರು. ಅವರು ಸನಾನತ ರಾಜ ನೀತಿಯ ಚತುರೋಪಾಯಗಳಾದ ಸಾಮ, ದಾನ ಬೇಧ, ದಂಡಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡವರು ಎಂದರು.  

ನಂತರ ಮಾತನಾಡಿದ ಲಯನ್ಸ ಕ್ಲಬ್ ಅರ್ಧಯಕ್ಷ ಸಿದ್ದು ನಕಾತಿ ರಾಷ್ಟ್ರದ ಐಕ್ಯತೆ ಸಮಗ್ರತೆ ಮತ್ತು ಬಧ್ರತೆಯನ್ನು ಕಾಪಾಡಲು ನನ್ನನ್ನು ಅರ​‍್ಿಸಿಕೊಳ್ಳುತ್ತೇನೆ ಮತ್ತು ನನ್ನ ದೇಶಭಾಂಧವರಲ್ಲಿ ಈ ಸಂದೇಶವನ್ನು ಸಾರಲು ಶ್ರಮಿಸುತ್ತೇನೆ ಎಂದು ನಾನಾ ಶ್ರದ್ದಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ, ಸರ್ದಾರ ವಲ್ಲಭಾಯಿ ಪಟೇಲರವರ ದೂರ ದೃಷ್ಟಿ ಮತ್ತು ಕಾರ್ಯಕ್ಷಮತೆಯಿಂದ ಸಾಧಿಸಿದ ರಾಷ್ಟ್ರೀಯ ಏಕಿಕರಣದ ಸ್ಪೂರ್ತಿಯನ್ನು ಕಾಪಾಡುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ ಎಂದು ರಾಷ್ಟ್ರದ ಆಂತರೀಕ ಭದ್ರತೆಯನ್ನು ಕಾತರಿಪಡಿಸಲು ನಾನು ನನ್ನದೆ ಆದ ಕೊಡುಗೆ ನೀಡುತ್ತೇನೆ ಎಂದು ಒಮ್ಮನಿಸಿನಿಂದ ಪ್ರತಿಜ್ಞೆ ಮಾಡುತ್ತೇನೆ ಎಂದು ಪ್ರತಿಜ್ಞಾವಿದಿ ಭೋಸಿದರು.  

ಈ ಸಂದರ್ಭದಲ್ಲಿ ಬಾಳಕೃಷ್ಣ ಮಾಳವಾದೆ,ಡಾ ವಿಶ್ವನಾಥ ಗುಂಡಾ, ಡಾ ಅಶೋಕ ದಿನ್ನಿಮನಿ, ಡಾ.ಎಂ.ಎಸ್ ಚನ್ನಾಳ, ಡಾ ಹರೀಶ ಬೆಳಗಲಿ,ಡಾ.ಅನುಪ ಹಂಚಿನಾಳ, ನ್ಯಾಯವಾದಿಗಳಾದ ಮಹಾಲಿಂಗಯ್ಯ ಮನ್ನಯ್ಯನವರಮಠ, ಮಹಾಲಿಂಗ ಮೂಡಲಗಿ, ಸುನೀಲ ಜಮಖಂಡಿ, ಮತ್ತು ಸುರೇಶ ಶೆಟ್ಟಿ, ಶ್ರೀಶೈಲ ಅಂಗಡಿ, ವಿವೇಕ ಡಪಳಾಪುರ, ಡಾ.ರಮೇಶ ಶೆಟ್ಟರ, ಮಹಾಂತೇಶ ತಿರಕನ್ನವರ, ಶಂಕರ ಕೋಳಿಗುಡ್ಡ, ಪ್ರಶಾಂತ ಅಂಗಡಿ,ರಾಜು ತಾಳಿಕೋಟಿ, ಮಲ್ಲಪ್ಪ ಯರಡ್ಡಿ, ಪ್ರಕಾಶ ತಾಳಿಕೋಟಿ, ಪ್ರವೀಣ ನಡಕಟ್ನಿ, ಗಜಾನನ ಜಿಡ್ಡಿಮನಿ.ವಿಷ್ಣುಗೌಡ ಪಾಟೀಲ, ಸತೀಶ ಅಂದೇನ್ನವರ, ಹಾಗೂ ಹೋಮಗಾರ್ಡ್ಸ ಮತ್ತು ಪೊಲೀಸ ಸಿಬ್ಬಂದಿ ಸೇರಿದಂತೆ ಹಲವರು  ಹಾಜರಿದ್ದರು. 


ಸುದ್ದಿ ಓದಿ